spot_img
spot_img

ಫೆಬ್ರವರಿ 20, ಭೀಷ್ಮಾಷ್ಟಮಿ ತನ್ನಿಮಿತ್ತ ಸಕಾಲಿಕ ನುಡಿನಮನ ಭವ್ಯಮೂರ್ತಿ ಭೀಷ್ಮ ಪಿತಾಮಹ

Must Read

- Advertisement -

ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ) ಸಂಸ್ಕೃತಿ ಚಿಂತಕರು

ಬಿಳಿಯ ಕೂದಲುಗಳ ಹರಹಿನ ಮೇಲೆ ಅಲಂಕೃತವಾದ ಶಿರದ ಕಿರೀಟ,ಜೋಲಿದ ಹುಬ್ಬು, ಕಣ್ಣುಗಳನ್ನೆ ಮುಚ್ಚುವುದೋ ಎಂಬಂತಿರುವ ಹುಬ್ಬಿನ ಮೇಲಿನ ಕೂದಲು ,ರಾಜಪೋಷಾಕು,ಕೈಯಲ್ಲಿ ಧನಸ್ಸು ಬಾಣ- ಇದು ಕಲಾವಿದರು ಸಾಮಾನ್ಯವಾಗಿ ಚಿತ್ರಿಸಿರುವ ಭೀಷ್ಮರ ಚಿತ್ರ. ಪರಮಭಾಗವತರ ಗೋಷ್ಠಿಯಲ್ಲಿ ಇಂದೂ ಭೀಷ್ಮರ ಹೆಸರು ಅಜರಾಮರವಾಗಿ ಅವರ ಉಜ್ವಲ ವಿಷ್ಣುಭಕ್ತಿಗೆ ಸ್ಮಾರಕವಾಗಿದೆ.ಯುದ್ದ ಭೂಮಿಯಲ್ಲಿ ಕೆಳಗುರುಳಿ, ಶರಶಯ್ಯೆಯಲ್ಲಿ ನರಳುತ್ತಿದ್ದಾಗ ಧರ್ಮಜನಿಗೆ ಉಪದೇಶಿಸಿದ ವಿಷ್ಣುಸಹಸ್ರನಾಮ ಸ್ತ್ರೋತ್ರಗಳಲ್ಲೆ ಶಿಖರಪ್ರಾಯವಾಗಿದೆ.

ಭೀಷ್ಮ ಕುರುವಂಶದ ಮಹೋನ್ನತ ವ್ಯಕ್ತಿ. ಭೀಷ್ಮ ಎಂದಾಗ ಭೀಷಣ ಎಂಬ ಪದ ಜ್ಞಾಪಕಕ್ಕೆ ಬಂದು ಭಯಂಕರ ಎಂಬ ಅರ್ಥ ಮನಸ್ಸಿನಲ್ಲಿ ಸುಳಿಯುತ್ತದೆ. ಆದರೆ ಭೀಷ್ಮನು ಭಯಂಕರನೂ ಅಲ್ಲ ,ಭೀಷಣನೂ ಅಲ್ಲ. ರಣಭಯಂಕರನಾದ ಭೀಷ್ಮನು ಶತ್ರುಗಳಿಗೆ ಭೀಷಣನಾಗಿದ್ದನೆ ಹೊರತು ಇತರರಿಗಲ್ಲ. ಧರ್ಮ- ರಾಜಕೀಯ ಪ್ರಜ್ಞೆ , ಆಡಳಿತಾನುಭವ ,ಸತ್ಯನಿಷ್ಠೆ , ಭಾರತೀಯ ಸಂಸ್ಕೃತಿಯ ಪೂರ್ಣಪ್ರಜ್ಞೆ , ಔನ್ನತ್ಯದಲ್ಲಿ ಭೀಷ್ಮನನ್ನು ಮೀರಿಸುವವರಾರೂ ಇರಲಿಲ್ಲ.

- Advertisement -

ಗಂಗಾಪುತ್ರ ಭೀಷ್ಮ

ಚಂದ್ರವಂಶ ದ್ವಾಪರ ಯುಗದಲ್ಲಿ ರಾಜ್ಯವಾಳಿದ ಅರಸು ವಂಶಗಳಲ್ಲಿ ಬಹಳ ಪ್ರಸಿದ್ಧವಾದುದು. ಚಂದ್ರವಂಶದಲ್ಲಿ ಶಂತನು ಹಸ್ತಿನಾವತಿಯಲ್ಲಿ ರಾಜ್ಯಭಾರ ಮಾಡುತ್ತಿದ್ದ. ಗಂಗೆ ಆತನ ಹೆಂಡತಿ. ಗಂಗಾಪುತ್ರನೇ ದೇವವ್ರತ, ತಂದೆ ಶಂತುನುವಿನಂತೆಯೇ ದೇವವ್ರತನೂ ಸತ್ಯನಿಷ್ಠ, ಪಿತೃವಾಕ್ಯ ಪರಿಪಾಲಕ. ಒಮ್ಮೆ ಶಂತನು ಮಹಾರಾಜ ಯಮುನಾ ನದಿಯ ದಂಡೆಯಲ್ಲಿ ಸಂಚರಿಸುತ್ತಿದ್ದಾಗ ದಾಶರಾಜನ ಮಗಳು ಸತ್ಯವತಿಯನ್ನು ಕಂಡ. ಸತ್ಯವತಿಗೆ ಯೋಜನಗಂಧಿ ಎಂತಲೂ ಕರೆಯುತ್ತಾರೆ. ಅವಳನ್ನು ಮಹಾರಾಜ ಮೋಹಿಸಿದ, ಮದುವೆಯಾಗಲು ಬಯಸಿದ. ತಂದೆ ಒಪ್ಪಿದರೆ ನನ್ನದೇನು ಅಭ್ಯಂತರವಿಲ್ಲ ಎಂದಳಾಕೆ. ಶಂತನು ದಾಶರಾಜನ ಬಳಿ ಬಂದ. ಮನದ ಇಂಗಿತವನ್ನು ವ್ಯಕ್ತಪಡಿಸಿದ. ಆದರೆ ದಾಶರಾಜ ಒಂದು ಷರತ್ತನ್ನು ಮುಂದಿಟ್ಟ. ತನ್ನ ಮಗಳಿಂದ ಹುಟ್ಟುವ ಮಗನಿಗೇ ರಾಜ್ಯ ಪಟ್ಟಾಭಿಷೇಕವಾಗಬೇಕು ಎನ್ನುವುದು ಅವನ ಬಯಕೆಯಾಗಿತ್ತು. ದಾಶರಾಜನ ಮಾತಿಗೆ ಸಮ್ಮತಿ ಸೂಚಿಸದೆ ಶಂತನು ಹಸ್ತಿನಾಪುರಕ್ಕೆ ಹಿಂದಿರುಗಿದ. ತಂದೆಯ ಮನೋವ್ಯಾಕುಲತೆಯನ್ನು ಸಾರಥಿಯ ಮೂಲಕ ಅರ್ಥ ಮಾಡಿಕೊಂಡ ದೇವವ್ರತ ದಾಶರಾಜನ ಮನೆಗೆ ತೆರಳುತ್ತಾನೆ. ಅವನೆದುರು ಪ್ರತಿಜ್ಞೆ ಮಾಡುತ್ತಾನೆ. ತನ್ನ ಸಿಂಹಾಸನವನ್ನು ತಂದೆಗೆ ಬಿಟ್ಟುಕೊಟ್ಟಿದ್ದೇನೆ ಎನ್ನುವುದೇ ಮೊದಲ ಪ್ರತಿಜ್ಞೆ. ಆದರೂ ದಾಶರಾಜ ಸುಮ್ಮನಾಗಲಿಲ್ಲ. ನೀನೇನೋ ನುಡಿದಂತೆ ನಡೆದುಕೊಳ್ಳುವವನು. ಆದರೆ ಮುಂದೆ ನಿನಗೊಬ್ಬ ಮಗನಾದರೆ? ಎಂದು ಅಪಸ್ವರವನ್ನು ಎತ್ತುತ್ತಾನೆ. ಆಗ ದೇವವ್ರತ ಮದುವೆ ಆಗುವುದೇ ಇಲ್ಲವೆಂದು ಪ್ರತಿಜ್ಞೆ ಮಾಡುತ್ತಾನೆ. ಹೀಗೆ ಸತ್ಯವತಿಯೊಂದಿಗೆ ಶಂತನುವಿನ ಮದುವೆ ನಡೆಯುತ್ತದೆ. ಮಗನ ಪ್ರತಿಜ್ಞೆಯಿಂದ ಸಂತುಷ್ಟನಾದ ಶಂತನು ಮಗನಿಗೆ ಭೀಷ್ಮ ಎಂದೇ ಸಂಬೋಧಿಸುತ್ತಾನೆ. ನೀನು ಬಯಸಿದಾಗ ಮಾತ್ರ ಸಾವು ಬರಲಿ. ನೀನು ಇಚ್ಛಾ ಮರಣಿಯಾಗು ಎಂದು ವರವನ್ನು ಕರುಣಿಸುತ್ತಾನೆ.

ದೈವ –ಮಾನವಾಂಶಗಳೆರಡನ್ನೂ ಬೆರೆಸಿಕೊಂಡ ಒಬ್ಬ ಆದರ್ಶವಾದಿ

ಸತ್ಯವತಿಗೆ ಇಬ್ಬರು ಮಕ್ಕಳು. ಅವರೇ ಚಿತ್ರಾಂಗದ ಮತ್ತು ವಿಚಿತ್ರವೀರ್ಯ. ವಿಚಿತ್ರ ವೀರ್ಯನಿಗೆ ಹೆಣ್ಣು ಹುಡುಕಲು ಭೀಷ್ಮ ಕಾಶಿರಾಜನ ಅರಮನೆಗೆ ಬರುತ್ತಾನೆ. ಕಾಶಿರಾಜನಿಗೋ ಮೂವರು ಪುತ್ರಿಯರು. ಅವರಲ್ಲೊಬ್ಬಳು ಅಂಬೆ. ಅಂಬೆಗೆ ಸಾಲ್ವರಾಜನ ಮೇಲೆ ವ್ಯಾಮೋಹ. ಆದರೆ ಭೀಷ್ಮನೊಂದಿಗೆ ನಡೆದ ಯುದ್ಧದಲ್ಲಿ ಸೋತ ಸಾಲ್ವರಾಜ ಅಂಬೆಯನ್ನು ತಿರಸ್ಕರಿಸುತ್ತಾನೆ. ಅಲ್ಲಿಯೂ ಸಲ್ಲದೆ, ಇಲ್ಲಿಯೂ ಸಲ್ಲದ ಅಂಬೆ ಅಪಮಾನಿತಳಾಗಿ ಅಗ್ನಿಯನ್ನು ಪ್ರವೇಶಿಸುತ್ತಾಳೆ. ಮುಂದೆ ಭೀಷ್ಮರ ವಧೆಗಾಗಿ ಶಿಖಂಡಿಯಾಗಿ ಜನಿಸುತ್ತಾಳೆ. ಇತ್ತ ಅಂಬಿಕೆ, ಅಂಬಾಲಿಕೆಯರಿಗೆ ಮಕ್ಕಳಾಗುತ್ತವೆ.

- Advertisement -

ಅವರೇ ಕ್ರಮವಾಗಿ ಧೃತರಾಷ್ಟ್ರ ಮತ್ತು ಪಾಂಡು. ಧೃತರಾಷ್ಟ್ರನು ಹುಟ್ಟು ಕುರುಡನಾದುದರಿಂದ ಪಾಂಡುವಿಗೆ ಭೀಷ್ಮರು ಪಟ್ಟ ಕಟ್ಟುತ್ತಾರೆ. ಪಾಂಡುವಿನ ನಂತರ ಧೃತರಾಷ್ಟ್ರನೇ ಹಸ್ತಿನಾಪುರಕ್ಕೆ ರಾಜನಾಗುತ್ತಾನೆ. ಆದರೆ ಕೌರವರು ಮತ್ತು ಪಾಂಡವರ ನಡುವೆ ದಾಯಾದಿ ಕಲಹ. ಕೌರವರ ಸ್ವಾರ್ಥದ ಕಾರಣ ಕುರುಕ್ಷೇತ್ರ ಯುದ್ಧವಾಗುತ್ತದೆ. ಭೀಷ್ಮರು ಸೇನಾಧಿಪತಿಯಾಗಿ ಹನ್ನೊಂದು ಅಕ್ಷೌಹಿಣಿ ಸೇನೆಯನ್ನು ಮುನ್ನಡೆಸುತ್ತಾರೆ. ಹೀಗೆ ಒಂಬತ್ತು ದಿವಸಗಳು ಕಳೆದುಹೋಗುತ್ತವೆ.

ಭೀಷ್ಮರ ಪರಾಕ್ರಮದಿಂದ ನಡುಗಿದ ಪಾಂಡವರು ಶ್ರೀಕೃಷ್ಣನ ಸಲಹೆ ಕೇಳುತ್ತಾರೆ. ಶ್ರೀಕೃಷ್ಣನ ಸಲಹೆಯಂತೆ ಮರುದಿನ ಅರ್ಜುನ ಶಿಖಂಡಿಯನ್ನು ಮುಂದಿಟ್ಟುಕೊಂಡು ಯುದ್ಧಭೂಮಿಗೆ ಬರುತ್ತಾನೆ. ಭೀಷ್ಮರು ಶಸ್ತ್ರತ್ಯಾಗ ಮಾಡುತ್ತಾರೆ. ಅರ್ಜುನನ ಬಾಣಗಳು ಅವರನ್ನು ನಿತ್ರಾಣರನ್ನಾಗಿ ಮಾಡಿರುತ್ತವೆ. ಅರ್ಜುನ ನಿರ್ಮಿಸಿದ ಶರಶಯ್ಯೆಯ ಮೇಲೆ ಮಲಗುತ್ತಾರೆ. ಅವರು ಉತ್ತರಾಯಣ ಪುಣ್ಯಕಾಲಕ್ಕೆ ಎದುರು ನೋಡುತ್ತಿರುತ್ತಾರೆ. ಇತ್ತ ಭೀಷ್ಮರ ಮಾತನ್ನು ಧಿಕ್ಕರಿಸಿದ ದುರ್ಯೋಧನ ಹತನಾಗುತ್ತಾನೆ. ಕುರುವಂಶ ನಿರ್ನಾಮವಾಗುತ್ತದೆ. ಧರ್ಮರಾಜನಿಗೆ ಪಟ್ಟಾಭಿಷೇಕವಾಗುತ್ತದೆ. ಧರ್ಮರಾಜ ಶ್ರೀಕೃಷ್ಣನ ಸಹಿತ ಭೀಷ್ಮರ ದರ್ಶನಕ್ಕೆ ಬರುತ್ತಾನೆ. ಭೀಷ್ಮರು ಧರ್ಮರಾಜನನ್ನು ಹರಸುತ್ತಾರೆ. ಧರ್ಮಪಾಲನೆ ಮಾಡು ಎಂಬ ಸಂದೇಶ ನೀಡುತ್ತಾರೆ. ಶ್ರೀಕೃಷ್ಣನನ್ನು ಕಣ್ತುಂಬ ನೋಡುತ್ತಾರೆ. ನೀನು ಅಪ್ಪಣೆ ಕೊಟ್ಟರೆ ನಾನಿನ್ನು ಹೊರಡುವೆ ಎನ್ನುತ್ತಾರೆ. ಭೀಷ್ಮರು ನಿರೀಕ್ಷಿಸುತ್ತಿದ್ದ ಸಮಯ ಬರುತ್ತದೆ. ಭೀಷ್ಮರ ಪ್ರಾಣ ಶ್ರೀಮನ್ನಾರಾಯಣನ ಪಾದಗಳಲ್ಲಿ ಲೀನಾವಾಗುತ್ತದೆ.

ಕುರುಕುಲಪಿತಾಮಹರೆಂದು ಖ್ಯಾತರಾದ ಭೀಷ್ಮಾಚಾರ್ಯರು ಶೌರ್ಯ, ಪರಾಕ್ರಮಗಳಿಗೆ ಖ್ಯಾತರಾದಂತೆಯೇ ಭಗವದ್ಭಕ್ತಿಗೂ ಖ್ಯಾತರಾಗಿದ್ದರೆಂಬುದು ಶ್ರೀ ಮಹಾಭಾರತದಿಂದ ವಿದಿತವಾಗುತ್ತದೆ. ಮಹಾಭಾರತ ಯುದ್ಧದಲ್ಲಿ ಹತ್ತು ದಿನಗಳ ಕಾಲಸೇನಾಧಿಪತಿಯಾಗಿದ್ದು ಕೊಂಡು ಸೈನ್ಯವನ್ನು ಯಥಾಯೋಗ್ಯವಾಗಿ ನಿಯೋಜಿಸುತ್ತ ಸಮರ್ಥವಾಗಿ ಹೋರಾಡಿದ ಮಹಾವೀರ.

ಪರಿಸ್ಥಿಯ ಒತ್ತಡದಿಂದ ಮದುವೆಯಾಗದೆ, ರಾಜ್ಯವನ್ನು ಆಳುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ ಭೀಷ್ಮರಿಗೆ ಸಂಸಾರ ತಾಪತ್ರಯ ಎಂಬುದು ಬಿಡಲೇ ಇಲ್ಲ. ಶಂತನು-ಗಂಗೆಯರ ಮಗ ಭೀಷ್ಮ ದೈವ –ಮಾನವಾಂಶಗಳೆರಡನ್ನೂ ಬೆರೆಸಿಕೊಂಡ ಒಬ್ಬ ಆದರ್ಶವಾದಿ. ಅಪ್ಪನಿಗಾಗಿಯೇ ಬ್ರಹ್ಮಚರ್ಯವ್ರತವನ್ನು ಕೈಗೊಂಡು ದೇವವ್ರತನಾಗಿದ್ದವನು ಭೀಷ್ಮನಾಗುತ್ತಾನೆ.

ಶಂತನು ಕುವರ

ಭೀಷ್ಮನ ಹುಟ್ಟಿಗೆ ಭೂಮಿಕೆಯಾಗಿ ಶಂತನು-ಗಂಗೆಯರ ಅವತಾರಕ್ಕೆ ಕಾರಣವಾದ ಘಟನೆಯು ವಿಚಿತ್ರವೆನಿಸಿದರೂ ಮಹಾಭಾರತ ಅದನ್ನು ಹೀಗೆ ದಾಖಲಿಸುತ್ತದೆ. ಇಕ್ಷ್ವಾಕು ಕುಲದಲ್ಲಿ ಮಹಾಭಿಷತ್ ಎಂಬೊಬ್ಬ ರಾಜನಿದ್ದ. ಧಾರ್ಮಿಕ, ಪ್ರಜಾನುರಾಗಿ, ಪರಾಕ್ರಮಿ, ನೂರು ಅಶ್ವಮೇಧ ಮಾಡಿ ಅಷ್ಟೇ ವಾಜಪೇಯ ಯಾಗಗಳನ್ನು ನಡೆಸಿ ಇಂದ್ರನಿಗೆ ಪ್ರೀತಿಪಾತ್ರನಾಗಿದ್ದ. ಭೂಲೋಕವಾಸದ ನಂತರ ದೇವೇಂದ್ರನು ಇವನನ್ನು ತನ್ನ ಬಳಿಯೇ ಸ್ವರ್ಗದಲ್ಲಿ ಉಳಿಸಿಕೊಂಡ.

ಒಮ್ಮೆ ಎಲ್ಲಾ ದೇವತೆಗಳೂ ಬ್ರಹ್ಮನನನು ಕಾಣಲು ಹೋಗಿದ್ದಾಗ ಮಹಾಭಿಷಕ್ ಸಭೆಯಲ್ಲಿ ಆಸೀನನಾಗಿದ್ದ. ಅದೇ ಸಮಯಕ್ಕೆ ಅದ್ಯಾವುದೋ ಕೆಲಸದ ನಿಮಿತ್ತ ನದೀ ಅಭಿಮಾನಿ ದೇವತೆ ಗಂಗಾದೇವಿಯೂ ಅಲ್ಲಿಗೆ ಬಂದಳು. ಗಂಗೆ ಸಹಜ ಸುಂದರಿ. ಬೆಳದಿಂಗಳನ್ನೇ ನೇಯ್ದು ಹೊದ್ದಂತೆ ಶುಭ್ರ ಬಿಳಿ ವಸ್ತ್ರ ಧರಿಸಿದ್ದಳು. ತಂಪಾಗಿ ಬೀಸಿದ ಗಾಳಿಗೆ ಅವಳ ದುಕೂಲವೂ ಕೊಂಚ ಹಾರಿತು. ಅಲ್ಲಿ ನೆರೆದಿದ್ದ ದೇವತೆಗಳೆಲ್ಲ ಅವಳ ಮೇಲಿನ ಗೌರವದಿಂದ ತಲೆ ತಗ್ಗಿಸಿ ನಿಂತರು. ಮಹಾಭಿಷಕ್ ಮಾತ್ರ ಅವಳನ್ನೇ ನೋಡುತ್ತಿದ್ದ. ಅವನ ಚಿತ್ತ ಚಂಚಲವಾಗಿತ್ತು. ಇಬ್ಬರೂ ಮಾನುಷ ದೇಹಧಾರಿಗಳಾಗಿ ಭೂಮಿಯಲ್ಲಿ ಹುಟ್ಟಿಬೇಕೆಂಬುದು.

ಮಹಾಭಿಷಕ್ ಸಹ ವರುಣನೇ. ಅವನು ತನ್ನ ಮಡದಿ ಗಂಗೆಯನ್ನು ಕಂಡರೆ ತಪ್ಪೇನು? ಇರಲಿ, ಅದು ಕಾಲೋಚಿತವಾಗಿರಲಿಲ್ಲ. ಮುಂದೆ ನಡೆಯಬೇಕಿದ್ದ ಕಾರ್ಯಕ್ಕೆ ಇದು ಪೀಠಿಕೆ!

ಮಹಾಭಿಷಕ್‍ನ ತಂದೆ ಕುರುಕುಲದ ರಾಜ ಪ್ರತೀಪ. ಶಾಪಗ್ರಸ್ತ ಗಂಗೆ ಮುಂದೇಣು ಎಂದು ತಿಳಿಯದೆ ನಡೆದಿದ್ದಳು, ಆಗ ಅವಳಿಗೆ ಅಷ್ಟ ವಸುಗಳು ಎದುರಾದರು. ತಮ್ಮ ಸ್ಥಿತಿಯನ್ನು ಗಂಗೆಯ ಬಳಿ ಹೇಳಿಕೊಂಡರು. ವಸಿಷ್ಟರ ಹಸು ಕದ್ದು ಮಾಡಿದ ತಪ್ಪಿಗಾಗಿ ಭೂಮಿಯಲ್ಲಿ ಜನ್ಮವೆತ್ತಬೇಕಿದೆ. ನೀನೇ ನಮಗೆ ತಾಯಿಯಾಗಬೇಕು. ಮಹಾಭಿಷಕ್ ಮುಂದೆ ಶಂತನುವಾಗಿ ಜನಿಸಲಿದ್ದಾನೆ ಎಂದರು. ಅಷ್ಟವಸುಗಳ ಮಾತಿಗೆ ಗಂಗೆ ಒಪ್ಪಿದಳು. ಆ ಕೂಡಲೇ ವಸುಗಳು ಒಂದು ಪ್ರಾರ್ಥನೆಯನ್ನು ಗಂಗೆಯ ಮುಂದಿಟ್ಟರು. ಮನುಷ್ಯ ದೇಹದೊಳಗೆ ನಾವು ಬಹಳ ಹೊತ್ತು ಇರಲು ಬಯಸುವುದಿಲ್ಲ. ಆದ್ದರಿಂದ ನಾವು ಹುಟ್ಟಿದ ಕೂಡಲೇ ನೀನು ನಮ್ಮನ್ನು ಗಂಗಾ ಪ್ರವಾಹದಲ್ಲಿ ಮುಳುಗಿಸಬೇಕು ಎಂದರು. ಗಂಗೆ ಒಪ್ಪಲಿಲ್ಲ. ರಾಜನಿಗೆ ಮಗ ಬೇಕೆಂಬ ಅಪೇಕ್ಷೆ ಇರುವುದಿಲ್ಲವೇ? ಎಂದು ಪ್ರಶ್ನಿಸಿದಳು.

ನಾವು ಎಂಟೂ ಮಂದಿಯೂ ನಿನ್ನಲ್ಲಿ ಹುಟ್ಟುತ್ತೇವೆ. ನೀನು ಏಳು ಮಂದಿಯನ್ನು ಮುಳುಗಿಸು. ಅದು ನಮಗೆ ಉಪಕಾರವೇ. ಎಂಟನೆಯ ಮಗನಾಗಿ ದ್ಯು ಎಂಬ ಹೆಸರಿನ ವಸು ಹುಟ್ಟುವನು. ಇವನನ್ನು ಮಾತ್ರ ರಾಜನಿಗಾಗಿ ಕೊಲ್ಲದೇ ಉಳಿಸು ಎಂದರು.

ಹೀಗೆ ಎಂಟೂ ಮಂದಿಯೂ ಗಂಗೆಯನ್ನು ಪ್ರಾರ್ಥಿಸಿದರು. ಗಂಗೆ ಸಮ್ಮತಿಸಿದಳು. ವಾಸ್ತವವಾಗಿ ವಸಿಷ್ಠರು ವಸುಗಳಿಗೆ ಶಪಿಸಿದ್ದೇ ಹಾಗೆ. ಹಸುವನ್ನು ಕದಿಯಲು ಸಂಚು ಮಾಡಿದ ದ್ಯು. ಅವನ ಮಡದಿಯೊಂದಿಗೆ ಯೋಜನೆ ರೂಪಿಸಿದ್ದ. ಹಾಗಾಗಿ ದ್ಯೂಗೆ ಶಿಕ್ಷೆಯ ಮಟ್ಟ ಹೆಚ್ಚು. ಮನುಷ್ಯ ದೇಹದಲ್ಲೇ ಬಹಳ ಕಾಲ ಬಾಳಬೇಕೆಂಬುದು. ಜೊತೆಗೆ ಹೆಂಡತಿಗಾಗಿ ಕದಿಯಲು ಮುಂದಾದ್ದರಿಂದ ಹೆಂಡತಿಯ ವಿಯೋಗವಿರಲಿ ಎಂಬುದೂ ಅವನಿಗೆ ಮತ್ತೊಂದು ಶಿಕ್ಷೆ. ಅವನಿಗೆ ಸಹಕರಿಸಿದ ಏಳು ಮಂದಿಗೂ ಶಿಕ್ಷೆಯ ಮಟ್ಟ ಕಡಿಮ. ಆದ್ದರಿಂದ ಅವರಿಗೆ ಹುಟ್ಟಿದ ಕೂಡಲೇ ಶಾಪವಿಮೋಚನೆ. ಅದೂ ತಾಯಿಯಿಂದಲೇ! ಇದಿಷ್ಟು ಪೀಠಿಕೆ.

ಪ್ರತೀಪನೆಂಬ ರಾಜನು ಸತ್ ಸಂತಾನವನ್ನು ಅಪೇಕ್ಷಿಸಿ ನಾಡು ತೊರೆದು ಕಾಡು ಸೇರಿ ತಪಸ್ಸಿನಲ್ಲಿ ಮಗ್ನನಾಗಿದ್ದ. ನದೀ ತೀರದಲ್ಲಿ ವಾಸ್ತವ್ಯ ಹೂಡಿದ್ದ. ರಾಜನು ಧ್ಯಾನ ನಿರತನಾಗಿದ್ದ. ನದಿಯಿಂದ ಎದ್ದು ಬಂದಳು ಗಂಗೆ. ನೇರ ಧ್ಯಾನದಲ್ಲಿದ್ದ ರಾಜನೆಡೆಗೆ ಬಂದಳು. ಅವನ ತೊಡೆಯೇರಿ ಕುಳಿತಳು. ಪ್ರತೀಪರಾಜನು ಕೆಲಹೊತ್ತಿನ ಬಳಿಕ ಪ್ರಜ್ಞೆ ತಿಳಿದು ಕಣ್ತೆರೆದು ನೋಡಿದ. ತೊಡೆಯ ಮೇಲೆ ಸುಂದರಿಯೋರ್ವಳು ಕುಳಿತಿದ್ದಾಳೆ. ರಾಜನಿಗೆ ಆಶ್ಚರ್ಯ. ಬಹಳ ಶಾಂತಚಿತ್ತದಲ್ಲೇ ಪ್ರಶ್ನಿಸಿದ. ಯುವತಿ ಯಾರು ನೀನು? ಹೀಗೇಕೆ ತೊಡೆಯೇರಿ ಕುಳಿತಿದ್ದಿಯಾ? ನಿನಗೇನಾಗಬೇಕು?

ವಿವಾಹ ಆಗಬೇಕೆಂದು ಮನಸ್ಸಾಗಿದೆ ಪ್ರತೀಪನ ಮನಸ್ಸು ವಿಕಾರಗೊಳ್ಳಲಿಲ್ಲ. ಪ್ರಸನ್ನನಾಗಿ ಹೇಳಿದ. ನನಗೆ ಈಗಾಗಲೇ ಹೆಂಡತಿ ಇದ್ದಾಳೆ. ನೀನು ಬಲತೊಡೆಯ ಮೇಲೆ ಕುಳಿತಿರುವೆ. ಅದು ಮಕ್ಕಳು, ಸೊಸೆಯೂ ಕೂಡುವ ಜಾಗ. ನನಗೆ ಹುಟ್ಟಲಿರುವ ಮಗನಿಗೆ ನೀನು ಮಡದಿಯಾಗಬಹುದು. ಮಗು! ನನಗೆ ಮಗನು ಹುಟ್ಟಿ ಬೆಳೆವವರೆಗೆ ನೀನು ಕಾಯಬೇಕು. ನೀನು ನನಗೆ ಸೊಸೆ ಎಂಬುದ ನಿಶ್ಚಯ.

ಗಂಗೆಯ ಸಂತೋಷವಾಯಿತು. ನಾನು ಏನೇ ನಿರ್ಬಂಧ ಹಾಕಿದರೂ ಪ್ರಶ್ನೆ ಮಾಡದೆ ನಿನ್ನ ಮಗನು ನನ್ನನ್ನು ವರಿಸುವಂತೆ ನೀನು ಅವನಿಗೆ ವಿಧಿಸಬೇಕು ಎಂದು ಪ್ರಾರ್ಥಿಸಿದಳು. ಪ್ರತೀಪನು ಅದಕ್ಕೆ ಒಪ್ಪಿದ. ಕೆಲ ದಿನಗಳ ಬಳಿಕ ಪ್ರತೀಪನಿಗೆ ಮಗ ಹುಟ್ಟಿದ. ಅವನೇ ಶಂತನು. ಶಂತನು ಬೆಳೆದು ಯುವಕನಾದಾಗ ಪ್ರತೀಪ ಅವನಿಗೆ ವಿವಾಹದ ವಿಚಾರ ತಿಳಿಸಿದ. ಯಾವುದನ್ನೂ ಪ್ರಶ್ನಿಸದೆ ನಿನ್ನನ್ನು ಅರಸಿ ಬರುವವಳನ್ನು ಮದುವೆಯಾಗು ಎಂದ. ಹೀಗೆ ಒಮ್ಮೆ ಕಾಡಿನಲ್ಲಿ ಬೇಟೆಗೆ ಬಂದಿದ್ದ ಶಂತನುವನ್ನು ಗಂಗೆ ಕಂಡಳು. ಇವನಿಗೆ ಅವಳಲ್ಲಿ ಮೋಹವುಂಟಾಯಿತು. ತಂದೆಯ ಮಾತೂ ನೆನಪಿತ್ತು. ಮದುವೆಯಾದ.

ಹುಟ್ಟಿದ ಮೊದಲ ಷರತ್ತು ನೆನೆಪಿತ್ತು. ಪ್ರಶ್ನಿಸಲಿಲ್ಲ. ನೋವನ್ನು ನುಂಗಿಕೊಂಡ. ಹೀಗೆ ಏಳು ಬಾರಿ ನಡೆಯಿತು. ಇನ್ನು ಮಕ್ಕಳು ಸಾಲಾಗಿ ಸಾಯುವುದನ್ನು ನೋಡಲಾಗದೆ ಎಂಟನೆಯ ಬಾರಿ ತಡೆದ. ಪ್ರಶ್ನಿಸಿದ. ಗಂಗೆಯು ಹಿಂದೆ ನಡೆದುದೆಲ್ಲವನ್ನೂ ಶಂತನುವಿಗೆ ತಿಳಿಸಿದಳು. ಕಡೆಯ ಮಗುವನ್ನು ರಾಜನಿಗಾಗಿ ಉಳಿಸಿದಳು. ಅವನೇ ದೇವವ್ರತ. ಭೀಷ್ಮನೆಂದು ಹೆಸರಾದವ. ವಿವಾಹದ ಯೋಗವಿಲ್ಲದೇ ಬ್ರಹ್ಮಚಾರಿಯಾಗಿ ಬಾಳಿದ. ತನ್ನ ಮಡದಿಯೇ ಅಂಬೆಯಾಗಿ ಹುಟ್ಟಿದ್ದಳು. ಆದರೆ ಅವನು ಅಂಬೆಯನ್ನು ವರಿಸಲಾಗಲಿಲ್ಲ. ಭೀಷ್ಮನಿಂದಲೇ ನೊಂದ ಅಂಬೆಯು ಅವನಲ್ಲಿ ಮಗಳಾಗಿ ಹುಟ್ಟಿದಳು. ಆದರೆ ಅವನು ಅಂಬೆಯನ್ನು ವರಿಸಲಾಗಲಿಲ್ಲ.

ಭೀಷ್ಮನಿಂದಲೇ ನೊಂದ ಅಂಬೆಯು ಅವನಲ್ಲಿ ದ್ವೇಷ ಬೆಳೆಸಿಕೊಂಡಳು. ದೇಹತ್ಯಾಗ ಮಾಡಿ ದ್ರುಪದನ ಮಗಳಾಗಿ ಹುಟ್ಟಿದಳು. ಗಂಧರ್ವನ ಶರೀರ ಸೇರಿ ಗಂಡು ದೇಹ ಪಡೆದಳು. ಹೆಣ್ಣಾಗಿದ್ದವಳು ಗಂಡಾದಳು. ಕುರುಕ್ಷೇತ್ರ ಯುದ್ಧದಲ್ಲಿ ಪಾಲ್ಗೊಂಡು ಭೀಷ್ಮನ ದೇಹತ್ಯಾಗಕ್ಕೆ ಕಾರಣಳಾದ ಶಿಖಂಡಿಯೇ ಈಕೆ. ಮೇಲ್ನೋಟಕ್ಕೆ ಶಿಖಂಡಿ ಭೀಷ್ಮನನ್ನು ದ್ವೇಷಿಸಿದಳು. ಆದರೆ ದೈವ ನಿಯತಿಯೇ ಬೇರೆ. ಪತಿಯ ಶಾಪ ವಿಮೋಚನೆಗೆ ಅವಳು ಸಹಕರಿಸಿದ ರೀತಿ ಇದು.

ಹೀಗೆ ಪ್ರತಿಯೊಂದು ಘಟನೆಯ ಹಿಂದೆ ಕಾಣದ ಕೈಗಳ ನಿಯಂತ್ರಣವಿರುತ್ತದೆ. ನಮಗೆ ಕಂಡಿದ್ದೇ ಸತ್ಯವಲ್ಲ. ಕಾಣದ್ದೆಲ್ಲಾ ಸುಳ್ಳೂ ಅಲ್ಲ. ಸತ್ಯವನ್ನು ಅರಿಯುವ ಸಂಕಲ್ಪವಿದ್ದರೆ, ಆ ಪ್ರಯತ್ನಕ್ಕೆ ಸುಳ್ಳು ತೆರೆದುಕೊಳ್ಳುತ್ತದೆ. ಮಹಾಭಾರತ ನಿಗೂಢಗಳನ್ನು ಮೈಗೂಡಿಸಿಕೊಂಡ ಗ್ರಂಥ. ಗೂಢವನ್ನು ಗಾಢವಾಗಿ ಅರಿವ ಮನಸ್ಸು ಬೇಕಷ್ಟೇ.
ಹುಟ್ಟಿದ್ದು ಕ್ಷತ್ರಿಯಕುಲದಲ್ಲಿ ; ವಿದ್ಯೆಕಲಿತದ್ದು ಪರುಶರಾಮರೂಪಿ ಭಗವಂತನಲ್ಲಿ ;ಕೊನೆಗಾಲ ಕಳೇದದ್ದು ಶಾಸ್ತ್ರೋಪದೇಶಕನಾಗಿ ಆಚಾರ್ಯನಾಗಿ ;ಆದ್ದರಿಂದಲೇ ಭೀಷ್ಮಾಚಾರ್ಯ ಎಂದು ಪ್ರಸಿದ್ದಿ . ಭೀಷ್ಮಾಚಾರ್ಯರು ಇಹಲೋಕ ತ್ಯಜಿಸಿದ ಪರಮಪವಿತ್ರದಿನ ಮಾಘ ಶುದ್ಧ ಅಷ್ಟಮಿ , ಧಾರ್ಮಿಕ ನೈತಿಕ ವಿಶ್ವಕೋಶವನ್ನೇ ನೀಡಿದ ಅಪೂರ್ವ ವ್ಯಕ್ತಿತ್ವದ ಅವರ ಋಣ ಎಂದಿಗೂ ತೀರಿಸಲಾಗದಷ್ಟು ಅಗಾಧವಾದುದು. ಈ ದಿನ ಸರ್ವರೂ ಭೀಷ್ಮನಿಗೆ ತರ್ಪಣವನ್ನು ಕೊಡಬೇಕು .

ಗಂಗಾಪುತ್ರಾಯ ಭೀಷ್ಮಾಯ ಆಜನ್ಮಬ್ರಹ್ಮಚಾರಿಣೇ |
ಅಪುತ್ರಾಯ ಜಲಂ ದದ್ಯಾಂ ನಮೋ ಭೀಷ್ಮಾಯ ವರ್ಮಣೇ |
ಭೀಷ್ಮ: ಶಾಂತನವೋ ವೀರ: ಸತ್ಯವಾದೀ ಜಿತೇಂದ್ರಿಯ: |
ಆಭೀರದ್ಭಿರವಾಪ್ನೋತು ಪುತ್ರಪೌತ್ರೋಚಿತಾಂ ಕ್ರಿಯಾಮ್ |
ವೈಯಾಘ್ರಪಾದಗೋತ್ರಾಯ ಸಾಂಕೃತ್ಯಪ್ರವರಾಯ ಚ |
ಅಪುತ್ರಾಯ ದದಾಮ್ಯೇತಜ್ಜಲಂ ಭೀಷ್ಮಾಯ ವರ್ಮಿಣೇ |
ವಸೂನಾಮವತಾರಾಯ ಶಂತನೋರಾತ್ಮಜಾಯ ಚ |
ಅರ್ಘ್ಯಂ ದದಾಮಿ ಭೀಷ್ಮಾಯ ಅಬಾಲಬ್ರಹ್ಮಚಾರಿಣೇ |

ಗಂಗಪುತ್ರ ಭೀಷ್ಮ

ಚಂದ್ರವಂಶ ದ್ವಾಪರ ಯುಗದಲ್ಲಿ ರಾಜ್ಯವಾಳಿದ ಅರಸು ವಂಶಗಳಲ್ಲಿ ಬಹಳ ಪ್ರಸಿದ್ಧವಾದುದು. ಚಂದ್ರವಂಶದಲ್ಲಿ ಶಂತನು ಹಸ್ತಿನಾವತಿಯಲ್ಲಿ ರಾಜ್ಯಭಾರ ಮಾಡುತ್ತಿದ್ದ. ಗಂಗೆ ಆತನ ಹೆಂಡತಿ. ಗಂಗಾಪುತ್ರನೇ ದೇವವ್ರತ, ತಂದೆ ಶಂತುನುವಿನಂತೆಯೇ ದೇವವ್ರತನೂ ಸತ್ಯನಿಷ್ಠ, ಪಿತೃವಾಕ್ಯ ಪರಿಪಾಲಕ. ಒಮ್ಮೆ ಶಂತನು ಮಹಾರಾಜ ಯಮುನಾ ನದಿಯ ದಂಡೆಯಲ್ಲಿ ಸಂಚರಿಸುತ್ತಿದ್ದಾಗ ದಾಶರಾಜನ ಮಗಳು ಸತ್ಯವತಿಯನ್ನು ಕಂಡ. ಸತ್ಯವತಿಗೆ ಯೋಜನಗಂಧಿ ಎಂತಲೂ ಕರೆಯುತ್ತಾರೆ. ಅವಳನ್ನು ಮಹಾರಾಜ ಮೋಹಿಸಿದ, ಮದುವೆಯಾಗಲು ಬಯಸಿದ. ತಂದೆ ಒಪ್ಪಿದರೆ ನನ್ನದೇನು ಅಭ್ಯಂತರವಿಲ್ಲ ಎಂದಳಾಕೆ. ಶಂತನು ದಾಶರಾಜನ ಬಳಿ ಬಂದ. ಮನದ ಇಂಗಿತವನ್ನು ವ್ಯಕ್ತಪಡಿಸಿದ. ಆದರೆ ದಾಶರಾಜ ಒಂದು ಷರತ್ತನ್ನು ಮುಂದಿಟ್ಟ. ತನ್ನ ಮಗಳಿಂದ ಹುಟ್ಟುವ ಮಗನಿಗೇ ರಾಜ್ಯ ಪಟ್ಟಾಭಿಷೇಕವಾಗಬೇಕು ಎನ್ನುವುದು ಅವನ ಬಯಕೆಯಾಗಿತ್ತು.

ದಾಶರಾಜನ ಮಾತಿಗೆ ಸಮ್ಮತಿ ಸೂಚಿಸದೆ ಶಂತನು ಹಸ್ತಿನಾಪುರಕ್ಕೆ ಹಿಂದಿರುಗಿದ. ತಂದೆಯ ಮನೋವ್ಯಾಕುಲತೆಯನ್ನು ಸಾರಥಿಯ ಮೂಲಕ ಅರ್ಥ ಮಾಡಿಕೊಂಡ ದೇವವ್ರತ ದಾಶರಾಜನ ಮನೆಗೆ ತೆರಳುತ್ತಾನೆ. ಅವನೆದುರು ಪ್ರತಿಜ್ಞೆ ಮಾಡುತ್ತಾನೆ. ತನ್ನ ಸಿಂಹಾಸನವನ್ನು ತಂದೆಗೆ ಬಿಟ್ಟುಕೊಟ್ಟಿದ್ದೇನೆ ಎನ್ನುವುದೇ ಮೊದಲ ಪ್ರತಿಜ್ಞೆ. ಆದರೂ ದಾಶರಾಜ ಸುಮ್ಮನಾಗಲಿಲ್ಲ. ನೀನೇನೋ ನುಡಿದಂತೆ ನಡೆದುಕೊಳ್ಳುವವನು. ಆದರೆ ಮುಂದೆ ನಿನಗೊಬ್ಬ ಮಗನಾದರೆ? ಎಂದು ಅಪಸ್ವರವನ್ನು ಎತ್ತುತ್ತಾನೆ. ಆಗ ದೇವವ್ರತ ಮದುವೆ ಆಗುವುದೇ ಇಲ್ಲವೆಂದು ಪ್ರತಿಜ್ಞೆ ಮಾಡುತ್ತಾನೆ. ಹೀಗೆ ಸತ್ಯವತಿಯೊಂದಿಗೆ ಶಂತನುವಿನ ಮದುವೆ ನಡೆಯುತ್ತದೆ. ಮಗನ ಪ್ರತಿಜ್ಞೆಯಿಂದ ಸಂತುಷ್ಟನಾದ ಶಂತನು ಮಗನಿಗೆ ಭೀಷ್ಮ ಎಂದೇ ಸಂಬೋಧಿಸುತ್ತಾನೆ. ನೀನು ಬಯಸಿದಾಗ ಮಾತ್ರ ಸಾವು ಬರಲಿ. ನೀನು ಇಚ್ಛಾ ಮರಣಿಯಾಗು ಎಂದು ವರವನ್ನು ಕರುಣಿಸುತ್ತಾನೆ.

ಸತ್ಯವತಿಗೆ ಇಬ್ಬರು ಮಕ್ಕಳು. ಅವರೇ ಚಿತ್ರಾಂಗದ ಮತ್ತು ವಿಚಿತ್ರವೀರ್ಯ. ವಿಚಿತ್ರ ವೀರ್ಯನಿಗೆ ಹೆಣ್ಣು ಹುಡುಕಲು ಭೀಷ್ಮ ಕಾಶಿರಾಜನ ಅರಮನೆಗೆ ಬರುತ್ತಾನೆ. ಕಾಶಿರಾಜನಿಗೋ ಮೂವರು ಪುತ್ರಿಯರು. ಅವರಲ್ಲೊಬ್ಬಳು ಅಂಬೆ. ಅಂಬೆಗೆ ಸಾಲ್ವರಾಜನ ಮೇಲೆ ವ್ಯಾಮೋಹ. ಆದರೆ ಭೀಷ್ಮನೊಂದಿಗೆ ನಡೆದ ಯುದ್ಧದಲ್ಲಿ ಸೋತ ಸಾಲ್ವರಾಜ ಅಂಬೆಯನ್ನು ತಿರಸ್ಕರಿಸುತ್ತಾನೆ. ಅಲ್ಲಿಯೂ ಸಲ್ಲದೆ, ಇಲ್ಲಿಯೂ ಸಲ್ಲದ ಅಂಬೆ ಅಪಮಾನಿತಳಾಗಿ ಅಗ್ನಿಯನ್ನು ಪ್ರವೇಶಿಸುತ್ತಾಳೆ. ಮುಂದೆ ಭೀಷ್ಮರ ವಧೆಗಾಗಿ ಶಿಖಂಡಿಯಾಗಿ ಜನಿಸುತ್ತಾಳೆ. ಇತ್ತ ಅಂಬಿಕೆ, ಅಂಬಾಲಿಕೆಯರಿಗೆ ಮಕ್ಕಳಾಗುತ್ತವೆ. ಅವರೇ ಕ್ರಮವಾಗಿ ಧೃತರಾಷ್ಟ್ರ ಮತ್ತು ಪಾಂಡು. ಧೃತರಾಷ್ಟ್ರನು ಹುಟ್ಟು ಕುರುಡನಾದುದರಿಂದ ಪಾಂಡುವಿಗೆ ಭೀಷ್ಮರು ಪಟ್ಟ ಕಟ್ಟುತ್ತಾರೆ.

ಪಾಂಡುವಿನ ನಂತರ ಧೃತರಾಷ್ಟ್ರನೇ ಹಸ್ತಿನಾಪುರಕ್ಕೆ ರಾಜನಾಗುತ್ತಾನೆ. ಆದರೆ ಕೌರವರು ಮತ್ತು ಪಾಂಡವರ ನಡುವೆ ದಾಯಾದಿ ಕಲಹ. ಕೌರವರ ಸ್ವಾರ್ಥದ ಕಾರಣ ಕುರುಕ್ಷೇತ್ರ ಯುದ್ಧವಾಗುತ್ತದೆ. ಭೀಷ್ಮರು ಸೈನಾಧಿಪತಿಯಾಗಿ ಹನ್ನೊಂದು ಅಕ್ಷೌಹಿಣಿ ಸೇನೆಯನ್ನು ಮುನ್ನಡೆಸುತ್ತಾರೆ. ಹೀಗೆ ಒಂಬತ್ತು ದಿವಸಗಳು ಕಳೆದುಹೋಗುತ್ತವೆ. ಭೀಷ್ಮರ ಪರಾಕ್ರಮದಿಂದ ನಡುಗಿದ ಪಾಂಡವರು ಶ್ರೀಕೃಷ್ಣನ ಸಲಹೆ ಕೇಳುತ್ತಾರೆ. ಶ್ರೀಕೃಷ್ಣನ ಸಲಹೆಯಂತೆ ಮರುದಿನ ಅರ್ಜುನ ಶಿಖಂಡಿಯನ್ನು ಮುಂದಿಟ್ಟುಕೊಂಡು ಯುದ್ಧಭೂಮಿಗೆ ಬರುತ್ತಾನೆ.

ಭೀಷ್ಮರು ಶಸ್ತ್ರತ್ಯಾಗ ಮಾಡುತ್ತಾರೆ. ಅರ್ಜುನನ ಬಾಣಗಳು ಅವರನ್ನು ನಿತ್ರಾಣರನ್ನಾಗಿ ಮಾಡಿರುತ್ತವೆ. ಅರ್ಜುನ ನಿರ್ಮಿಸಿದ ಶರಶಯ್ಯೆಯ ಮೇಲೆ ಮಲಗುತ್ತಾರೆ. ಅವರು ಉತ್ತರಾಯಣ ಪುಣ್ಯಕಾಲಕ್ಕೆ ಎದುರು ನೋಡುತ್ತಿರುತ್ತಾರೆ. ಇತ್ತ ಭೀಷ್ಮರ ಮಾತನ್ನು ಧಿಕ್ಕರಿಸಿದ ದುರ್ಯೋಧನ ಹತನಾಗುತ್ತಾನೆ. ಕುರುವಂಶ ನಿರ್ನಾಮವಾಗುತ್ತದೆ. ಧರ್ಮರಾಜನಿಗೆ ಪಟ್ಟಾಭಿಷೇಕವಾಗುತ್ತದೆ. ಧರ್ಮರಾಜ ಶ್ರೀಕೃಷ್ಣನ ಸಹಿತ ಭೀಷ್ಮರ ದರ್ಶನಕ್ಕೆ ಬರುತ್ತಾನೆ. ಭೀಷ್ಮರು ಧರ್ಮರಾಜನನ್ನು ಹರಸುತ್ತಾರೆ.

ಧರ್ಮಪಾಲನೆ ಮಾಡು ಎಂಬ ಸಂದೇಶ ನೀಡುತ್ತಾರೆ. ಶ್ರೀಕೃಷ್ಣನನ್ನು ಕಣ್ತುಂಬ ನೋಡುತ್ತಾರೆ. ನೀನು ಅಪ್ಪಣೆ ಕೊಟ್ಟರೆ ನಾನಿನ್ನು ಹೊರಡುವೆ ಎನ್ನುತ್ತಾರೆ. ಭೀಷ್ಮರು ನಿರೀಕ್ಷಿಸುತ್ತಿದ್ದ ಸಮಯ ಬರುತ್ತದೆ. ಭೀಷ್ಮರ ಪ್ರಾಣ ಶ್ರೀಮನ್ನಾರಾಯಣನ ಪಾದಗಳಲ್ಲಿ ಲೀನಾವಾಗುತ್ತದೆ.

- Advertisement -
- Advertisement -

Latest News

ಮೂಡಲಗಿಯಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ ; ಗಮನ ಸೆಳೆದ ಮಕ್ಕಾ ಮದೀನಾ ರೂಪಕಗಳು

ಮೂಡಲಗಿ: ಮಹಾನ್ ಮಾನವತಾವಾದಿ, ಮಹಾನ್ ಚಾರಿತ್ರ್ಯ ವಂತ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಬಿಟಿಟಿ ಕಮೀಟಿ ಆಯೋಜನೆಯಲ್ಲಿ ಪಟ್ಟಣದ ಸಮಸ್ತ ಮುಸ್ಲಿಂ ಬಾಂಧವರು...
- Advertisement -

More Articles Like This

- Advertisement -
close
error: Content is protected !!
Join WhatsApp Group