ಪಶ್ಚಿಮ ಬಂಗಾಳದಲ್ಲಿ ೨೯೪ ಸ್ಥಾನಗಳಿಗಾಗಿ ಇಷ್ಟರಲ್ಲಿಯೇ ವಿಧಾನಸಭಾ ಚುನಾವಣೆ ನಡೆಯಲಿದ್ದು ಕನಿಷ್ಠ ೨೦೦ ಸ್ಥಾನ ಗೆಲ್ಲುವ ಹುಮ್ಮಸ್ಸಿನೊಂದಿಗೆ ಭಾರತೀಯ ಜನತಾಪಕ್ಷ ಚುನಾವಣಾ ಅಖಾಡಕ್ಕೆ ಇಳಿದಂತಾಗಿದೆ.
ಸದ್ಯ ಚುನಾವಣಾ ಪೂರ್ವ ಬೃಹತ್ ರ್ಯಾಲಿಯಲ್ಲಿ ಭಾಗವಹಿಸಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಬಂಗಾಲದಲ್ಲಿ ಈ ಸಲ ಕಮಲ ಅರಳುತ್ತದೆ ಎಂದಿದ್ದಾರೆ.
ಬಂಗಾಲದಲ್ಲಿ ರೈತರನ್ನು ಶೋಷಿಸಲಾಗುತ್ತಿದೆ, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ….ಇದೆಲ್ಲವನ್ನೂ ಬಿಜೆಪಿ ಸರಿಪಡಿಸುತ್ತದೆ ಎಂದು ಹೇಳಿರುವ ಜೆ ಪಿ ನಡ್ಡಾ, ಮಮತಾ ಬ್ಯಾನರ್ಜಿ ಅವರು ತಮ್ಮ ಅಹಂಕಾರದಿಂದ ಮೋದಿಯವರ ವರ್ಚಸ್ಸಿನ ಎದುರು ಸೋಲುವುದು ನಿಶ್ಚಿತ ಎಂದರು.
ಈ ಮೊದಲು ಕೆಲವು ದಿನಗಲಕ ಹಿಂದೆ ಕೂಡ ಕೇಂದ್ರ ಗೃಹ ಸಚಿವ ಅಮಿತ್ ಷಾ ಪ.ಬಂಗಾಳಕ್ಕೆ ಆಗಮಿಸಿ ಬಿಜೆಪಿಯ ಹೊಸ ಗಾಳಿ ಬೀಸುವಂತೆ ಮಾಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಯವರು ಕೆಲವು ದಿನಗಳ ಹಿಂದೆ ಕೋಲ್ಕತ್ತಾಕ್ಕೆ ಆಗಮಿಸಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದ್ದರು.
ಸದ್ಯ ಪ.ಬಂಗಾಳದಲ್ಲಿ ಬಿಜೆಪಿಯ ಪ್ರಭಾವ ದಿನೇ ದಿನೇ ಬೆಳೆಯುತ್ತಲಿದ್ದು ಮಮತಾ ದೀದಿಯ ಅಸ್ಥಿತ್ವ ಕುಸಿಯುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.