೨೦೦೮ ರಲ್ಲಿ ಸಂಭವಿಸಿದ್ದ ಬಾಟ್ಲಾ ಹೌಸ್ ಎನ್ ಕೌಂಟರ್ ಪ್ರಕರಣದ ಪ್ರಮುಖ ಆರೋಪಿ ಆರೀಜ್ ಖಾನ್ ಗೆ ಗಲ್ಲು ಶಿಕ್ಷೆ ವಿಧಿಸಿ ದೆಹಲಿಯ ಸಾಕೇತ್ ಕೋರ್ಟ್ ಆದೇಶ ನೀಡಿದೆ.
ದೆಹಲಿಯ ಹಲವು ಕಡೆ ಬಾಂಬ್ ದಾಳಿ ನಡೆಸಿ ಹಲವರ ಸಾವಿಗೆ ಕಾರಣರಾಗಿದ್ದ ನಾಲ್ವರು ಉಗ್ರರ ಪೈಕಿ ಆರಿಜ್ ಖಾನ್ ಬಂಧನವಾಗಿತ್ತು ಉಳಿದ ಮೂವರು ತಪ್ಪಿಸಿಕೊಂಡಿದ್ದರು. ಈವರೆಗೆ ವಿಚಾರಣೆ ನಡೆಸಿದ್ದ ಕೋರ್ಟ್ ಮಾರ್ಚ್ ೧೫ ರಂದು ತೀರ್ಪು ಕಾಯ್ದಿರಿಸಿತ್ತು.
ಸಾಯಂಕಾಲ ೫ ಗಂಟೆಗೆ ಹೊರಬಿದ್ದ ತೀರ್ಪಿನಲ್ಲಿ ಆರಿಜ್ ಖಾನ್ ಪ್ರಮುಖ ಅಪರಾಧಿಯಾಗಿದ್ದು ಆತನಿಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ಬಾಟ್ಲಾ ಹೌಸ್ ಪ್ರಕರಣ:
ಇದು 2008ರ ಪ್ರಕರಣ. ಶಾಂತವಾಗಿದ್ದ ದೆಹಲಿಯ ಇಂಡಿಯಾ ಗೇಟ್, ಕರೋಲ್ ಬಾಗ್ ಹಾಗೂ ಕನೌಟ್ ಬಳಿ ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಸೆಪ್ಟೆಂಬರ್ 13, 2008ರಂದು ನಡೆದ ಈ ಬಾಂಬ್ ಸ್ಫೋಟದಲ್ಲಿ 26 ಮಂದಿ ಸಾವನ್ನಪ್ಪಿದ್ದು 133ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದರು.
ಬಾಂಬ್ ಸ್ಫೋಟದಿಂದ ದೆಹಲಿ ಸೇರಿದಂತೆ ದೇಶದ ಎಲ್ಲಾ ನಗರಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು. ಗಡಿ ರಸ್ತೆಗಳು ಸೇರಿದಂತೆ ದೇಶದ ಹಲೆವೆಡೆ ಪೊಲೀಸರು ನಾಕಾಬಂಧಿ ಹಾಕಿ ತಪಾಸಣೆ ಆರಂಭಿಸಿದ್ದರು. ಹೆಚ್ಚುವರಿ ಪೊಲೀಸ್ ನಿಯೋಜನೆ ಮಾಡಲಾಗಿತ್ತು. ಬಾಂಬ್ ಸ್ಫೋಟ ನಡದೆ ಒಂದು ವಾರದ ಬಳಿಕ ಅಂದರೆ, ಸೆಪ್ಟೆಂಬರ್ 19, 2008ರಲ್ಲಿ ಜಾಮಿಯಾನಗರದ ಬಾಟ್ಲಾ ಹೌಸ್ ಅಪಾರ್ಟಮೆಂಟ್ ಮನೆಯೊಂದರಲ್ಲಿ ಸರಣಿ ಬಾಂಬ್ ಸ್ಫೋಟದ ಆರೋಪಿಗಳು ಅಡಗಿದ್ದಾರೆ ಅನ್ನೋ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು.
ಬಾಟ್ಲಾ ಹೌಸ್‌ಗೆ ಮುತ್ತಿಗೆ ಹಾಕಿದ ದೆಹಲಿ ಪೊಲೀಸರು ಗುಂಡಿನ ದಾಳಿ ನಡೆಸಿದ್ದರು. ಪ್ರತಿಯಾಗಿ ಉಗ್ರರು ಕೂಡ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಇಬ್ಬರು ಉಗ್ರರು ಹತರಾದರು. ಆದರೆ ಎನ್‌ಕೌಂಟರ್ ನಡೆಸಿದ ಇನ್ಸ್‌ಪೆಕ್ಟರ್ ಮೋಹನ್ ಚಂದ್ ಶರ್ಮಾ ಉಗ್ರರ ದಾಳಿಗೆ ಹುತಾತ್ಮರಾದರು. ಇನ್ನಿಬ್ಬರು ಪೊಲೀಸ್ ಪೇದೆಗಳು ತೀವ್ರವಾಗಿ ಗಾಯಗೊಂಡರು.ಇನ್ನುಳಿದ ಮೂವರು ಉಗ್ರರು ತಪ್ಪಿಸಿಕೊಂಡಿದ್ದರು.
ಎನ್ಕೌಂಟರ್ ನಕಲಿ ಅಂದಿದ್ದ ಕಾಂಗ್ರೆಸ್
ಬಾಟ್ಲಾಹೌಸ್ ನಲ್ಲಿ ನಡೆದಿದ್ದ ಎನ್ಕೌಂಟರ್ ನಕಲಿ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿ ತುಷ್ಠೀಕರಣ ರಾಜಕಾರಣ ಮಾಡಿದ್ದರು. ಆದರೆ ಇಲ್ಲಿಯವರೆಗೆ ನಡೆದ ತನಿಖೆಯಲ್ಲಿ ಆರೀಜ್ ಖಾನ್ ಅಲ್ಲದೆ ಇನ್ನೂ ಮುವರು ಉಗ್ರರು ಇದರಲ್ಲಿ ಭಾಗಿಯಾಗಿದ್ದು ಅಂದಿನ ಪ್ರಕರಣದಲ್ಲಿ ಹುತಾತ್ಮರಾದ ಪೊಲೀಸ್ ಅಧಿಕಾರಿಗಳಿಗೆ ಶಾಂತಿ ಸಿಕ್ಕಂತಾಗಿದೆ.