ಬೀದರ – ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ ಮಾಜಿ ಸಚಿವ, ಬೀದರ್ನ ಹುಮನಾಬಾದ್ ಕ್ಷೇತ್ರ ಶಾಸಕ ರಾಜಶೇಖರ್ ಪಾಟೀಲ್ ಅವರ ಸಹೋದರರ ನಡುವೆ ಈಗ ಬಿರುಕು ಕಾಣಿಸಿಕೊಂಡಿದೆ.
ಸುಮಾರು 80ರ ದಶಕದಿಂದ 12ಜನ ಪಾಟೀಲ್ ಸಹೋದರರು ಒಂದಾಗಿ ಉಳಿದು ಹುಮನಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಯಾವೊಬ್ಬ ನಾಯಕನಿಗೂ ಗೆಲ್ಲಲು ಬಿಡದೇ ಪಾಟೀಲ್ ದರ್ಬಾರ್ ಎಂಬಂತೆ ಆಡಳಿತ ನಡೆಸುತ್ತಿದ್ದ ಕುಟುಂಬದಲ್ಲಿ ಈಗ ಬಿಕ್ಕಟ್ಟು ಉಂಟಾಗಿ ರಾಜಶೇಖರ್ ಪಾಟೀಲ್ ಅವರ ದೊಡ್ಡಪ್ಪನ ಮಗ ಅಂದ್ರೆ ಅವರ ತಮ್ಮ ಸಿದ್ದು ಪಾಟೀಲ್ ಬಿಜೆಪಿ ಸೇರ್ಪಡೆಯಾಗಿದ್ದಾರೆ,. ಈ ಬೆಳವಣಿಗೆ ಬೆನ್ನಲ್ಲೆ ಈಗ ರಾಜಶೇಖರ್ ಪಾಟೀಲ್ ತಮ್ಮನಿಗೆ ವೇದಿಕೆ ಮೇಲೆ ಸವಾಲ್ ಹಾಕಿದ್ದಾರೆ.
ಎಂತೆಂಥ ಘಟಾನುಘಟಿ ನಾಯಕರು ಮೀರಾಜುದ್ದಿಣ್ ಪಟೇಲ್, ಸುಭಾಸ್ ಕಲ್ಲೂರ್, ನಸೀಮೊದ್ದಿನ್ ಪಟೇಲ್ ಸೇರಿದಂತೆ ಹಲವು ಘಟಾನುಘಟಿ ನಾಯಕರೇ ನನ್ನ ಎದುರು ನಿಂತು ಸೋತು ಹೋಗಿದ್ದಾರೆ,. ಇವರೇನು ಹೊಸದಾಗಿ ಹೋಗಿ ನನಗೆ ಧಮ್ಕಿ ಹಾಕುತ್ತಿದ್ದಾರೆ ಅದಕ್ಕೆ ನಾನು ಜಗ್ಗುವ ಬಗ್ಗುವ ಮಗ ಅಲ್ಲ, ಬನ್ನಿ ನೋಡೋಣ ನನ್ನ ಜೊತೆ ಚುನಾವಣೆ ಎದುರಿಸಿ ನಾನು ರಾಜಾಹುಲಿ ಎಂದು ಬಿಜೆಪಿ ಸೇರ್ಪಡೆಗೊಂಡಿರುವ ದೊಡ್ಡಪ್ಪನ ಮಗ ಸಿದ್ದು ಪಾಟೀಲ್ಗೆ ನಿನಗೂ ಒಂದು ಕೈ ನೋಡಿಕೊಳ್ಳುತ್ತೇನೆಂದು ವೇದಿಕೆ ಮೂಲಕವೇ ರಾಜಶೇಖರ್ ಪಾಟೀಲ್ ಚಾಲೆಂಜ್ ಮಾಡಿದ್ದು ಈಗ ಜಿಲ್ಲೆಯಾದ್ಯಂತ ಚರ್ಚೆಯ ವಿಷಯವಾಗಿದೆ.
ಮೊನ್ನೆ ಬಸವಕಲ್ಯಾಣದಲ್ಲಿ ನಡೆದ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ರಾಜಶೇಖರ್ ಪಾಟೀಲ್ ಅವರ ದೊಡ್ಡಪ್ಪನ ಮೂವರು ಮಕ್ಕಳು ಅಂದ್ರೆ ಸಿದ್ದು ಪಾಟೀಲ್, ಸಂತೋಷ್ ಪಾಟೀಲ್, ಶರಣು ಪಾಟೀಲ್ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ,. ಈ ಮೂಲಕ ನಾಲ್ಕು ದಶಕಗಳಿಂದ ಒಂದಾಗಿ ಹುಮನಾಬಾದ್ ಕ್ಷೇತ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿದು ರಾಜ್ ನಡೆಸುತ್ತಿದ್ದ ಪಾಟೀಲ್ ಕುಟುಂಬ ಅಂದ್ರೆ ಹುಮನಾಬಾದ್, ಹುಮಬಾನಾದ್ ಅಂದ್ರೆ ಪಾಟೀಲ್ ಕುಟುಂಬ ಎಂಬಂತೆ ಬೀದರ್ ನಲ್ಲಿ ಇತ್ತು ಈಗ ಇಂತಹ ದೊಡ್ಡ ಕುಟುಂಬ ಒಡೆದು ಎರಡು ಹೋಳಾಗಿದ್ದು,.. ಡಜನ್ ಗಟ್ಟಲೇ ಸಹೋದರರು ಇರುವ ಪಾಟೀಲ್ ಕುಟುಂಬದ ಎದುರು ಚುನಾವಣೆ ನಿಂತರೇ ಸೋಲು ಖಚಿತ ಎಂಬಂತೆ ಇತ್ತು ಈಗ ಈ ಕುಟುಂಬದಲ್ಲಿ ಬಿರುಕು ಕಾಣಿಸಿಕೊಂಡಿದ್ದು ಅಣ್ಣನ ಸವಾಲ್ ಸ್ವೀಕರಿಸಿ ಮುಂದಿನ ಚುನಾವಣೆ ಅಖಾಡಕ್ಕೆ ತಮ್ಮ ಇಳಿಯುತ್ತಾನಾ ಕಾದು ನೋಡಬೇಕಾಗಿದೆ.
ವರದಿ: ನಂದಕುಮಾರ ಕರಂಜೆ
Times of ಕರ್ನಾಟಕ, ಬೀದರ