ಭಾರತವನ್ನು ಹಿಂದುಳಿಸುವ ತಂತ್ರ ಅರ್ಥ ಮಾಡಿಕೊಳ್ಳಬೇಕು

Must Read

ಸಾಮಾನ್ಯಜ್ಞಾನದ ಕೊರತೆ ಕೊರೊನವನ್ನು ಬೆಳೆಸುತ್ತಿದೆ. ಜನರ ದಿನನಿತ್ಯದ ಕಾಯಕಕ್ಕೆ ಕತ್ತರಿ ಹಾಕಿ ಸರ್ಕಾರದ ಋಣ ಹೆಚ್ಚಾದಂತೆ ಇನ್ನಷ್ಟು ಸಮಸ್ಯೆಗೆ ದಾರಿ. ಸೋ‘ಮಾರಿ‘ ಹೊರಗೆ ಬಂದರೆ ಮಾರಿಯ  ಮೂರನೆ ಅಲೆ ದರ್ಶನ. ಇದು ಮಕ್ಕಳವರೆಗೆ ಹರಡುವುದು ಸಹಜ. ಅದೇ ಹಿಂದಿನ ಶಿಕ್ಷಣದ ಪರೀಕ್ಷೆ ಭಯ ಶಿಕ್ಷೆ, ‘ವಿಷ‘ಯ ಪೋಷಕರ ಸಾಲದ ಹೊರೆ ಇದೇ ಮಾನವನ ರೋಗಕ್ಕೆ ಕಾರಣ. ಜೀವ ಶಾಶ್ವತವಲ್ಲ, ಆತ್ಮ ಶಾಶ್ವತ. ಆಯಸ್ಸು ಇದ್ದಷ್ಟೇ ದಿನ ಬದುಕೋದು. ಪರಮಾತ್ಮನ ಇಚ್ಚೆಯಿಲ್ಲದೆ ಏನೂ ನಡೆಯದು.

ಋಣ(ಸಾಲ) ಮತ್ತು ಕರ್ಮ (ಕೆಲಸ) ಇದೇ ಮಾನವನ ಜನ್ಮಕ್ಕೆ ಕಾರಣ. ಭ್ರಷ್ಟಾಚಾರ ಹೆಚ್ಚಾದಂತೆ ಭೂಮಿ ಋಣ ಹೆಚ್ಚಾಗುತ್ತದೆ. ಇದನ್ನು ತಿರುಗಿಸಲು ಪರಿಹಾರವೆ ದಾನ ಧರ್ಮಕ್ಕೆ ತಿರುಗಿತು.

ಆದರೆ, ಭ್ರಷ್ಟಾಚಾರದ ಹಣವನ್ನು ದಾನ ಮಾಡಿದರೆ ಋಣ ಕಳೆಯುವುದೆ? ಇದಕ್ಕೆ ಕೊರೊನ ಹೆಚ್ಚಾಗಿದೆ. ಆಂತರಿಕ ಸ್ವಚ್ಚತೆಗೆ ಸತ್ಯ ಜ್ಞಾನ ಬೇಕಷ್ಟೆ. ಕಷ್ಟಪಟ್ಟು ಗಳಿಸಿದ್ದೇ ನಮ್ಮದೆನ್ನುವ ಹಾಗಿಲ್ಲ ಇನ್ನು ಪರರ ಹಣ ನನ್ನದೆನ್ನುವುದೆ ಅಜ್ಞಾನ. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಆಗಿತ್ತು.

ಈಗ ಜಾತ್ರೆಯೂ ಇಲ್ಲ.ಯಲ್ಲಮ್ಮನೂ ಎಲ್ಲಿರುವಳು? ಸರ್ಕಾರದ ಹಣ ದುರ್ಬಳಕೆ ಮಾಡಿಕೊಂಡು ಆಳೋರನ್ನು ಕೇಳೋರಿಲ್ಲ. ಆಂತರಿಕ ರೋಗವನ್ನು ಭೌತಿಕ ರೋಗವಾಗಿಸಿ ಭಾರತವನ್ನು ಹಿಂದುಳಿಸುವ ತಂತ್ರಗಾರಿಕೆಯನ್ನು ತತ್ವಜ್ಞಾನದಿಂದ ಅರ್ಥ ಮಾಡಿಕೊಂಡರೆ ಅಲೆಗಳಿಗೆ ಬೆಲೆ ಕಟ್ಟುವ ಅಗತ್ಯವಿಲ್ಲ.

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group