ಬೀದರ – ಫೆಬ್ರವರಿ 24 ರಂದು ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿರುವ ಪೊಲೀಸರು ಬಿಜೆಪಿ ಪಕ್ಷದ ಮುಖಂಡ ಗುರುನಾಥ ಕೊಳ್ಳುರ್ ಮಾಲಿಕತ್ವದ ಜಿ ಕೆ ಕನ್ಸ್ ಟ್ರಕ್ಷನ್ ಕಲ್ಲು ಕ್ವಾರಿಯಲ್ಲಿ ಜಿಲಿಟಿನ ಸ್ಫೋಟಕಗಳನ್ನು ಪತ್ತೆ ಮಾಡಿ ವಶಪಡಿಸಿಕೊಂಡಿದ್ದಾರೆ.
ಬೀದರ್ ಜಿಲ್ಲೆಯ ಸುಲ್ತಾನಪುರ ಗ್ರಾಮದ ಬಳಿ ಇರುವ ಜಿಕೆ ಕನ್ಸ್ ಟ್ರಕ್ಷನ್ ನಲ್ಲಿ ಭಾರೀ ಪ್ರಮಾಣದ ಜಿಲೆಟಿನ್ ಕಡ್ಡಿ ಇರುವ ಬಾಕ್ಸ್ ಗಳು ಪತ್ತೆಯಾಗಿವೆ.
detenetor 500(Ned)no’s. coredex 2500 ಹಾಗೂ 25 ಕೆಜಿ ಉಳ್ಳ ಜಿಲಿಟಿನ್ 67 ಕಡ್ಡಿ ಪತ್ತೆಯಾಗಿದ್ದು ಇವುಗಳನ್ನು ಬಚ್ಚಿಡಲು ಟಿಪ್ಪರ್ ಒಂದರಲ್ಲಿ ಸಾಗಾಟ ಮಾಡುತ್ತಿದ್ದಾಗ ತಮಗೆ ದೊರೆತ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ಮಾಡಿ ವಶಪಡಿಸಿಕೊಂಡಿದ್ದಾರೆ.
ಬೀದರ್ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
ವರದಿ: ನಂದಕುಮಾರ ಕರಂಜೆ
Times of ಕರ್ನಾಟಕ, ಬೀದರ