ಮತಾಂತರಗೊಳ್ಳದ ಮೂಕ ತಂದೆಯನ್ನೇ ಕೊಂದ ಪಾಪಿ ಮಕ್ಕಳು ಹಾಗೂ ಪತ್ನಿ !

1
897

ಬೀದರ – ಮತಾಂತರ ವಿರೋಧಿಸಿದ್ದಕ್ಕೆ ಮೂಕ ತಂದೆಯ ಜೀವವನ್ನೆ ತೆಗೆದರಾ ಪಾಪಿ ಮಕ್ಕಳು..?

ಮೂಕ ತಂದೆಯನ್ನು ಕೊಂದು ಮನೆಯಲ್ಲಿಯೇ ಶವ ಬಚ್ಚಿಟ್ಟ ಮಕ್ಕಳು.ಕೊಲೆ ಬಳಿಕ ಶವವಿಟ್ಟು ಅಡುಗೆ ಮಾಡುತ್ತಿದ್ದಳಂತೆ ಮಗಳು. ತಂದೆ ಹೆಣವನ್ನು ಮನೆಯಲ್ಲಿ ಇಟ್ಟುಕೊಂಡು ಊಟ ಮಾಡಿದ ಪಾಪಿ ಮಕ್ಕಳು !

ಮನುಕುಲವೇ ನಾಚುವಂತಹ ಧಾರುಣ ಘಟನೆಗೆ ಸಾಕ್ಷಿಯಾದ ಬೀದರ್ ತಾಲೂಕಿನ ಸಾತೋಳಿ ಗ್ರಾಮ. ಸಾತೋಳಿ ಗ್ರಾಮದ 52 ವರ್ಷದ ಬಸವರಾಜ ಶೇರಿಕರ್ ಕೊಲೆಯಾದ ದುರ್ದೈವಿ..

ಎಸ್‌ಟಿ ಗೊಂಡ ಸಮುದಾಯದಲ್ಲಿದ್ರೂ, ಕ್ರಿಶ್ಚಿಯನ್ ಧರ್ಮ ಪಾಲನೆ ಮಾಡುತ್ತಿದ್ದ ಪತ್ನಿ ಹಾಗೂ ಮಕ್ಕಳು ದಸರಾ ಹಬ್ಬದಲ್ಲಿ ಮನೆಯಲ್ಲಿ ಪೂಜೆ ಯಾಕೆ ಮಾಡಿಲ್ಲವೆಂದು ಪ್ರಶ್ನಿಸಿದ ಮೂಕ ತಂದೆಯನ್ನೇ ಕೊಂದು ಹಾಕಿದರು. ತನಗೆ ಮಾತು ಬರದೇ ಇದ್ದರೂ ಮತಾಂತರವನ್ನು ವಿರೋಧಿಸುತ್ತಿದ್ದನಂತೆ ಕೊಲೆಯಾದ ಬಸವರಾಜ. ವಿರೋಧಿಸಿದ ತಂದೆ ಬಸವರಾಜ್‌ನನ್ನ ಮನೆಯಿಂದ ಹೊರಗಿಟ್ಟಿದ್ದರು ಆಗಾಗ ಥಳಿಸುತ್ತಿದ್ದರಂತೆ. ನಿನ್ನೆ ಮನೆಗೆ ಬಂದಾಗ ಕೈಕಾಲು ಕಟ್ಟಿ ಹಾಕಿ ತಲೆಗೆ ಹೊಡೆದು ಕೊಲೆ ಮಾಡಿದ ಪಾಪಿ ಕುಟುಂಬಸ್ಥರು.

ಈ ಕುರಿತು ಮನ್ನಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ತಾಯಿ ಮತ್ತು ಮಕ್ಕಳು ಸೇರಿ ನಾಲ್ವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವರದಿ : ನಂದಕುಮಾರ ಕರಂಜೆ, ಬೀದರ

1 COMMENT

Comments are closed.