ಮನುಷ್ಯ ಸತ್ಕಾರ್ಯಗಳ ಮೂಲಕ ಜೀವನ ಸುಂದರಗೊಳಿಸಿಕೊಳ್ಳಬೇಕು

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

ಮೂಡಲಗಿ: ‘ಮನುಷ್ಯ ಎಷ್ಟು ವರ್ಷಗಳು ಬದುಕಿದ ಎನ್ನುವುದಕ್ಕಿಂತ ಆತ ಹೇಗೆ ಬದುಕಿದ ಎನ್ನುವುದು ಮುಖ್ಯವಾಗಿರುತ್ತದೆ. ಬದುಕಿರುವಷ್ಟು ದಿನ ದೇವರ ಧ್ಯಾನ, ಸತ್ಕಾರ್ಯಗಳ ಮೂಲಕ ಬದುಕಿ ಜೀವನವನ್ನು ಸುಂದರಗೊಳಿಸಿಕೊಳ್ಳಬೇಕು’ ಎಂದು ಖಾನಟ್ಟಿಯ ಮಲ್ಲಿಕಾರ್ಜುನ ಮಠದ ಬಸವಾನಂದ ಸ್ವಾಮೀಜಿಗಳು ಹೇಳಿದರು.

ಇಲ್ಲಿಯ ಗೋಕಾಕ ಕ್ರಾಸ್ ಬಳಿಯಲ್ಲಿ ಗೃಹಸ್ಥಾಶ್ರಮ ಆಧ್ಯಾತ್ಮಿಕ ಕೇಂದ್ರದಿಂದ ಯಲ್ಲಪ್ಪ ಕಪ್ಪಲಗುದ್ದಿ ಮತ್ತು ಸಿದ್ದಪ್ಪ ಪೂಜೇರಿ ಕುಟುಂಬಗಳ ಆತಿಥ್ಯದಲ್ಲಿ ಏರ್ಪಡಿಸಿದ್ದ ಮಾಸಿಕ ಶಿವಾನಭವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉತ್ತಮ ಆಚಾರ, ವಿಚಾರಗಳಿಂದ ಬದುಕು ಸಾಗಿಸಬೇಕು ಎಂದರು.

ನಾಗನೂರಿನ ಕಾವ್ಯಶ್ರೀ ಅಮ್ಮನವರು ಹಾಗೂ ಕಂಕಣವಾಡಿಯ ಮಾರುತಿ ಶರಣರು ‘ಲೇಸೆನಿಸಿಕೊಂಡು ಐದು ದಿನ ಬದುಕಿದರೇನು’ ವಿಷಯದ ಕುರಿತು ಪ್ರವಚನವನ್ನು ನೀಡಿದರು.
ಮನುಷ್ಯ ಭೂಮಿಯಲ್ಲಿ ತಮ್ಮ ಹೆಸರನ್ನು ಉಳಿಸಿಕೊಳ್ಳಬೇಕಾದರೆ ಉತ್ತಮ ಕಾರ್ಯಗಳೇ ಅವುಗಳಿಗೆ ಮಾನದಂಡವಾಬೇಕು. ಮನುಷ್ಯ ತಮ್ಮ ಉಸಿರು ಇರುವವರೆಗೆ ಉತ್ತಮ ಹೆಸರನ್ನು ಸಂಪಾದಿಸಬೇಕು. ನಾಡಿನಲ್ಲಿ ಅನೇಕ ಶರಣರು, ಸಂತರು, ಸಾಧಕರು ತಮ್ಮ ಹೆಸರನ್ನು ಉಳಿಸಿಕೊಂಡಿರುವ ಬಗ್ಗೆ ಉದಾಹರಣೆಗಳನ್ನು ತಿಳಿಸಿದರು.

- Advertisement -

ಬೆಳಗಾವಿ ಡಿಸಿಸಿ ಬ್ಯಾಂಕ್‍ಗೆ ಉಪಾಧ್ಯಕ್ಷರಾಗಿ ಸತತ ಎರಡನೇ ಬಾರಿಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಮೂಡಲಗಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಸುಭಾಷ ಜಿ. ಢವಳೇಶ್ವರ ಅವರನ್ನು ಗೃಹಸ್ಥಾಶ್ರಮ ಆಧ್ಯಾತ್ಮಿಕ ಕೇಂದ್ರದಿಂದ ಶಿವಪುತ್ರಯ್ಯ ಮಠಪತಿ ಅವರು ಸನ್ಮಾನಿಸಿ ಗೌರವಿಸಿದರು.

ಆಕಾಶವಾಣಿ ಭಜನಾ ಕಲಾವಿದ ಇಟ್ನಾಳದ ನಾಗೇಶ ಐಹೊಳಿ, ಮಹಾನಿಂಗಪ್ಪ ಯಡವಣ್ಣವರ, ಶಿವಲಿಂಗ ಮುನ್ಯಾಳ, ಸತ್ಯಪ್ಪ ಮಾದರ, ಪಾಲಬಾವಿಯ ಅರ್ಜುನ ತುಪ್ಪದ, ಮುತ್ತಪ್ಪ ಸಂಗಾನಟ್ಟಿ, ಗುರ್ಲಾಪುರದ ರಾಚಯ್ಯ ಹಿರೇಮಠ ಇವರು ಪ್ರಸ್ತುತಪಡಿಸಿದ ಭಜನೆ ಮತ್ತು ಸಂಗೀತವು ಎಲ್ಲರ ಗಮನಸೆಳೆಯಿತು.

ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿದರು.
ಮೂಡಲಗಿ ಅರ್ಬನ್ ಬ್ಯಾಂಕ್ ನಿರ್ದೇಶಕ ರುದ್ರಪ್ಪ ಎಲ್. ವಾಲಿ, ಈಶ್ವರ ಗೊಲಶೆಟ್ಟಿ ಹಾಗೂ ನೂರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು.

- Advertisement -
- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!