ಮಸಗುಪ್ಪಿ ಶ್ರೀ ಮಹಾಲಕ್ಷ್ಮೀದೇವಿ ಹಾಗೂ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ

Must Read

ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದತ್ತಿನಿಧಿ ಕಾರ್ಯಕ್ರಮ

ಇದೇ ದಿ. 9 ರಂದು ಗುರುವಾರ ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ವತಿಯಿಂದ ಶ್ರೀಮತಿ ಸುಮಿತ್ರಾ ಚರಂತಿಮಠ,ದಿ....

ಕೇಂದ್ರ ಸಚಿವ ಭಗವಂತ ಖೂಬಾ ಗುಪ್ತ ಸಭೆ: ಸಭೆಯ ಕೇಂದ್ರ ಬಿಂದು ನಾಯಕ ಯಾರು?

ಬೀದರ - ಗಡಿ ಜಿಲ್ಲೆ ಬೀದರ್ ನಲ್ಲಿ ವಿಧಾನ ಪರಿಷತ್ ಚುನಾವಣೆ ಕಾವು ದಿನೇ ದಿಏ ರಂಗೇರುತ್ತಿದೆ ಅಲ್ಲದೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇಂದು ಕೇಂದ್ರ ಸಚಿವ...

ಸ್ಮಾರ್ಟ್ ಸಿಟಿ ಯೋಜನೆಗೆ ಕೇಂದ್ರದಿಂದ ಹಣ – ಕಡಾಡಿ ಮಾಹಿತಿ

ಮೂಡಲಗಿ: ಬೆಳಗಾವಿ ಸ್ಮಾಟ್ ಸಿಟಿ ಮಿಷನ್ ಯೋಜನೆಗೆ ನಗರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಕೇಂದ್ರ ಸರ್ಕಾರ 392 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಈಗಾಗಲೇ 294...

ರೈತರ ಬದುಕು ಬಂಗಾರವಾಗಲು ಪ್ರಾರ್ಥಿಸೊಣ-ಕಡಾಡಿ

ಮೂಡಲಗಿ: ಕಳೆದ ಒಂದು ವರ್ಷದಿಂದ ಕರೋನಾ ಕಾರಣದಿಂದ ಎಲ್ಲ ಜನ ಜೀವನ ಸ್ಥಬ್ದವಾಗಿತ್ತು. ಜಾತ್ರೆ, ಹಬ್ಬ ಹರಿದಿನಗಳು ಮಂಗಮಾಯವಾಗಿದ್ದವು, ದೇವಿಯ ಕೃಪೆಯಿಂದ ಕರೋನಾ ಕಾರ್ಮೋಡ ಕರಗಿದೆ ಮತ್ತೆ ಎಂದಿನಂತೆ ಜನಜೀವನ ಸಾಗುವಂತಾಗಲು ನಾವೆಲ್ಲ ಶ್ರೀ ಮಹಾಲಕ್ಷ್ಮೀ ದೇವಿಗೆ ಬೇಡಿಕೊಳ್ಳಬೇಕಾಗಿದೆ ಮುಂಬರುವ ದಿನಗಳಲ್ಲಿ ರೈತರ ಬದುಕು ಬಂಗಾರವಾಗಲಿ ಶ್ರೀ ಮಹಾಲಕ್ಷ್ಮೀ ದೇವಿಯಲ್ಲಿ ಪ್ರಾರ್ಥಿಸುತ್ತೇನೆ ಎಂದು ರಾಜ್ಯ ಸಭಾ ಸದಸ್ಯ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಈರಣ್ಣ ಕಡಾಡಿ ಹೇಳಿದರು.

ಮಂಗಳವಾರ ರಂದು ಮೂಡಲಗಿ ತಾಲೂಕಿನ ಮಸಗುಪ್ಪಿ ಗ್ರಾಮದ ಶ್ರೀ ಮಹಾಲಕ್ಷ್ಮೀದೇವಿ ಹಾಗೂ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ ಎತ್ತುಗಳ ತೆರೆಬಂಡಿ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಕಡಾಡಿ ಅವರು ಘಟಪ್ರಭೆ ನದಿಯ ತೀರದಲ್ಲಿ ಜನಿಸಿ ಭಕ್ತರ ಭಾಗ್ಯದಾತೆಯಾಗಿ ತನ್ನ ಕೀರ್ತಿಯನ್ನು ಜಗಕ್ಕೆ ತೋರಿದ, ನಂಬಿದವರ ಕೈ ಬಿಡದ ಇಷ್ಟಾರ್ಥ ಈಡೇರಿಸುವ ಶ್ರೀ ಮಹಾದೇವಿಯನ್ನು ಪ್ರತಿಯೊಬ್ಬರು ಪ್ರಾರ್ಥಿಸಿ ಆರಾಧಿಸೊಣ ಎಂದರು. ಆಧುನಿಕ ತಂತ್ರಜ್ಞಾನ ಯುಗದಲ್ಲಿ ದೇಶಿಯ ಕ್ರೀಡೆ, ಮನರಂಜನೆಗಳು ಮಾಯವಾಗುತ್ತಿದ್ದು, ಹಬ್ಬ ಹರಿದಿನಗಳಲ್ಲಿ ಗ್ರಾಮೀಣ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡುವ ಮೂಲಕ ಕಲೆ ಸಾಹಿತ್ಯ, ಸಂಸ್ಕøತಿಯನ್ನು ಬೆಳೆಸಿ ಉಳಿಸಬೇಕೆಂದರು.

ಈ ಸಂದರ್ಭದಲ್ಲಿ ಸುಣಧೋಳಿಯ ಶ್ರೀ ಜಡಿಸಿದ್ದೇಶ್ವರ ಮಠದ ಪರಮಪೂಜ್ಯ ಶ್ರೀ ಅಭಿನವ ಶಿವಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು, ಕಲ್ಲಪ್ಪ ಉಪ್ಪಾರ, ಸಾತಪ್ಪ ಕೊಳದೂರಗಿ, ಅಪ್ಪಯ್ಯ ಬಡ್ನಿಂಗೋಳ, ಲಕ್ಷ್ಮಣ ನರಗುಂದ, ಶಾಂತಪ್ಪ ಬಡ್ರಪ್ಪಗೋಳ, ಭರಮಪ್ಪ ಗಂಗನ್ನವರ,ವಿಠ್ಠಲ ಹೊಸೂರ, ಭೀಮಶೆಪ್ಪ ಬಡ್ನಿಂಗೋಳ, ಮಹಾಂತೇಶ ಯಕುಂಡಿ, ದುಂಡಪ್ಪ ಪಂತೋಜ, ರಾಮಪ್ಪ ತಿಗಡಿ, ಬಸವರಾಜ ಗಾಡವಿ, ಸಂಜು ಹೊಸಕೋಟಿ, ಬಸವರಾಜ ಭುಜನ್ನವರ, ಶ್ರೀ ಈಶ್ವರ ಗಾಡವಿ, ಪ್ರಕಾಶ ಗೊಂದಿ, ಬಸಪ್ಪ ಗಾಣಿಗೇರ, ಸೇರಿದಂತೆ ಜಾತ್ರಾ ಕಮೀಟಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದತ್ತಿನಿಧಿ ಕಾರ್ಯಕ್ರಮ

ಇದೇ ದಿ. 9 ರಂದು ಗುರುವಾರ ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ವತಿಯಿಂದ ಶ್ರೀಮತಿ ಸುಮಿತ್ರಾ ಚರಂತಿಮಠ,ದಿ....
- Advertisement -

More Articles Like This

- Advertisement -
close
error: Content is protected !!