ಸವದತ್ತಿ – “ಮಹಿಳೆಯರಲ್ಲಿ ಸಹಿಷ್ಣುತಾ ಭಾವನೆ ತಾಳ್ಮೆ, ಮಾತೃ ಹೃದಯಿ ಇನ್ನೂ ಅನೇಕ ಒಳ್ಳೆಯ ಗುಣಗಳು ಅವಳಲ್ಲಿ ಮನೆ ಮಾಡಿರುತ್ತವೆ.ಮಹಿಳೆಯರು ನಾವು ಹೆಣ್ಣು ಮಕ್ಕಳು ಎಂಬ ಕೀಳರಿಮೆಯಿಂದ ಹೊರ ಬಂದು ಸಾಧಕರಾಗಿ ಸಮಾಜದ ಸೇವೆ ಮಾಡುವ ಮನೋಭಾವ ಹೊಂದುವ ಮೂಲಕ ಬದುಕಬೇಕು. ಮಹಿಳೆಯರು ಸಾಧಕರಾಗಿ ಸಂಘಟನೆ ಮಾಡಿ ಹೆಣ್ಣು ಮಕ್ಕಳೆ ಹೆಣ್ಣು ಮಕ್ಕಳಿಗೆ ಸಹಾಯಮಾಡಿ ಮಾನಸಿಕವಾಗಿ ಸಾಧಿಸುವ ಛಲಗಾರಿಕೆ ಬೆಳೆಸಿಕೊಂಡು ಬೆಳೆಯಬೇಕು” ಎಂದು ಡಾಕ್ಟರ ನಯನಾ ಹೇಮಂತ ಭಸ್ಮೇ ಮಾತನಾಡಿದರು.
ಅವರು ಸ್ಥಳಿಯ ಪುರಸಭೆಯ ಸಭಾಭವನದಲ್ಲಿ ಪುರಸಭೆಯವರು ಆಚರಿಸಿದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಅದೇ ರೀತಿಯಾಗಿ ಮಹಿಳಾ ಸಂಘಗಳ ಮುಖ್ಯಸ್ಥರಾದ ಸವಿತಾ ಅ ಉಪ್ಪಾರ ಮಾತನಾಡಿ ಹೆಣ್ಣು ಮಕ್ಕಳಲ್ಲಿ ಏನೆಲ್ಲವನ್ನು ನಾನು ಸಾಧಿಸುವೆ ಎಂಬ ಛಲಗಾರಿಕೆ ಇರಬೇಕು ತೊಟ್ಟಿಲನ್ನು ತೂಗುವ ಕೈ ಈಗ ಜಗತ್ತನ್ನೇ ಆಳುವ ಸ್ಥಿತಿಗೆ ಮಹಿಳೆಯರು ಬೆಳವಣಿಗೆ ಹೊಂದುತ್ತಿರುವರು ಎಂದರು
ಪುರಸಭೆ ಉಪಾದ್ಯಕ್ಷ ದೀಪಕ ಜಾನ್ವೇಕರ ಸಸಿಗೆ ನೀರು ಹಾಕುವುದರ ಮುಖಾಂತರ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು ಕಾರ್ಯಕ್ರಮದ ಪ್ರಾರಂಭದಲ್ಲಿ ಇಂದಿರಾ ಕಬ್ಬಿನ ಮತ್ತು ಮೀನಾಕ್ಷಿ ಕಬ್ಬಿನ ರವರು ಪ್ರಾರ್ಥನಾ ಗೀತೆ ಹೇಳಿದರು. ನಂತರ ಸಮುದಾಯ ಸಂಘಟನಾಧಿಕಾರಿ ಎಸ್ ವಾಯ್ ಹಾದಿಮನಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ಮೇಲೆ ಅತಿಥಿಗಳಾಗಿ ಪುರಸಭೆಯ ಕಾರ್ಯಾಲಯ ವ್ಯವಸ್ಥಾಪಕರಾದ ಎಮ್ ಆರ್ ಪಾಟೀಲ.ಉಪಸ್ಥಿತರಿದ್ದರು