spot_img
spot_img

ಮಹಿಳೆಯರ ಅವಮಾನ, ಖಂಡನೆ

Must Read

spot_img

ಮೂಡಲಗಿ: 2ಎ ಮೀಸಲಾತಿಗಾಗಿ ಪಂಚಮಸಾಲಿ ಶ್ರೀಗಳಿಂದ ಅಖಂಡ 36 ದಿನಗಳವರೆಗೆ ಪಾದಯಾತ್ರೆ, ಬೃಹತ್ ಸಮಾವೇಷ, ಧರಣಿ ಸತ್ಯಾಗ್ರಹ ಹೀಗೆ ನಾನಾ ತರಹದ ಹೋರಾಟದ ಮೂಲಕ ಮೀಸಲಾತಿಗಾಗಿ ಹಕ್ಕೊತ್ತಾಯಕ್ಕಾಗಿ ಮನವಿ ಮಾಡಿಕೊಂಡರೂ ಸರಕಾರ ಇನ್ನೂವರೆಗೆ ಯಾವುದೆ ಭರವಸೆ ಕೂಡ ನೀಡದಿರುವುದು ವಿಷಾದನೀಯ ಹಾಗೂ ಮೀಸಲಾತಿಗಾಗಿ ನಡೆದ ಹೋರಾಟಗಳಿಗೆ ಬೆಲೆಯೇ ಇಲ್ಲದಂತಾಗಿದೆ ಎಂದು ಮೂಡಲಗಿ ತಾಲೂಕಾ ಪಂಚಮಸಾಲಿ ಅಭಿವೃದ್ದಿ ಸಮಿತಿ ಯುವ ಮುಖಂಡ ಈಶ್ವರ ಢವಳೇಶ್ವರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಹಿಳಾ ದಿನಾಚರಣೆಯಂದು ಚನ್ನಮ್ಮ ಬಳಗದ ರಾಜ್ಯಧ್ಯಕ್ಷೆ ವೀಣಾ ಕಾಶಪ್ಪನವರ ಹಾಗೂ ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಈ ಹೋರಾಟದ ಕುರಿತು ಮಹಿಳಾ ನಿಯೋಗವು ಮುಖ್ಯಮಂತ್ರಿಗಳ ನಿವಾಸಕ್ಕೆ ತೆರಳಿ 2ಎ ಮೀಸಲಾತಿ ನೀಡುವಂತೆ ಮನವಿ ಸಲ್ಲಿಸಲು ತೆರಳಿದ ಸಮಯದಲ್ಲಿ ಅವರನ್ನು ಬಂಧಿಸಿ ಬಿಡುಗಡೆಗೊಳಿಸಿ ದೌರ್ಜನ್ಯ ಎಸಗಿದ ಘಟನೆ ಹೋರಾಟ ಹತ್ತಿಕ್ಕುವಂತ ಕಾರ್ಯವಾಗಿದೆ ಹಾಗೂ ಸ್ರೀ ಕುಲಕ್ಕೆ ಅವಮಾನ ಮಾಡಿದಂತಾಗಿದೆ ಮಹಿಳೆಯರಿಗೆ ಗೌರವ ನೀಡದ ಸರಕಾರಕ್ಕೆ ಮುಂದಿನ ದಿನಮಾನದಲ್ಲಿ ತಕ್ಕ ಪಾಠ ಕಲಿಸುತ್ತೇವೆ ನಡೆದ ಘಟನೆಯನ್ನು ಮೂಡಲಗಿ ಪಂಚಮಸಾಲಿ ಲಿಂಗಾಯತ ಅಭಿವೃದ್ದಿ ಸಮಿತಿಯು ಬಲವಾಗಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.

- Advertisement -
- Advertisement -

Latest News

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ- ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಂಬನಿ

ಬೆಂಗಳೂರು- ಶ್ರವಣ ಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನಕ್ಕೆ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಂಬನಿ ಮಿಡಿದಿದ್ದಾರೆ. ಜೈನ್ ಸಮುದಾಯದ ಸಮಗ್ರ...
- Advertisement -

More Articles Like This

- Advertisement -
close
error: Content is protected !!