Homeಸುದ್ದಿಗಳುಮಾ. 7 ರಿಂದ ಸಿದ್ಧ ಸಮಾಧಿ ಯೋಗ ಶಿಬಿರ

ಮಾ. 7 ರಿಂದ ಸಿದ್ಧ ಸಮಾಧಿ ಯೋಗ ಶಿಬಿರ

ಮೂಡಲಗಿ: ಬೆಂಗಳೂರಿನ ಋಷಿ ಸಂಸ್ಕೃತಿ ವಿದ್ಯಾ ಕೇಂದ್ರದಿಂದ ಜಮಖಂಡಿಯ ಅರುಣ ಗುರೂಜೀ ಅವರ ಮಾರ್ಗದರ್ಶನದಲ್ಲಿ ಮಾ. 7 ರಿಂದ ಬೆಳಿಗ್ಗೆ 5.30ಕ್ಕೆ ‘ಸಿದ್ಧ ಸಮಾಧಿ ಯೋಗ-ಎಸ್‍ಎಸ್‍ವೈ’ ಶಿಬಿರವನ್ನು ಸ್ಥಳೀಯ ಶಿವಬೋಧರಂಗ ಮಠದ ಆವರಣದಲ್ಲಿ ಏರ್ಪಡಿಸಿರುವರು.

ಪ್ರಾಣಾಯಾಮ, ಧ್ಯಾನ, ಯೋಗಾಸನ, ಸೂರ್ಯ ನಮಸ್ಕಾರ, ಗಾಯತ್ರಿ ಮಹಾಮಂತ್ರೋಪದೇಶ ಇವುಗಳ ಜೊತೆಗೆ ಉದ್ವೇಗ, ಒತ್ತಡ ನಿವಾರಣೆ, ಆಹಾರ ಕ್ರಮ, ವಿವಿಧ ಕಾಯಿಲೆಗಳ ನಿವಾರಣೋಪಾಯಗಳನ್ನು ಶಿಬಿರದಲ್ಲಿ ಹೇಳಿಕೊಡುವರು.

ಶಿಬಿರದ ಬಗ್ಗೆ ಪರಿಚಯ ಕಾರ್ಯಕ್ರಮವು ಮಾ. 6ರಂದು ಸಂಜೆ 5.30ಕ್ಕೆ ಶಿವಬೋಧ ಮಠದ ಆವರಣದಲ್ಲಿ ಜರುಗಲಿದೆ. ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸಂಘಟಕರು ತಿಳಿಸಿದ್ದಾರೆ.

ಅಧಿಕ ಮಾಹಿತಿ ಪಡೆಯಲು ಸಂಪರ್ಕಕ್ಕಾಗಿ: ಮೊ. 7760122100, 9448637916, 9481292416 ಸಂಪರ್ಕಿಸಲು ತಿಳಿಸಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group