ಮುಷ್ಕರ ಮತ್ತು ಆರ್ಥಿಕ ಪರಿಸ್ಥಿತಿ

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಪ್ರಚಲಿತದಲ್ಲಿರುವ ಒಂದು ವಿದ್ಯಮಾನಗಳಲ್ಲಿ ಮುಷ್ಕರ ಕೂಡ ಒಂದು. ಬಂದ್ ಬಂದ್ ಬಂದ್.ಏನಿದು?ಏಕೆ ಮಾಡಬೇಕು? ಇದರಿಂದ ಆಗುವ ಬದಲಾವಣೆಗಳೇನು? ಯಾರಿಗೆ ಲಾಭ? ಯಾರಿಗೆ ನಷ್ಟ? ಇವೆಲ್ಲವನ್ನೂ ಪರಿಗಣಿಸಿದಾಗ ಸಿಗುವ ಉತ್ತರ ????? ಇದೊಂದೇ. ಹೌದು ಒಮ್ಮೆ ಮುಷ್ಕರದ ಬಗ್ಗೆ ಅವಲೋಕಿಸಿದಾಗ ನಮಗೆ ಸಿಗುವ ಉತ್ತರಗಳೆಲ್ಲವೂ ಶೂನ್ಯ. ಕಾರಣ ಇದು ಜನ ಸಾಮನ್ಯರ ಜನಜೀವನದ ಮೇಲೆ ಪ್ರಭಾವ ಬೀರುತ್ತದೆ. ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುತ್ತದೆ. ಇಡೀ ದೇಶದ ಆರ್ಥಿಕ ಪರಿಸ್ಥಿತಿ ಹಳಿ ತಪ್ಪುತ್ತದೆ. ಇದನ್ನೆಲ್ಲ ನಾವು ಯೋಚನೆ ಮಾಡುವುದಿಲ್ಲ. ಕಾರಣ ಇಷ್ಟೇ ಇಲ್ಲಿ ಕೆಲವು ಪಟ್ಟ ಭದ್ರ ಹಿತಾಸಕ್ತಿಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಾಡುವ ಒಂದು ಸಾಂಪ್ರದಾಯಿಕ ಶೈಲಿ. ಇದಕ್ಕಾಗಿ ಮುಗ್ಧ ಜನರನ್ನು ಆಕರ್ಷಿಸುತ್ತವೆ.ಜೊತೆಗೆ ಅವರು ತಮ್ಮ ನಾಯಕರ ಮಾತಿಗೆ ಕಟ್ಟು ಬಿದ್ದು ಇದರಲ್ಲಿ ಪಾಲ್ಗೊಂಡು ತಮ್ಮ ಜೀವನವನ್ನು ವ್ಯರ್ಥ ಮಾಡಿಕೊಳ್ಳುತ್ತಾರೆ. ಪಾಪ ಇದರ ಅರಿವು ಅವರಿಗಿಲ್ಲ. ಒಂದಷ್ಟು ಹಣ,ಹೆಂಡ,ಮಾಂಸ ಮುಂತಾದವುಗಳ ಆಸೆಗೆ ಬಲಿಯಾಗುತ್ತಿದ್ದಾರೆ.

ಒಂದು ದಿನ ಮುಷ್ಕರ ಮಾಡುವ ಮೂಲಕ ನಮ್ಮ ಒಂದು ದಿನವನ್ನು ಕಳೆದುಕೊಳ್ಳುತ್ತೇವೆ. ಜೊತೆಗೆ ಅಂದಿನ ನಮ್ಮ ದುಡಿಮೆಯನ್ನು ಕೂಡ. ನಮಗೆ ಇದು ಬೇಕಿಲ್ಲ. ನಮಗೆ ಬೇಕಿರುವುದು.ನಮ್ಮ ನಾಯಕರ ಮಾತೊಂದೇ ಮುಷ್ಕರ. ನಾವು ನಮ್ಮನ್ನಾಳುವ ಐದು ವರ್ಷದ ನಾಯಕರಿಗೆ ನಮ್ಮ ಒಂದು ದಿನವನ್ನು ಮಾರಾಟ ಮಾಡುತ್ತೇವೆ.ಅವತ್ತಿನ ದಿನದ ನಮ್ಮ ಮಕ್ಕಳ ಭವಿಷ್ಯದ ಮೇಲೆ ನಾವು ಯಾವತ್ತೂ ಯೋಚಿಸುವುದಿಲ್ಲ. ಒಂದು ದಿನ ಅಲ್ವ.ಅನ್ನುವ ತಾತ್ಸಾರ ಮನೋಭಾವ ನಮ್ಮದು. ಮುಂದೆ ನಮ್ಮನ್ನು ಮುಪ್ಪಾವಸ್ತೆಯಲ್ಲಿ ನಮ್ಮನ್ನು ಸಾಕಿ ಸಲಹುವ ನಮ್ಮ ಮಕ್ಕಳು ನಮಗೆ ಕಾಣಿಸುವುದಿಲ್ಲ. ನಮಗೆ ಬೇಕಾಗಿರುವುದು ಒಂದೇ ಬಂದ್. ಇದರಿಂದ ಒಂದು ದಿನ ಏನೇನು ನಷ್ಟವಾಗುತ್ತದೆ ಎನ್ನುವುದನ್ನು ಸ್ವಲ್ಪ ಯೋಚಿಸೋಣ.

ಒಂದು ದಿನ ನಾವು ಮಾಡುವ ಮುಷ್ಕರದಿಂದ ಬೀದಿ ಬದಿಯ ಗಾಡಿಯಲ್ಲಿ ಊರೂರು ಸುತ್ತಿ ಅಲೆದು ಹೊಟ್ಟೆ ಪಾಡಿಗೆ ವ್ಯಾಪಾರ ಮಾಡುವ ಸಣ್ಣ ವ್ಯಾಪಾರಿಗಳ ಗತಿಯೇನು? ಅವನನ್ನೇ ನಂಬಿಕೊಂಡು ಬಂದಿರುವ ಅವನ ಇಡೀ ಕುಟುಂಬದ ಸದಸ್ಯರ ಸ್ಥಿತಿಯನ್ನು ನಾವು ಯಾವತ್ತಾದರೂ ಯೋಚನೆ ಮಾಡಿದ್ದೇವೆಯೇ? ಇಲ್ಲ ಮಾಡುವುದೂ ಇಲ್ಲ. ಏಕೆಂದರೆ ನಮಗೆ ಅಷ್ಟು ವ್ಯವಧಾನ ಇಲ್ಲ. ಇಡೀ ಒಂದು ವರ್ಷ ಓದಿರುವ ನಮ್ಮ ಮಕ್ಕಳ ಭವಿಷ್ಯದ ಕೊನೆಯ ಪರೀಕ್ಷೆ ಅಂದೇ ಇದ್ದಾಗ ಆ ಮಕ್ಕಳ ಭವಿಷ್ಯದ ಗತಿಯೇನು? ಆ ಮಗುವಿನ ಭವಿಷ್ಯವನ್ನು ಬದಲಾಯಿಸುವ ಶಕ್ತಿ ನಾವು ಮಾಡುವ ಮುಷ್ಕರಕ್ಕಿದೆಯೇ? ಇದ್ದರೆ ಮಾಡಿ ಬಿಡೋಣ. ಅಥವಾ ಮೇಲೆ ಹೇಳಿದ ಆ ಕುಟುಂಬದ ತುತ್ತಿನ ಚೀಲ ತುಂಬುವ ಶಕ್ತಿ ಇದೇಯೇ? ಇಲ್ಲ. ಇದಾವುದೂ ಇಲ್ಲ. ಒಂದು ದಿನ ನಾವು ನಮ್ಮ ಕೆಲಸಗಳನ್ನೆಲ್ಲ ಮರೆತು ಯಾರೋ ಕೊಡುವ ಶ್ರೀಮಂತ ಭಿಕ್ಷೆಗೆ ಕೈ ಚಾಚಿ ನಿಂತಿರುವ ಅಸಹಾಯಕರು ನಾವು. ಅಂದು ನನ್ನನ್ನು ನಾನು ತಿಳಿದುಕೊಂಡಿದ್ದರೆ,ಇಲ್ಲಿಗೆ ಬರುತ್ತಿರಲಿಲ್ಲ. ನಾವು ವಾಸ್ತವವಾಗಿ ಬದುಕು ನಡೆಸಬೇಕಿದೆ. ನಮ್ಮ ಕುಟುಂಬದ ಸದಸ್ಯರ ಜೊತೆಗೆ ಕುಳಿತು ನಮ್ಮವೇ ಸಮಸ್ಯೆಗಳನ್ನು ಬಗೆಹರಿಸಲು ನಾವು ಪ್ರಯತ್ನಿಸಿಲ್ಲ‌ ನಮ್ಮ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿಲ್ಲ. ನಾವೇಕೆ ಹೀಗೆ ಬದುಕಬೇಕು ಎನ್ನುವ ಸಾಮಾನ್ಯ ಪ್ರಶ್ನೆ ಕೂಡ ನಮ್ಮನ್ನು ಯಾವತ್ತಿಗೂ ಕಾಡಲಿಲ್ಲ.ನಮ್ಮ ಕುಟುಂಬದ ಸದಸ್ಯರಿಗೆ ನಮ್ಮ ಸಮಯವನ್ನು ಮೀಸಲಿಟ್ಟಿಲ್ಲ ಕೇವಲ ಗುಂಪುಗಾರಿಕೆ. ಯಾವುದಕ್ಕೆ ಈ ಗುಂಪುಗಾರಿಕೆ. ಒಂದು ಒಳ್ಳೆಯ ಕೆಲಸಕ್ಕೆ ಮೀಸಲಿಡೋಣ, ನಮ್ಮ ಸಮಯವನ್ನು.

- Advertisement -

ಒಂದು ದಿನ ಮುಷ್ಕರ ಮಾಡಿ ಅಂದು ಸಾರ್ವಜನಿಕ ಆಸ್ತಿಗೆ ಧಕ್ಕೆ ಉಂಟು ಮಾಡುತ್ತೇವೆ. ನಮ್ಮೂರಿಗೆ ಬರುವ ಬಸ್ಸಿಗೆ ಕಲ್ಲು ಹೊಡೆದು ನಮ್ಮ ಕ್ರೌರ್ಯವನ್ನು ಹೊರ ಹಾಕುತ್ತೇವೆ. ಇದರಿಂದ ನಷ್ಟ ನಮಗೆ ನಾಳೆ ನಮ್ಮೂರಿಗೆ ಬರುವ ಬಸ್ ಬರುವುದಿಲ್ಲ. ಅದೇ ಬಸ್ಸಿನಲ್ಲಿ ನಮ್ಮ ಕುಟುಂಬದ ಸದಸ್ಯರು ಪ್ರಯಾಣಿಸುತ್ತಿದ್ದರೆ ಅವರ ಗತಿ ಅಧೋಗತಿ .ನಾವು ಮಾತನಾಡುತ್ತೇವೆ. ನಾನೇ ಮುಂದಿನ ಗಾಜಿಗೆ ಕಲ್ಲು ಹೊಡೆದದ್ದು.ನೀನು ಹೊಡೆದದ್ದು ಹಿಂದಿನ ಗಾಜು ಎಂದು. ಸತ್ಯ ನಾವಿಬ್ಬರೇ ಒಡೆದವರು. ಆದರೆ ನಾಳೆ ಇದಕ್ಕೆ ತೆರಿಗೆ ಪಾವತಿ ಮಾಡುವವರೂ ನಾವೇ. ಒಂದು ಕಲ್ಲು ಹೊಡೆದುದಕ್ಕೆ ಇಡೀ ಬಸ್ಸಿಗೆ ತೆರಿಗೆ ಪಾವತಿ ಮಾಡುತ್ತೇವೆ. ಅದೇ ಒಂದು ದಿನದ ದುಡಿಮೆಯನ್ನು. ಬಸ್ಸಿನ ಟೈರಿಗೆ ಬೆಂಕಿ ಹಚ್ಚಿ ಪರಾಕಾಷ್ಠೆಯನ್ನು ತಲುಪುತ್ತೇವೆ.ಇದರಿಂದ ಉಂಟಾಗುವ ವಿಷ ರಾಸಾಯನಿಕ ಹೊಗೆ ನಮ್ಮ ಗಾಳಿಯಲ್ಲಿ ಸೇರಿ ಭೀಕರ ರೋಗಗಳನ್ನು ಉಂಟುಮಾಡುತ್ತವೆ. ಇದಕ್ಕೆ ವೈದ್ಯರ ಬಳಿ ಪ್ರತ್ಯೇಕವಾಗಿ ತೆರಿಗೆ ಪಾವತಿ ಮಾಡುತ್ತೇವೆ. ಅದೇ ದಿನ ನಮ್ಮ ಕುಟುಂಬದ ಸದಸ್ಯರಿಗೆ ಯಾವುದಾದರೂ ವೈದ್ಯರು ಹೆರಿಗೆ ಮಾಡಿಸುವ ದಿನಾಂಕವನ್ನು ನಿಗದಿಪಡಿಸಿದ್ದರೆ,ಅಂದು ನಮ್ಮಿಂದಾದ ಮುಷ್ಕರದ ಕಾರಣದಿಂದ ಯಾವುದೇ ರೀತಿಯ ಸಂಚಾರ ವ್ಯವಸ್ಥೆ ಇಲ್ಲದಿದ್ದಾಗ ನಮ್ಮ ಕುಟುಂಬದ ಆ ಸದಸ್ಯೆಯ ಪಾಡೇನು? ಅನಾವಶ್ಯಕವಾಗಿ ಒಂದು ಜೀವದ ಜೊತೆಗೆ ಇನ್ನೂ ಪ್ರಪಂಚ ನೋಡದ ಮತ್ತೊಂದು ಜೀವವನ್ನು ಬಲಿ ತೆಗೆದುಕೊಳ್ಳುತ್ತೇವೆ.ಇದೇ ರೀತಿ ನಮ್ಮ ಕುಟುಂಬದ ಸದಸ್ಯರಿಗೆ ಕಾಯಿಲೆಗಳು ಉಲ್ಬಣಗೊಂಡು ಕೊನೆಯ ಹಂತಕ್ಕೆ ತಲುಪಿದಾಗ ಅವರನ್ನು ಬದುಕಿಸಲು ಯಾವ ವೈದ್ಯರು ಹೇಗೆ ಬರುತ್ತಾರೆ ಯೋಚಿಸಿ.

ಒಂದು ದಿನದ ಮುಷ್ಕರದ ಕಾರಣದಿಂದ ಒಂದು ಇಡೀ ಕುಟುಂಬದ ಸದಸ್ಯರು ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಧರಿಸಿ ಈ ಲೋಕ ಬಿಟ್ಟು ಹೋಗುತ್ತಾರೆ, ಇದಕ್ಕೆ ಹೊಣೆಗಾರಿಕೆ, ಸಹಭಾಗಿತ್ವ ಯಾರದು? ಮುಷ್ಕರ ಹೂಡಿದ ನಾಯಕರು ತೆಗೆದುಕೊಳ್ಳುತ್ತಾರೆಯೇ? ಯಾರು ತೆಗೆದುಕೊಳ್ಳುವುದಿಲ್ಲ. ಇದಕ್ಕೆ ನಾವೇ ಸ್ವತಃ ಹೊಣೆಗಾರರು. ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸುವ ನಾವು ಅವರ‌ ಅಂದಿನ ದುಡಿಮೆಯನ್ನು ಕಟ್ಟಿಕೊಡಲು ಸಾಧ್ಯವೇ? ಯಾವ ಕಾರಣಕ್ಕೂ ಸಾದ್ಯವಿಲ್ಲ. ಹಾಗಾದರೆ ಅವರ ದುಡಿಮೆಯನ್ನು ಕಿತ್ತುಕೊಳ್ಳುವ ಹಕ್ಕೇನಿದೆ? ಅವರ ದುಡಿಮೆಯನ್ನು ಕಟ್ಟಿಕೊಡುವ ಶಕ್ತಿ ನಮ್ಮ ಮುಷ್ಕರಕ್ಕಿದ್ದರೆ ಮಾಡೋಣ. ಇದರಿಂದ ನಷ್ಟ ಅನುಭವಿಸುವುದು ನಾವುಗಳೇ ನೆನಪಿರಲಿ.

ನಮ್ಮ ಕೆಲಸ ಕಾರ್ಯವನ್ನು ಬಿಟ್ಟು ಇದರಲ್ಲಿ ಪಾಲ್ಗೊಂಡು ನಮ್ಮ ದೇಶದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸ್ಥಿತಿಯನ್ನು ಹಾಳು ಮಾಡುವುದು ಎಷ್ಟು ಸೂಕ್ತ. ಮುಷ್ಕರ ಹೂಡಿದ ಪರಿಣಾಮ ಗೊತ್ತಾಗುವುದು ಯಾವಾಗ? ನಾವು ಮುಷ್ಕರ ಹೂಡಿದರೆ ತಕ್ಷಣ ಪರಿಣಾಮ ಬೀರುತ್ತದೆಯೇ? ಇಲ್ಲ. ಅದಕ್ಕೆ ಮತ್ತೆ ಕೆಲವು ವರ್ಷಗಳ ಕಾಲ ಕಾಯಬೇಕು. “ಎಲ್ಲಿಯ ವರೆಗೆ ಹೋರಾಟ, ನಿಲ್ಲುವ ವರೆಗೆ ಹೋರಾಟ” ” ಬೇಕೇ ಬೇಕು,ನ್ಯಾಯ ಬೇಕು” ಈ ಎರಡು ವಾಕ್ಯಗಳು ಪ್ರತಿಧ್ವನಿಸಿ ಸಂಜೆ ಮತ್ತೆ ಮನೆಗೆ ಬರುತ್ತೇವೆ.ಮುಗಿಯಿತು ನಮ್ಮ ಮುಷ್ಕರ. ಮನೆಗೆ ಬಂದ ಮೇಲೆ ಸಂಸಾರದ ಜವಾಬ್ದಾರಿ ಹೊತ್ತಿದ್ದ ನಾವು ಯಾರದೋ ಕರೆಗೆ ಓಗೊಟ್ಟು ನಮ್ಮ ಸಂಸಾರದ ಜವಾಬ್ದಾರಿ ಮರೆತು ಹೋಗುತ್ತಿದ್ದೇವೆ. ನಮ್ಮದೇ ಮಕ್ಕಳ ಬಗ್ಗೆ ಒಂದಷ್ಟು ಕಾಲ ಚಿಂತನೆ ನಡೆಸಿದ್ದರೆ,ಹೇಗಿರುತ್ತಿತ್ತು.

ಈ ಮುಷ್ಕರದ ಕಾರಣದಿಂದ ಜಾತಿ,ಧರ್ಮ,ಲಿಂಗ,ಅಸಮಾನತೆ, ದ್ವೇಷ ಮುಂತಾದ ಕೆಟ್ಟ ಗುಣಗಳು ನಮ್ಮನ್ನು ಸುತ್ತಿಹಾಕಿಕೊಳ್ಳುತ್ತವೆ. ನಮ್ಮ ನೆರೆಹೊರೆಯ ಕುಟುಂಬದ ಸದಸ್ಯರ ನಡುವೆ ವೈಮನಸ್ಸು,ದ್ವೇಷ, ಗುದ್ದಾಟ ಎಲ್ಲವೂ ನಡೆದು ಹೋಗುತ್ತವೆ. ಕೊನೆಗೆ ನಾವು ಏನನ್ನು ಸಾಧಿಸಿದಂತಾಯಿತು.ಈ ಪ್ರಪಂಚ ಬಿಟ್ಟು ಹೋಗುವ ಮುನ್ನ ನಾವು ಬದುಕಿದ್ದೇ ನಿರರ್ಥಕ ಎಂದೆನಿಸುತ್ತದೆ. ವರ ಕವಿ ದ ರಾ ಬೇಂದ್ರೆ ಅವರು ಹೇಳಿದಂತೆ “ಇರುವ ನಾಲ್ಕಾರು ದಿನ ನಕ್ಕಾರ ಕಳೆಯೋಣ.ಯಾಕಾರ ಕೆರಳೋಣ” ಎನ್ನುವ ನುಡಿ ಸಾರ್ಥಕ ಎನಿಸುತ್ತದೆ.


ಇಂಗಳಗಿ ದಾವಲಮಲೀಕ
ಹತ್ತಿಮತ್ತೂರು

- Advertisement -

LEAVE A REPLY

Please enter your comment!
Please enter your name here

- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!