spot_img
spot_img

ಮೂಕ ಪೃಥ್ವಿಗೆ ಮಾತು ಕೊಟ್ಟ ಕಿಶೋರಿ ಗ್ರೇತಾ

Must Read

- Advertisement -

ನಿನ್ನೆ ದಿನ ಕೈ ಸೇರಿದ ಖ್ಯಾತ ಲೇಖಕ ಹಾಗೂ ನನ್ನ ಗುರುಗಳಾದ ನಾಗೇಶ ಹೆಗಡೆ ವಿರಚಿತ ಪುಸ್ತಕ “ಮೂಕ ಪೃಥ್ವಿಗೆ ಮಾತು ಕೊಟ್ಟ ಕಿಶೋರಿ ಗ್ರೇತಾ ಥನ್ ಬರ್ಗ”

ಗ್ರೇತಾ ಎನ್ನುವ ಶಾಲೆಯ ಹುಡುಗಿಯ ಹೋರಾಟದ ಕುರಿತ ಬರಹಗಳು ಪರಿಣಾಮಕಾರಿ ಪ್ರಭಾವ ಬೀರಿದ ಬಗ್ಗೆ ಒಂದೆರಡು ನನ್ನ ಅನಿಸಿಕೆಗಳು.

“ಈಗಿನ ಮಕ್ಕಳಿಗೆ ವಿಲಾಸೀ ಜೀವನ ಅಂದರೆ ಇಷ್ಟ. ವಿಧೇಯತೆಯನ್ನು ಧಿಕ್ಕರಿಸುವುದೆಂದರೆ ಇಷ್ಟ. ಅಧಿಕಾರದಲ್ಲಿದ್ದವರನ್ನು ಕಂಡರೆ ತಿರಸ್ಕಾರ ಹಿರಿಯರ ಕಂಡರೆ ಅಗೌರವ” ಈ ಮಾತನ್ನು 2400 ವರ್ಷಗಳ ಹಿಂದೆ ತತ್ವಜ್ಞಾನಿ ಸಾಕ್ರೆಟೀಸ್ ಹೇಳಿದ್ದ ಎನ್ನುವ ಮಾತಿನಿಂದ ಆರಂಭವಾಗುತ್ತದೆ ಈ ಪುಸ್ತಕ.

- Advertisement -

ದೊಡ್ಡವರ ದಾರಿಯಲ್ಲಿ ಎಡವಟ್ಟಾಗಿವೆ.ಕಚ್ಚಾ ತೈಲದಿಂದ ತಯಾರಾದ ಪ್ಲಾಸ್ಟಿಕ್ ಅಡ್ಡ ಪರಿಣಾಮಗಳ ಬಗ್ಗೆ ಎಚ್ಚರವಹಿಸಲಿಲ್ಲ. ಖನಿಜಗಳನ್ನು ಎತ್ತುವ ಭರದಲ್ಲಿ ಇಡೀ ಪೃಥ್ವಿಯನ್ನು ಅಸ್ವಸ್ಥಗೊಳಿಸುತ್ತಿರುವುದನ್ನು ಗಮನಿಸಲೂ ಯಾರಿಗೂ ಪುರಸೊತ್ತಿಲ್ಲ. ಇಂತಹ ಸಮಯದಲ್ಲಿ 20 ಅಗಷ್ಟ 2018 ರಂದು ಗ್ರೇತಾ ಒಂಭತ್ತನೇಯ ತರಗತಿಯ ಗ್ರೇತಾ ಪಾಟಿಚೀಲ ತೆಗೆದುಕೊಂಡು ಶಾಲೆಯ ಬದಲು ಸ್ವೀಡನ್ನಿನ ಸಂಸತ ಭವನದ ಎದುರಿನ ಕಟ್ಟೆಯ ಮೇಲೆ ತಾನೇ ಕೈಯಾರ ಬರೆದು ತಂದ ಫಲಕ ಜೊತೆ ಧರಣಿ ಕೂತಳು.ಅವಳದ್ದು ಪೃಥ್ವಿಯ ಒಳಿತಿಗಾಗಿ ಒಂಟಿಯಾಗಿ ಧರಣಿ ಕೂತುಕೊಳ್ಳುವ ನಿರ್ಧಾರ ಮಾಡಿದ್ದಳು. “ಸ್ಕೂಲ್ ಸ್ಟ್ರೈಕ್ ಫಾರ್ ಕ್ಲೈಮೇಟ್’ ಎನ್ನುವ ವಾಕ್ಯದೊಂದಿಗೆ ಒಂಟಿಯಾಗಿ ಪ್ರಾರಂಭವಾದ ಹುಡುಗಿಯ ಧರಣಿ ರಾಷ್ಟ್ರವ್ಯಾಪಿ ಪಸರಿಸಿ ಕೊನೆಗೆ 130 ದೇಶದ ಜನ ಬೀದಿಗಿಳಿಯುತ್ತಾರೆ.

ಮುಂದೆ ಮೌನಿಯಾಗಿದ್ದ ಹುಡುಗಿಗೆ ಮಾತು ಜ್ಯೋತಿಯಾಗಿ ಬ್ರಿಟನ್, ಫ್ರಾನ್ಸ ಸಂಸತ್ತಿನಲ್ಲಿ ಮಾತನಾಡಿ ವಿಶ್ವಸಂಸ್ಥೆಯಲ್ಲಿ ಮಾತನಾಡುವಾಗ 2019 ಸೆಪ್ಟೆಂಬರ 23 ರಂದು ಅವಳ ದೇಹ ಭಾಷೆ ಭೂಮಾತೆಯ ಅವತಾರದಂತಿತ್ತು. ಕೆಂಪು ಬಟ್ಟೆ ತೊಟ್ಟು, ಕಣ್ಣರಳಿಸಿ ಕೋಪದ ಕಿಡಿ ಸುರಿಸುತ್ತಾ ಗದ್ಗದ ಕಂಠದಿಂದ ಈ ಕಿಶೋರಿ ವಿಶ್ವನಾಯಕರ ಉದ್ದೇಶಿಸಿ ನಿಖರ ಅಂಕಿಅಂಶಗಳ ಸಮೇತ ಮತ್ತೆ ಮತ್ತೆ ‘ನಿಮಗೇಷ್ಟು ಧೈರ್ಯ?” ಎಂದು ಕೇಳಿದ್ದು ಜಗತ್ತಿನ ಮಾಧ್ಯಮಗಳಲ್ಲಿ ಪ್ರತಿಧ್ವನಿಸಿತು.ಮುಂದೆ ಈ ಹುಡುಗಿಗೆ ಗೌರವ ಡಾಕ್ಟರೇಟ್ ,ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಗೆ ನಾಮಾಂಕನಗೊಂಡಳು. ಟೈಮ್ ಪತ್ರಿಕೆಯ ಮುಖಪುಟ ಅಲಂಕರಿಸಿದಳು.ಭೂಮಿ ಸಂಕಟಕ್ಕೆ ಸಿಲುಕಿದ ಈ ಸಂದರ್ಭದಲ್ಲಿ ಪೃಥ್ವಿಮಿತ್ರರು ಇವಳನ್ನು ಮೇಲಕ್ಕೆ ಚಿಮ್ಮಿಸಿದ್ದಾರೆ.


ವಿನೋದ ರಾ ಪಾಟೀಲ ಸಿ.ಆರ್.ಪಿ ಎಮ್.ಕೆ. ಹುಬ್ಬಳ್ಳಿ

- Advertisement -
- Advertisement -

Latest News

ಸ್ವಾಮಿ ವಿವೇಕಾನಂದರ ಬೆಳಗಾವಿ ಭೇಟಿಯ ಸ್ಮಾರಕ ಭವನ

ಬೆಳಗಾವಿ- ಭಾರತದ ಶೂರ ಸನ್ಯಾಸಿ ಸ್ವಾಮಿ ವಿವೇಕಾನಂದ ಅವರು ಸನ್ ೧೮೯೨ ರಲ್ಲಿ ಕರ್ನಾಟಕದ ಬೆಳಗಾವಿಗೆ ಭೇಟಿ ಕೊಟ್ಟು ಅಕ್ಟೋಬರ್ ೧೬ ರಿಂದ ೨೭ ರ...
- Advertisement -

More Articles Like This

- Advertisement -
close
error: Content is protected !!
Join WhatsApp Group