ಮೂಡಲಗಿ ಮಾ.೬ – ನಾಟ್ಯ ರಾಣಿ ಜ್ಯೋತಿ ಬಳ್ಳಾರಿ ಇವರ ದುರ್ಗಾಶಕ್ತಿ ನಾಟ್ಯ ಸಂಸ್ಥೆಯ ವತಿಯಿಂದ ಇಂದಿನಿಂದ ಎರಡು ದಿನ ನಗರದ ಶ್ರೀ ವೆಂಕಟೇಶ ಚಿತ್ರಮಂದಿರದಲ್ಲಿ ಹಾಸ್ಯ ರಸಮಂಜರಿ ಕಾರ್ಯಕ್ರಮ ನಡೆಯಲಿದ್ದು ಪ್ರಮುಖ ಆಕರ್ಷಣೆಯಾಗಿ ಝೀ ಟಿವಿಯ ‘ ಪಾರು ‘ ಮೋಕ್ಷಿತಾ ಪೈ ಭಾಗವಹಿಸಲಿದ್ದಾರೆ.
ಹಾಸ್ಯ ರಸಮಂಜರಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಸಾಯಂಕಾಲ ೬ ಕ್ಕೆ ನಡೆಯಲಿದೆ.
ಸಮಾರಂಭದ ಸಾನ್ನಿಧ್ಯವನ್ನು ಮೂಡಲಗಿ ಸಿದ್ಧ ಸಂಸ್ಥಾನಮಠದ ಅಮೃತ ಬೋಧ ಸ್ವಾಮಿಗಳು ವಹಿಸುವರು. ಉದ್ಘಾಟನೆಯನ್ನು ಗೋಕಾಕದ ಸರ್ವೋತ್ತಮ ಭೀ. ಜಾರಕಿಹೊಳಿ ನೆರವೇರಿಸುವರು. ಚಿತ್ರಮಂದಿರದ ಮಾಲೀಕರಾದ ಲಕ್ಷ್ಮಣ ಸೋನವಾಲ್ಕರ ಅಧ್ಯಕ್ಷತೆ ವಹಿಸುವರು.
ಎರಡು ದಿನದ ಹಾಸ್ಯ ರಸಮಂಜರಿಯ ರಸದೌತಣ ಮೂಡಲಗಿ ಹಾಗೂ ಸುತ್ತಮುತ್ತಲಿನ ಜನತೆಗೆ ದೊರಕಲಿದ್ದು ಪಾರು ಮೋಕ್ಷಿತಾ ಪೈ ಅಲ್ಲದೆ, ಜ್ಯೋತಿ ಬಳ್ಳಾರಿ ಹಾಗೂ ಪಲ್ಲವಿ ಬಳ್ಳಾರಿ ಇವರ ಸಾಂಪ್ರದಾಯಿಕ ನೃತ್ಯ ಅಲ್ಲದೆ ಉತ್ತರ ಕರ್ನಾಟಕದ ಜಾನಪದ ಜಾಣ ಶಬ್ಬೀರ ಡಾಂಗೆಯವರ ಹಾಡುಗಳನ್ನೂ ಕೇಳಬಹುದಾಗಿದೆ.
ಉದ್ಘಾಟನಾ ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ, ಬಿಇಓ ಅಜಿತ ಮೆನ್ನಿಕೇರಿ, ಸಿಪಿಐ ವೆಂಕಟೇಶ ಮುರನಾಳ, ಪಿಎಸ್ಐ ಹಾಲಪ್ಪ ಬಾಲದಂಡಿ ಹಾಗೂ ಸಾಹಿತಿ ಬಾಲಶೇಖರ ಬಂದಿ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿರುವರು.
ಹಾಸ್ಯ ರಸಮಂಜರಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರಸಿಕರು ಆಗಮಿಸಿ ಪ್ರೋತ್ಸಾಹಿಸಬೇಕು ಎಂದು ತಂಡದ ವ್ಯವಸ್ಥಾಪಕ ಸಂತೋಷ ಸಿಂಧಗಿಕರ ಮನವಿ ಮಾಡಿಕೊಂಡಿದ್ದಾರೆ.