spot_img
spot_img

ಮೈಸೂರು ವಿಮಾನ ನಿಲ್ದಾಣದಲ್ಲಿ ಕನ್ನಡ ನಾಮಫಲಕಕ್ಕೆ ಹಕ್ಕೊತ್ತಾಯ

Must Read

ಶುದ್ಧ ಕನ್ನಡ ನಾಮಫಲಕ ಅಭಿಯಾನದ ಹಕ್ಕೊತ್ತಾಯ ಕಾರ್ಯಕ್ರಮವನ್ನು ಇಂದು ನಗರದ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕರಾದ ಆರ್ . ಮಂಜುನಾಥ್ ( ಮಂಡಕಳ್ಳಿ ವಿಮಾನ ನಿಲ್ದಾಣ  ಮೈಸೂರು ಜಿಲ್ಲೆ , ಮೈಸೂರು. ) ಅವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಡಾ . ಗುಬ್ಬಿಗೂಡು ರಮೇಶ್ ಅವರೊಡನೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಾ.ವೈ.ಡಿ ರಾಜಣ್ಣ ಮತ್ತು ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಅರವಿಂದ್ ಶರ್ಮ , ಸಾತನೂರು ದೇವರಾಜ್ , ಸೌಗಂಧಿಕಾ ಜೋಯಿಸ್ , ಭೇರ್ಯ ರಾಮಕುಮಾರ್ಇ ವರುಗಳ ತಂಡದಿಂದ ಹಕ್ಕೊತ್ತಾಯ ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ವಿಮಾನ ನಿಲ್ದಾಣದ ಒಳಾಂಗಣ ಪರಿಶೀಲನೆ ನಡೆಸಿದ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಡಾ‌. ಗುಬ್ಬಿಗೂಡು ರಮೇಶ್ ಅವರು ವಿಮಾನ ನಿಲ್ದಾಣದ ಮುಂಭಾಗದ ಐ ಲವ್ ಮೈಸೂರು ಅಳವಡಿಕೆಯ ಸೆಲ್ಫಿ ಸ್ಪಾಟ್ ನಲ್ಲಿ ಅಗ್ರಸ್ಥಾನದಲ್ಲಿ ನಮ್ಮ ಪ್ರೀತಿಯ ಮೈಸೂರು ಎಂದು ನಾಮಫಲಕ ಅಳವಡಿಕೆ , ವಿಮಾನ ನಿಲ್ದಾಣದ ಒಳಾಂಗಣಕ್ಕೆ ಬರುವ ರಸ್ತೆಗಳಿಗೆ ಮೈಸೂರು ಮಹಾರಾಜರ ಹಾಗೂ ಕನ್ನಡದ ಸಾಹಿತಿಗಳ, ಕವಿಗಳ ಹೆಸರನ್ನು ಇಡಬೇಕೆಂಬ ಹಕ್ಕೊತ್ತಾಯಕ್ಕೆ ಸ್ಪಂದಿಸಿದ ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕರಾದ ಅರ್ .ಮಂಜುನಾಥ್ ಅವರು ಕೂಡಲೇ ಸಮ್ಮಿತಿಸಿ ಮುಂದಿನ ದಿನಗಳಲ್ಲಿ ವಿಮಾನ ನಿಲ್ದಾಣದಲ್ಲಿ ಅಗ್ರಸ್ಥಾನದಲ್ಲಿ ಕನ್ನಡ ಬಳಕೆ ಒಳಾಂಗಣದ ರಸ್ತೆಗಳಿಗೆ ಮೈಸೂರು ಮಹಾರಾಜರ ಹಾಗೂ ಕನ್ನಡದ ಸಾಹಿತಿಗಳ ಹಾಗೂ ಕವಿಗಳ ಹೆಸರನ್ನು ಅಳವಡಿಕೆ ಅದೇಶಿಸಿ ಕೂಡಲೇ ಜಾರಿ ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕನ್ನಡ ಜಾಗೃತಿ ಸಮಿತಿಯ ಉಳಿದೆಲ್ಲ ಸದಸ್ಯರೂ ಹಾಜರಿದ್ದರು.

- Advertisement -
- Advertisement -

Latest News

ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ

ಬೆಳಗಾವಿ: ಮಕ್ಕಳಿಲ್ಲದ ಬಡ ದಂಪತಿಗಳಿಗೆ ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ ಕೊಡಿಸಲು ಕೊಲ್ಲಾಪುರದ ಸಿದ್ಧಗಿರಿ ಮಠದ ದತ್ತಿ ಆಸ್ಪತ್ರೆಯಲ್ಲಿ ಐವಿಎಫ್ ಕೇಂದ್ರ ಸ್ಥಾಪಿಸಲಾಗಿದೆ ಎಂದು ಮುಜರಾಯಿ,...
- Advertisement -

More Articles Like This

- Advertisement -
close
error: Content is protected !!