ಜಮ್ಮು – ಪ್ರಧಾನಿ ಮೋದಿಯವರನ್ನು ಹೊಗಳಿದ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ವಿರುದ್ಧ ಕಾಂಗ್ರೆಸ್ ನ ಕೆಲವು ವ್ಯಕ್ತಿಗಳು ಪ್ರತಿಭಟನೆ ಮಾಡಿದ್ದಾರೆ.
ಜಮ್ಮುವಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗುಲಾಂ ನಬಿ ಆಜಾದ್ ವಿರುದ್ಧ ಹಾಯ್ ಹಾಯ್ ಘೋಷಣೆ ಕೂಗುತ್ತ ಆಕ್ರೋಶ ವ್ಯಕ್ತಪಡಿಸಿದರು.
ಆಜಾದ್ ಅವರನ್ನು ಪಕ್ಷವು ಮುಖ್ಯಮಂತ್ರಿ ಮಾಡಿತು, ಅನೇಕ ಪದವಿಗಳನ್ನು ನೀಡಿತು ಈಗ ಮೋದಿಯವರ ಹೊಗಳಿಕೆ ಮಾಡಿದ ಆಜಾದ ಅವರು ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎಂದು ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗುಲಾಂ ನಬಿ ಆಜಾದ ಅವರು ಕೆಲವು ಒಳ್ಳೆಯ ಗುಣಗಳನ್ನು ಹೊಗಳುವ ಗುಣವನ್ನು ನಾವು ಬೆಳೆಸಿಕೊಳ್ಳಬೇಕು ಎಂದರು.
ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರು ಮಾತನಾಡಿ, ಕಾಂಗ್ರೆಸ್ ಕೇವಲ ಯಾವಾಗಲೂ ದ್ವೇಷದ ರಾಜಕೀಯ ಮಾಡುತ್ತ ಬಂದಿದೆ. ಬೇರೆ ಯಾರೇ ಒಳ್ಳೆಯ ಕೆಲಸ ಮಾಡಿದರೂ ಆ ಪಕ್ಷಕ್ಕೆ ಆಗಿಬರುವುದಿಲ್ಲ. ಅದು ಕೇವಲ ಮೋದಿಯವರ ಬಗ್ಗೆ ದ್ವೇಷ ಹರಡುತ್ತಲೇ ಬಂದಿದೆ. ಈಗ ಆಜಾದ ಅವರು ಮೋದಿಯವರನ್ನು ಹೊಗಳಿದರೆ ಅವರ ವಿರುದ್ಧವೂ ಅವರದೇ ಪಕ್ಷ ಮುಗಿಬಿದ್ದಿದೆ ಎಂದರು