ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರ ಮೇಲೆ ಅಮೇರಿಕದ ಕೋರ್ಟ್ ನಲ್ಲಿ ೧೦೦ ಮಿಲಿಯನ್ ಡಾಲರ್ ಪರಿಹಾರಕ್ಕಾಗಿ ಕಾಶ್ಮೀರದ ಖಲಿಸ್ತಾನಿ ಒಕ್ಕೂಟ ಹೂಡಿದ್ದ ಪರಿಹಾರದ ದಾವೆಯನ್ನು ಕೋರ್ಟ್ ತಿರಸ್ಕರಿಸಿದೆ.
ಕಳೆದ ವರ್ಷದ ಸೆ.೧೯ ರಂದು ಅಮೇರಿಕಾದ ಟೆಕ್ಸಾಸ್ ನಲ್ಲಿ ನಡೆದ ” ಹೌಡಿ ಮೋದಿ ” ಕಾರ್ಯಕ್ರಮ ದ ಕೆಲವೇ ದಿನಗಳ ಮೊದಲು ಈ ಮೊಕದ್ದಮೆ ಹೂಡಲಾಗಿತ್ತು. ಜಮ್ಮು ಮತ್ತು ಕಾಶ್ಮೀರಕ್ಕೆ ಕೊಡಲಾಗಿದ್ದ ವಿಶೇಷ ಸ್ಥಾನಮಾನದ ಆರ್ಟಕಲ್ ೩೭೦ ನ್ನು ರದ್ದು ಪಡಿಸಿದ ಸಂಸತ್ತಿನ ಕ್ರಮವನ್ನು ಪ್ರಶ್ನಿಸಿ ಪ್ರಧಾನಿ ಮೋದಿ, ಅಮಿತ್ ಷಾ ಹಾಗೂ ಲೆ.ಜ. ಕಂವಲ್ ಜಿತ್ ಸಿಂಗ್ ಧಿಲ್ಲೋನ್ ಅವರ ವಿರುದ್ದ ಮೊಕದ್ದಮೆ ಹೂಡಲಾಗಿತ್ತು
ಮೊಕದ್ದಮೆ ಹೂಡಿದವರೆ ಕೋರ್ಟಿಗೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಕೋರ್ಟು ಅದನ್ನು ತಿರಸ್ಕರಿಸಿದೆ.