ಮೋದೀಜಿಗೊಂದು ಪತ್ರ

Must Read

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...

ಕಾಂಗ್ರೆಸ್ ಸರ್ಕಾರದ ಕೆಲಸಗಳು ಅದರ ಗೆಲುವಿಗೆ ಕಾರಣವಾಗುತ್ತದೆ – ಸುಜಾತಾ ಕಳ್ಳಿಮನಿ

ಸಿಂದಗಿ: ಸಿದ್ದರಾಮಯ್ಯನವರು ಐದು ವರ್ಷದ ಅಧಿಕಾರದ ಅವಧಿಯಲ್ಲಿ ಈ ಕರುನಾಡಿಗೆ ಬಡವರ ಪರ, ರೈತರ ಪರ ಜಾರಿಗೆ ತಂದ ಯೋಜನೆಗಳು ಈ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಬಿಜೆಪಿ ಅಲೆಮಾರಿ ಜನಾಂಗಕ್ಕೆ ಸುಳ್ಳು ಹೇಳಿ ಮತ ಪಡೆಯುತ್ತಿದೆ – ಮೇಘರಾಜ್ ಆರೋಪ

ಸಿಂದಗಿ: ಬಿಜೆಪಿಯ ಸರ್ಕಾರ  ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ  ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಆಶ್ರಯ ಮನೆಗಳನ್ನು  ಮಂಜೂರು ಮಾಡದೆ ಕೇವಲ ಕಾಗದ ಪತ್ರದಲ್ಲಿ ಮಂಜೂರು...

( ಮೋದಿಯವರಿಗೆ ರಿಪಬ್ಲಿಕ್ ಟಿವಿಯ ಆರ್ನಾಬ್ ಗೋಸ್ವಾಮಿ ಬರೆದಿರುವ ಇಂಗ್ಲೀಷ ಲೇಖನದ ಅನುವಾದ ನಿಮಗಾಗಿ )

ಆತ್ಮೀಯ ಪ್ರಧಾನಿ,

ನಿಮ್ಮಂತಹ ಒಬ್ಬ ವ್ಯಕ್ತಿಯಿಂದ ಈ ದೇಶ ನಡೆಸಿಕೊಳ್ಳಲು ಅರ್ಹವಾಗಿಲ್ಲ. ದೇಶದ ಜನಸಂಖ್ಯೆಯ ಪ್ರಮುಖ ಭಾಗವು ನಿಮ್ಮ ಕೆಲಸವನ್ನು ನೋಡುತ್ತಿಲ್ಲ. ದಿನಕ್ಕೆ 16 ಗಂಟೆಗಳಿಗೂ ಹೆಚ್ಚು ಕಾಲ ನೀವು ಕೆಲಸ ಮಾಡುತ್ತಿದ್ದೀರಿ . ಈ ದೇಶದ ಸುಧಾರಣೆಗಾಗಿ ನಿಮ್ಮ ನಿದ್ರೆಯನ್ನು ತ್ಯಾಗ ಮಾಡುತ್ತಿದ್ದೀರಿ. ಆದರೆ ನೀವು ಅದೇ ರೀತಿಯ ಮೆಚ್ಚುಗೆಯನ್ನು ಅವರಿಂದ ಪಡೆಯುತ್ತಿಲ್ಲ. ಸಣ್ಣ ಸಣ್ಣ ಸಮಸ್ಯೆಗಳಿಗೆ ನಿಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಾರೆ. ಈ ಜನರು ಕಳೆದ 60 ವರ್ಷಗಳಿಂದ ಇಡೀ ದೇಶವನ್ನು ಒಂದು ಕುಟುಂಬಕ್ಕೆ ಹಸ್ತಾಂತರಿಸಿ ಗುಲಾಮರಾಗಲು ಬಯಸುತ್ತಾರೆಯೆ ಹೊರತು ಐದು ವರ್ಷ ಉತ್ತಮ ಆಡಳಿತ ಕೊಡುವ ಸರ್ಕಾರವನ್ನು ನೋಡಲು ಇಷ್ಟಪಡುವುದಿಲ್ಲ.

- Advertisement -

ಈ ಕಾರಣದಿಂದ, ಈ ದೇಶವು ನಕಲಿ ಹುಸಿ ಬುದ್ಧಿಜೀವಿಗಳು, ಆಸೆಬುರುಕ ಮತ್ತು ಸೋಮಾರಿಯಾದ ಮನುಷ್ಯರಿಂದ ತುಂಬಿದೆ. ಇವರಿಗೆ ನಾಲ್ಕು ಜನರಿರುವ ತಮ್ಮ ಸಣ್ಣ ಕುಟುಂಬವನ್ನು ನಡೆಸಲು ಸಾಧ್ಯವಾಗುವುದಿಲ್ಲ. ಆದರೆ ಒಬ್ಬ ಪ್ರಧಾನಿಯಾದವನು ಈ ರಾಷ್ಟ್ರವನ್ನು ಹೇಗೆ ಚಲಾಯಿಸಬೇಕು ಎಂಬುದರ ಕುರಿತು ಖಂಡಿತವಾಗಿ ನಿಮಗೆ ಸಲಹೆ ನೀಡುತ್ತಾರೆ. ವಾಹ್ ! ಎಂಥಾ ದೇಶ ನಮ್ಮದು !

ನಮ್ಮ ದೇಶದ ಪ್ರಧಾನಮಂತ್ರಿಗಳು ವಿಶ್ವದಲ್ಲಿಯೆ ಅತ್ಯಂತ ದೊಡ್ಡ ಅಪಾಯಕಾರಿ ಅಪರಾಧವನ್ನು ಮಾಡಿದ್ದಾರೆ ಎನ್ನುವಂತೆ ದೇಶದ ಜನರು ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದಾರೆ. ಬಿಹಾರದ ಫಲಿತಾಂಶಗಳನ್ನು ನೋಡಿ . ಅವರು 8, 9 ಮತ್ತು 12 ನೇ ತರಗತಿಯನ್ನೂ ಪಾಸ್ ಮಾಡದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ . ಆದರೆ ನಿಮ್ಮನ್ನು ಹಿಯಾಳಿಸಿದವರು ಇವರೇ ಅಲ್ಲವೆ ? ಯಾಕೆ ನಿಮ್ಮ ರಾಷ್ಟ್ರದ ಸುಧಾರಣೆಗಾಗಿ ತುಂಬಾ ಶ್ರಮವಹಿಸಿದ ನಂತರವೂ ನಿಮ್ಮ ನಿಷ್ಠಾವಂತ ಅಭಿಮಾನಿಗೆ ಅಥವಾ ದೇಶದ ಕೆಲಸ ಮಾಡುವವರನ್ನು ಪ್ರೀತಿಸುವವರಿಗೆ ಇದನ್ನು ತಡೆದುಕೊಳ್ಳಲು ಹೇಗೆ ಸಾದ್ಯ ?

ನಮ್ಮ ದೇಶವು ಆತ್ಮ ಗೌರವದಿಂದ ಸ್ವಾಭಿಮಾನದಿಂದ ವಿಶ್ವದೇದುರು ತಲೆ ಎತ್ತಿ ನಿಲ್ಲುತಿದೆ ಎಂಬ ಅಂಶವನ್ನು ಅವರು ಒಪ್ಪಿಕೊಳ್ಳಲು ಸಾಧ್ಯವಿಲ್ಲ . ದೇಶವು ಪ್ರತಿಯೊಂದು ಹಂತದಲ್ಲಿಯೂ ಮುಂದುವರೆಯುತ್ತಿದೆ ಎಂದರೂ , ಅವರು ಇದನ್ನು ಬಯಸುವುದಿಲ್ಲ . ಅವರು ಕೆ.ಜಿ. ಈರುಳ್ಳಿಗೆ ಮೂರು ರೂಪಾಯಿ‌ ಬಯಸಿ ಓಟು ಹಾಕುತ್ತಾರೆಯೇ ಹೊರತು ಪ್ರಾಮಾಣಿಕತೆಗೆ ಬೆಲೆ‌ ಇಲ್ಲ. ಸಾಲ ಮನ್ನಾ ಬಯಸುತ್ತಾರೆಯೇ ಹೊರತು ಪ್ರೋತ್ಸಾಹ ಉತ್ತೇಜನ ಬಯಸಲಾರರು. ಈ ದೇಶದಲ್ಲಿನ ಭ್ರಷ್ಟಾಚಾರಕ್ಕೆ ಜನರು ಒಗ್ಗಿಕೊಂಡಿದ್ದಾರೆ ಮತ್ತು ದೇಶವು ಸರಿ ದಾರಿಗೆ ಹೋಗುವ ವಿಧಾನ ಮತ್ತು ಧನಾತ್ಮಕ ಬದಲಾವಣೆಯನ್ನು ಜೀರ್ಣಿಸಿಕೊಳ್ಳಲು ಇವರಿಂದ ಸಾಧ್ಯವಿಲ್ಲ.

ನಾನು ದುಃಖಿತನಾಗಿದ್ದೇನೆ ಆದರೆ ಖಚಿತವಾಗಿರುತ್ತೇನೆ . 2019 ರಲ್ಲಿ ನಾವು ನಿಮ್ಮನ್ನು ನೋಡಲು ಸಾಧ್ಯವಾಗುವುದಿಲ್ಲವೇನೊ‌ ಎನಿಸುತ್ತಿದೆ . ಏಕೆಂದರೆ ಅವರು ರಾಕೆಟ್ ವೇಗದಲ್ಲಿ ಅಭಿವೃದ್ದಿ ಮಾಡಲು ಪಪ್ಪುಜಿ ( ರಾಹುಲ್ ಗಾಂಧಿ ) ಅವರನ್ನು ಆಯ್ಕೆ ಮಾಡುತ್ತಾರೆ !

ಜನರು ಬೇಳೆ, ಅಕ್ಕಿ ಮತ್ತು ಆಲೂಗಡ್ಡೆಗಳನ್ನು ಉಚಿತವಾಗಿ ಒದಗಿಸುವ ವ್ಯಕ್ತಿಯ ಗುಲಾಮರಾಗುತ್ತಾರೆ .

ನಮ್ಮ ದೇಶದ ಇತಿಹಾಸ ಹಾಗೆ‌ ಅಲ್ಲವೆ ? ಯಾರು ದೇಶವನ್ನು ಬದಲಾಯಿಸಲು ಪ್ರಯತ್ನಿಸುತ್ತಾರೊ ದೇಶದ ಜನರು ಅವರನ್ನೆ ಬದಲಾಯಿಸಲು ಪ್ರಯತ್ನಿಸುತ್ತಾರೆ. ಇದು ನಮ್ಮ ನರಸತ್ತ ಪ್ರಜೆಗಳ ಇತಿಹಾಸದಿಂದ ಕಲಿತ ಪಾಠ.

ಸ್ಮಾರ್ಟ್ ಫೋನ್ಗಳಲ್ಲಿ 4 ಜಿ ಪ್ಯಾಕೇಜ್ ಹಾಕಿಸಿಕೊಂಡು ” ಬಢತಿ ಮೆಹಂಗಾಯಿಯ” ( ಬೆಲೆ ಏರಿಕೆ ) ಬಗ್ಗೆ ಮಾತನಾಡುತ್ತಾರೆ .

ಸರ್, ಪ್ರಪಂಚದ ಅಗ್ರ ಹತ್ತು ಶಕ್ತಿಶಾಲಿ ವ್ಯಕ್ತಿಗಳಲ್ಲಿ ನೀವು ಒಬ್ಬರಾಗಿದ್ದೀರಿ. ಅದು ಈ ದೇಶದ ಜನರಿಗೆ ಹೆಮ್ಮೆಯ ವಿಷಯವಲ್ಲ. ಇಲ್ಲಿ ಹೆಚ್ಚಿನ ಜನರು ಕಿವಿಯಿದ್ದೂ ಕಿವುಡರು ಮತ್ತು ಕಣ್ಣಿದ್ದೂ ಕುರುಡರು.

ನೀವು ಈ ವಯಸ್ಸಿನಲ್ಲಿ ವಿಶ್ರಾಂತಿ ಪಡೆಯಬೇಕು. ಮತ್ತು ಜೀವನವನ್ನು ಆನಂದಿಸಬೇಕು. ನಿಮ್ಮ ಹಾರ್ಡ್ ಕೆಲಸಕ್ಕೆ ಇಲ್ಲಿ ಬೆಲೆ ಇಲ್ಲ. ಜಾತಿ, ಹಣ ಮತ್ತು ಭ್ರಷ್ಟಾಚಾರಕ್ಕೆ ಇಲ್ಲಿ ಬೆಲೆಯೆ ಹೊರತು ಬದ್ಧತೆ ಮತ್ತು ಸಮರ್ಪಣೆಗೆ ಇಲ್ಲಿ ಬೆಲೆಯಿಲ್ಲ . ಮತ್ತೊಮ್ಮೆ ಹೇಳುತ್ತಿದ್ದೇನೆ ದಣಿವರಿಯದ ನಾಯಕನಿಂದ ಈ ದೇಶ ನಡೆಸಲು ಯೋಗ್ಯತೆ ಗಳಿಸಿಲ್ಲ.

ಜೈ ಹಿಂದ್.
– ರಿಪಬ್ಲಿಕ್ ಟಿವಿಯ ಅರ್ನಾಬ್ ಗೋಸ್ವಾಮಿ.
( ಕನ್ನಡಾನುವಾದ ; ಎನ್ ವಿ ದಾತಾರ )

- Advertisement -
- Advertisement -

Latest News

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...
- Advertisement -

More Articles Like This

- Advertisement -
close
error: Content is protected !!