ಬೆಂಗಳೂರು – ಕೊರೋನಾ ಮಹಾಮಾರಿಯಿಂದಾಗಿ ಕುಸಿದು ಹೋಗಿರುವ ಆರ್ಥಿಕ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಎಂಟನೆಯ ಬಜೆಟ್ ಮಂಡಿಸಲಿದ್ದಾರೆ.
ಈ ಬಜೆಟ್ ನಲ್ಲಿ ಬಡವರಿಗಾಗಿ ಹಾಗೂ ರಾಜ್ಯದ ಅಭಿವೃದ್ಧಿ ಗಾಗಿ ಅನೇಕ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.
ಕೊರೋನಾ ದಿಂದಾಗಿ ರಾಜ್ಯದಲ್ಲಿ ಆರ್ಥಿಕತೆ ಕುಸಿದಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ, ಜನರ ತಾಪತ್ರಯಗಳು ಮುಗಿಲು ಮುಟ್ಟಿವೆ ಇಂಥ ಸಂದರ್ಭದಲ್ಲಿ ಯಡಿಯೂರಪ್ಪನವರು ಜನರ ನಿರೀಕ್ಷೆಗಳನ್ನು ಯಾವ ರೀತಿ ಈಡೇರಿಸುತ್ತಾರೆಯೆಂಬುದನ್ನು ನಾಳೆಯ ಬಜೆಟ್ ಉತ್ತರ ಕೊಡಲಿದೆ.
ಸದ್ಯ ಸಿಎಂ ಯಡಿಯೂರಪ್ಪ ಅವರ ಮುಂದಿರುವ ಪ್ರಮುಖ ಸವಾಲುಗಳೆಂದರೆ, ಕುಸಿದಿರುವ ಆರ್ಥಿಕತೆಯನ್ನು ಮೇಲೆತ್ತಬೇಕು, ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆ ಮಾಡಲು ಕ್ರಮ, ನಿಗಮಗಳಿಗೆ ಅಭಿವೃದ್ಧಿ ಗಾಗಿ ಅನುದಾನ, ಉದ್ಯೋಗ ಸೃಷ್ಟಿ, ಉತ್ತರ ಕರ್ನಾಟಕ ಅಭಿವೃದ್ಧಿಗೆ ಯೋಜನೆಗಳು, ಜಿಎಸ್ ಟಿ ಯಲ್ಲಿ ವಿನಾಯಿತಿ ಅಲ್ಲದೆ ಗೃಹ ಅಗತ್ಯ ವಸ್ತುಗಳಾದ ಗ್ಯಾಸ್, ಬೇಳೆಕಾಳು ಸೇರಿದಂತೆ ಅನೇಕ ವಸ್ತುಗಳ ಬೆಲೆ ಇಳಿಕೆಯಂಥ ಅನೇಕ ಸವಾಲುಗಳು ಮುಂದಿವೆ.
ರಾಜ್ಯದ ಜನರೆಲ್ಲರ ದೃಷ್ಟಿ ಈ ಬಜೆಟ್ ಮೇಲೆಯೇ ಇದ್ದು ಜನರ ಆಶೋತ್ತರಗಳನ್ನು ಈ ಬಜೆಟ್ ಹೇಗೆ ಈಡೇರಿಸಬಹುದೆಂಬುದನ್ನು ನಾಳೆಯ ಬಜೆಟ್ ಉತ್ತರ ನೀಡಲಿದೆ.