ಯಾರು ಶ್ರೇಷ್ಠ ಮಕ್ಕಳು? ಇಲ್ಲೇ ಇದ್ದವರೇ….ಹೊರಗೆ ನಡೆದವರೆ ?

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

ಇತ್ತೀಚಿನ ದಿನಗಳಲ್ಲಿ ಸ್ವಂತ ಮಕ್ಕಳು ತೋರದ ಪ್ರೀತಿ ವಿಶ್ವಾಸ ಹೊರಗಿನ ಕೆಲವರು ತೋರಿಸುತ್ತಾರೆ.ಕಾರಣ ಇದು ನಮ್ಮ ಸಮಾಜ ಸೇವೆಯ ಪ್ರತಿಫಲ ಎನ್ನಬಹುದು. ಸಂಸಾರವು ರಕ್ತ ಸಂಬಂಧವೆಂದುಕೊಂಡು ಮಾನವ ಸಂಸಾರ ಸುಖಕ್ಕಾಗಿ ಹೊರಗಿನಿಂದ ಸಾಲ ಮಾಡಿಯಾದರೂ ಜೀವನ ನಡೆಸುತ್ತಾನೆ.

ಮಕ್ಕಳು,ಮೊಮ್ಮಕ್ಕಳು, ಮರಿಮಕ್ಕಳವರೆಗೆ ಆಗೋವಷ್ಟು ಹಣವನ್ನು ಸಂಗ್ರಹಿಸಿ,ಆಸ್ತಿ,ಅಂತಸ್ತು ಒಡವೆ ಮನೆ ಅರಮನೆಯವರೆಗೆ ನಡೆಯುತ್ತಾ ಕೊನೆಗೆ ಸುಸ್ತಾಗಿ ತಿರುಗಿ ನೋಡಿದರೆ ಅವರ ಮಕ್ಕಳೇ ಅವರ ಹಿಂದೆ ಇರದೆ ಮುಂದೆ ಹೊರಗೆ ನಡೆದಿರುತ್ತಾರೆ. ಕಾರಣನಾವು ಸಂಸಾರಕ್ಕಾಗಿ ಸಮಾಜವನ್ನು ಬಳಸಿಕೊಂಡು ಸಮಾಜವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಸ್ವಾರ್ಥ ಅಹಂಕಾರದಿಂದ ಹೋದರೆ ಸಮಾಜದ ಋಣ ಹೆಚ್ಚಾಗುತ್ತಿರುವ ಸತ್ಯ ಅರ್ಥ ಆಗೋದಿಲ್ಲ.

ಆ ಋಣವನ್ನು ಮಕ್ಕಳೇ ಹೊರಗೆ ನಡೆದು ದುಡಿದು ತೀರಿಸ ಬೇಕಲ್ಲವೆ? ಹೀಗಾಗಿ ಅತಿಯಾದ ಹಣವುಳ್ಳವರು ವಿಶೇಷ ವಿದ್ಯೆ ಕಲಿತು ವಿದೇಶದವರೆಗೆ ನಡೆಯಬಹುದು. ಆದರೆ, ಸಾಮಾನ್ಯಜ್ಞಾನವುಳ್ಳವರ ಮಕ್ಕಳಿಗೆ ಅವರಲ್ಲಿ ಹೆಚ್ಚು ಹಣವಿರದ ಕಾರಣ, ಹತ್ತಿರದ ಸಣ್ಣ ಶಾಲೆಯಲ್ಲಿ ವಿಧ್ಯಾಭ್ಯಾಸ ಮಾಡಿ, ತಮ್ಮ ಮೂಲದ ಧರ್ಮ ಕರ್ಮ ಬೆಳೆಸಿಕೊಂಡು ಸ್ವತಂತ್ರವಾಗಿ ಯಾವುದೇ‌ ಹೆಚ್ಚು ಸಾಲ ಮಾಡದೆ ಮನೆಯೊಳಗಿದ್ದೇ ಪೋಷಕರನ್ನು ಕೊನೆಗಾಲದವರೆಗೆ ನೋಡಿಕೊಂಡು ಇರುತ್ತಾರೆ.
ವಿಪರ್ಯಾಸವೆಂದರೆ, ಅಂತಹವರನ್ನು ಪೋಷಕರೆ ದಡ್ಡ ಎಂದು ಪರಿಗಣಿಸಿದರೆ ನಿಜವಾದ ಬುದ್ದಿವಂತರು ಯಾರು? ಹೊರಗೆ ನಡೆದ ಮಕ್ಕಳೆ?

- Advertisement -

ಅಜ್ಞಾನದ ಅಂಧಕಾರವಿರುವುದು ಪೋಷಕರ ವೈಜ್ಞಾನಿಕಚಿಂತನೆಗಳಲ್ಲಿ. ಇದೇ ನಮ್ಮ ಭಾರತದ ಈ ಸ್ಥಿತಿಗೆ ಕಾರಣ.ಸಾಲ ಎಂದರೆ ಋಣ ಕರ್ಮ ಎಂದರೆ ಕೆಲಸ.
ರಕ್ತ ಸಂಬಂಧ ವನ್ನು ಗುರುತಿಸಬಹುದು.ಋಣ ಸಂಬಂಧ ವನ್ನು ಗುರುತಿಸಿದರೂ ತೀರಿಸುವುದು ಕಷ್ಟ.

ಕಷ್ಟಪಟ್ಟು ಸತ್ಯ ಧರ್ಮದಲ್ಲಿ ನಡೆದವರಿಗೆ ಹಣವಿರದ ಕಾರಣ ಸಮಾಜ ಗುರುತಿಸುವುದಿಲ್ಲ. ಸಮಾಜ ನಮ್ಮನ್ನು ಗುರುತಿಸಲೆಂದು ಹಣವಂತರ ಸಹವಾಸ ಮಾಡಿ,ಋಣ ಬೆಳೆಸಿಕೊಂಡರೆ ಹಣದಿಂದ ಋಣ ತೀರಿಸಲು ಕಷ್ಟ. ಜ್ಞಾನವಿಲ್ಲದೆ ಋಣ ತೀರಿಸಲಾಗದ ಕಾರಣ, ಹಿಂದೆ ಶಿಕ್ಷಣದಿಂದ ಆತ್ಮಜ್ಞಾನವನ್ನು ಎತ್ತಿ ಹಿಡಿದು ಸ್ವಾವಲಂಬನೆ, ಸ್ವಾತಂತ್ರ್ಯ, ಸರಳ ಜೀವನ,ಸ್ವಾಭಿಮಾನ, ದೇಶಭಕ್ತಿ ಮಾನವನಲ್ಲಿತ್ತು.ಈಗ. ಇದಕ್ಕೆ ವಿರುದ್ದವಾದ ಶಿಕ್ಷಣ ಪೋಷಕರನ್ನು ಸಾಲದತ್ತಎಳೆದಿರುವುದನ್ನು ನೋಡಿದರೆ ಇದಕ್ಕೆ ಅಂತ್ಯ ಕಾಣದಜನರ ಮನಸ್ಥಿತಿ, ಪರಿಸ್ಥಿತಿ, ರಾಜಕೀಯಕ್ಕೆ ಎಳೆದಿದೆ.ರಾಜಕೀಯದಿಂದ ಋಣ ತೀರಿಸಲಾಗದು.ರಾಜಯೋಗಪಡೆಯಲು ಬೇಕಿದೆ ರಾಜಯೋಗದ ಶಿಕ್ಷಣ.

ಏನೇ ಕೆಲಸ ಮಾಡುತ್ತಿರಲಿ ಇದರಿಂದ ಸಮಾಜಕ್ಕೆ ಹೇಗೆ ಸೇವೆ ಮಾಡಬಹುದೆನ್ನುವ ಜ್ಞಾನವಿದ್ದರೆ, ಅದಕ್ಕೆ ತಕ್ಕಂತೆಅವಕಾಶಗಳೂ ಕೂಡಿ ಬರುತ್ತದೆ. ಹಾಗಂತ ಎಲ್ಲಾ ಅವಕಾಶಗಳೂ ಒಂದೆ ರೀತಿಯ ಪರಿಣಾಮ ಬೀರದಕಾರಣ, ನಿಧಾನವಾಗಿ ಚಿಂತನೆ ನಡೆಸಿ, ಯಾರಿಗೆ ನಮ್ಮ ಸಹಕಾರದ ಅಗತ್ಯವಿದೆಯೋ ಅವರನ್ನು ಆಧ್ಯಾತ್ಮ ಮೌಲ್ಯಗಳಿಂದ ತಿಳಿದು ಸಹಕಾರ ನೀಡಿ ನಡೆಸಿದರೆ ಸಮಾಜದಲ್ಲಿ ಉತ್ತಮ ಬದಲಾವಣೆ ಸಾಧ್ಯವಿದೆ.

ನಾವೇ ಭ್ರಷ್ಟಾಚಾರ ದಲ್ಲಿದ್ದರೆ ಶಿಷ್ಟಾಚಾರ ಬೆಳೆಸಲು ಕಷ್ಟ. ನಮ್ಮ ಮೂಲವೆ ಸರಿಯಿಲ್ಲವಾದರೆ , ಅದನ್ನು ಬಿಟ್ಟು ಹೊರಬಂದು ಜೀವನ ನಡೆಸುವುದರಿಂದ ಆತ್ಮಕ್ಕೆ ತೃಪ್ತಿ ಸಿಗುತ್ತದೆ. ಎಲ್ಲರಲ್ಲಿಯೂ ಪರಮಾತ್ಮ ಇದ್ದಾನೆಂದು ತಪ್ಪು ತಿಳಿದೂ ತಪ್ಪು ಮಾಡುವುದರಿಂದ ನಷ್ಟ,ಕಷ್ಟ ಹೆಚ್ಚಾಗುತ್ತದೆ.

ಇದನ್ನು ಮಾಧ್ಯಮಗಳು, ಮಧ್ಯವರ್ತಿಗಳು, ಮಹಿಳೆಯರು, ಮಕ್ಕಳು ತಿಳಿದು, ಮಧ್ಯೆನಿಂತಿರುವ ನಮ್ಮ ಮನಸ್ಸನ್ನುಸತ್ಯಜ್ಞಾನದೆಡೆಗೆ ಹರಿಯಬಿಟ್ಟರೆ ಇದೇ ಆತ್ಮಜ್ಞಾನ.

ಇಲ್ಲವಾದರೆ ಆತ್ಮಹತ್ಯೆ. ಸತ್ಯವೆ ದೇವರು,ಆತ್ಮವೆ ದೇವರು.ಸತ್ಯನಾಶವೆ ಆತ್ಮಹತ್ಯೆ..

*ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು*

- Advertisement -
- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!