ಯಾವುದು ಅದೃಷ್ಟ ?

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

ಆಧ್ಯಾತ್ಮಿಕವಾಗಿ ಚಿಂತನೆ ನಡೆಸಿದರೆ, ನಮಗೆ ಸರ್ಕಾರಿ ಕೆಲಸ ಸಿಕ್ಕಿದ್ದರೆ ಅದೃಷ್ಟವೋ? ಅಥವಾ ಖಾಸಗಿ ಕೆಲಸಮಾಡುತ್ತಿದ್ದರೆ ಅದೃಷ್ಟ ವೋ ತಿಳಿಯಬೇಕಿದೆ.

ಇಲ್ಲಿ ಸರ್ಕಾರದ ಕೆಲಸ ದೇವರ ಕೆಲಸ. ಹಾಗೆ ಕಾಯಕವೆಕೈಲಾಸ ಎನ್ನುವ ಪ್ರಕಾರ, ನಾವು ಕೆಲಸವನ್ನು ಯಾವರೀತಿಯಲ್ಲಿ ಮಾಡುತ್ತೇವೆ,ಯಾರ ಪರವಾಗಿ ಮಾಡುತ್ತೇವೆ, ಯಾವ ಭೂಮಿಯಲ್ಲಿ ಮಾಡುತ್ತೇವೆ. ಯಾರಿಗಾಗಿ ಮಾಡುತ್ತೇವೆ, ಯಾರ ಸಹಕಾರದಲ್ಲಿ ಮಾಡುತ್ತೇವೆ, ಯಾರು ಮಾಡಿಸುತ್ತಿರುವುದು, ಯಾಕೆ ಮಾಡುತ್ತಿರುವುದು…ಹೀಗೆ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋಗುವಾಗ ನಾವು ಒಬ್ಬ ಪ್ರಜೆಯಾಗಿದ್ದರೆ ಸರ್ಕಾರಿ ಕೆಲಸ ಸಿಕ್ಕಿದ್ದರೆ ಅದು ಅದೃಷ್ಟಎನ್ನಬಹುದು.

ಇಲ್ಲ ಕೆಲಸ ನನ್ನ ಸಂಸಾರಕ್ಕೆ ಮಾತ್ರ ಎಂದು ಮಾಡುತ್ತಿದ್ದರೆ ಇದರಲ್ಲಿ ಖಾಸಗಿ ಕೆಲಸವೆ ಉತ್ತಮವೆನಿಸುತ್ತದೆ. ಕಾರಣವಿಷ್ಟೆ, ಸರ್ಕಾರದ ಕೆಲಸ ದೇವರ ಕೆಲಸವಾದಾಗ ದೇವರು ಎಲ್ಲರೊಳಗೂ ಇದ್ದು ಅದರಲ್ಲಿ ನನಗೊಂದು ಸೇವೆ ಮಾಡುವ ಅವಕಾಶವಿದೆ ಎನ್ನಬಹುದು.

- Advertisement -

ಇದರಿಂದಾಗಿ ನಮ್ಮ ಸಮಾಜದ ಋಣ ತೀರಿಸಲು ಒಂದವಕಾಶ.
ಆದರೆ, ಈಗಿನ ನಮ್ಮ ಸರ್ಕಾರಿಉದ್ಯೋಗ ಸ್ಥಳಗಳಲ್ಲಿ ಸ್ವಚ್ಛ ಅಧಿಕಾರಿಗಳೆ ಮರೆಯಾಗುತ್ತಿರುವ ಸಮಯದಲ್ಲಿ ನಾವು ಎಷ್ಟೇ ಸ್ವಚ್ಚ ಮನಸ್ಸಿನಲ್ಲಿ ಕೆಲಸ ಮಾಡಿದರೂ ಅದನ್ನು ಪ್ರೋತ್ಸಾಹ ಮಾಡುವ ,ಸಹಕರಿಸುವ ಸಹೋದ್ಯೋಗಿಗಳಿಲ್ಲವಾದರೆ ಖಾಸಗಿ ಉದ್ಯೋಗವೇ ಉತ್ತಮ ವಾದ ಆತ್ಮವಿಶ್ವಾಸ ಹೆಚ್ಚಿಸುತ್ತದೆಯೆನ್ನಬಹುದು.

ಆಧ್ಯಾತ್ಮಿಕ ವಿಚಾರಗಳನ್ನು ತಿಳಿದುಕೊಂಡವರೆ ಇತ್ತೀಚೆಗೆ ತಮ್ಮ ಸ್ವಾರ್ಥ ಸುಖಕ್ಕಾಗಿ ಸರ್ಕಾರವನ್ನು ದಾರಿ ತಪ್ಪಿಸಲು ಕಾರಣರಾಗಿರುವಾಗ ಏನೂ ಅರಿಯದ ಅಮಾಯಕರಿಗೆ ಸರ್ಕಾರಿ ಕೆಲಸದಲ್ಲಿ ಸ್ವತಂತ್ರವಾಗಿ ಕೆಲಸಮಾಡಲು ಕಷ್ಟವಿದೆ. ಈ ಕಾರಣಕ್ಕಾಗಿಯೇ ಭಾರತ ಇಂದು ಭ್ರಷ್ಟಾಚಾರಕ್ಕೆ ಹೆಚ್ಚು ಪ್ರಸಿದ್ದವಾಗಿರುವುದಾಗಿದೆ.

ಅಜ್ಞಾನದಲ್ಲಿ ಬೌತಿಕವಾಗಿ ಚಿಂತನೆ ನಡೆಸಿದರೆ,ಸರ್ಕಾರದ ಕೆಲಸದಲ್ಲಿ ಭದ್ರತೆ ಇರುತ್ತದೆ.ಇಲ್ಲಿ ಒಮ್ಮೆ ಕೆಲಸ ಸಿಕ್ಕ ನಂತರ ಜೀವಮಾನವಿಡೀ ಅಲ್ಲೇ ಇದ್ದು ಕೆಲಸ ಮಾಡುವ ಕಾರಣ ನಿರಾಳವಾದ ಬದುಕನ್ನು ಕಳೆಯಬಹುದೆನ್ನುವುದಕ್ಕೆ ಹೆಚ್ಚು ಜನರು ಇದನ್ನು ಇಷ್ಟಪಟ್ಟರೂ, ಅದರಲ್ಲಿಯೂ ತಮ್ಮ ಆತ್ಮಸಾಕ್ಷಿಗೆ ವಿರುದ್ದ ಕೆಲಸ ಮಾಡುವ ಪರಿಸ್ಥಿತಿ ಇರುವುದೆನ್ನುವ ಸತ್ಯ ಅರ್ಥ ಮಾಡಿಕೊಂಡು ಎಷ್ಟೋ ಬುದ್ದಿವಂತ, ಜ್ಞಾನಿಗಳು ದೇಶ ಬಿಟ್ಟು ವಿದೇಶದಲ್ಲಿ ದುಡಿಯುತ್ತಿದ್ದಾರೆ.

ಸಾಕಷ್ಟು ಸಂಖ್ಯೆಯಲ್ಲಿ ದೇಶದೊಳಗೆ ಇರುವ ವಿದೇಶಿ ಹಾಗು‌ ಸ್ವದೇಶಿ ಖಾಸಗಿ ವಲಯದಲ್ಲಿ ದುಡಿಯುತ್ತಿರುವ ಯುವಕ ಯುವತಿಯರಿಗೆ ದೇಶದ ಬಗ್ಗೆ ಯಾವುದೇ ಹೆಚ್ಚಿನ ಆಸಕ್ತಿ ಇಲ್ಲದೆ ತಮ್ಮ ಜೀವನ ನಡೆಸಿರುವುದು ವಿಪರ್ಯಾಸವೆಂದರೆ ತಪ್ಪಿಲ್ಲ.

ಕೈ ತುಂಬಾ ಹಣ ಬಂದು ತಮ್ಮ ಮನರಂಜನೆಗಾಗಿ ದೇಶವನ್ನು ಹಿಂದೆ ನಿಲ್ಲಿಸಿರುವ ಎಷ್ಟೋ ಪ್ರಜೆಗಳಿಗೆ ದೇಶದ ಧರ್ಮ ಕರ್ಮ ಋಣ ತಿಳಿಯಲು ಸಾಧ್ಯವಾಗಿಲ್ಲ. ಕೆಲವರಷ್ಟೇ ಎಲ್ಲೇ ಕೆಲಸ ಮಾಡಿದ್ದರೂ ತಮ್ಮ ಧರ್ಮ ಕರ್ಮಕ್ಕೆ ಚ್ಯುತಿ ಬರದಂತೆ ನಡೆದಿರೋದಾಗಿದೆ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!