spot_img
spot_img

“ಯುಗದ ಕವಿ ಜಗದ ಕವಿ”

Must Read

- Advertisement -

“ಯುಗದ ಕವಿ ಜಗದ ಕವಿ”

ಕುವೆಂಪು ಎಂಬುವುದು ಒಂದು ಹೆಸರಲ್ಲ ಅದು ಒಂದು ಶಕ್ತಿ, ಮಹಾಚೈತನ್ಯ. ಕುವೆಂಪು ಯುಗಪ್ರವರ್ತಕ ಕವಿ. ಕನ್ನಡ ಸಾಹಿತ್ಯ ಲೋಕದ ಮೇರು ಪ್ರತಿಭೆ. ಅವರ ಹೆಸರು ಕೇಳಿದರೆ ಮೈ ಪುಳಕಗೊಳ್ಳುತ್ತದೆ. ಬಾರಿಸು ಕನ್ನಡ ಡಿಂ ಡಿಂ ವಾ ಎಂದು ಹೇಳಿ ಕನ್ನಡಿಗರನ್ನು ಎಚ್ಚರಿಸಿದ ಕವಿ. ಹುಟ್ಟುವ ಪ್ರತಿ ಮಗು ವಿಶ್ವಮಾನವನೇ. ಸಮಾಜ ಆತನನ್ನು ಜಾತಿ-ಮತದ ಕಟ್ಟುಪಾಡುಗಳಿಂದ ಬಂಧಿಸುತ್ತದೆ.

ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯವಾಗಬಾರದು ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಿರಬೇಕು ಎಂದು ವಿಶ್ವಮಾನವತೆಯನ್ನು ಇಡೀ ಪ್ರಪಂಚಕ್ಕೆ ಸಾರಿದರು. ಕುವೆಂಪು ವೈಚಾರಿಕ ಮನೋಭಾವವುಳ್ಳ ಲೇಖಕರು ಗೊಡ್ಡು ಸಂಪ್ರದಾಯಗಳನ್ನು, ಕಂದಾಚಾರಗಳನ್ನು ತಮ್ಮ ಸಾಹಿತ್ಯದ ಮೂಲಕ ವಿರೋಧಿಸಿದವರು. ಬುದ್ಧ ಬಸವನ ಹಾಗೆ ಸಮಾಜದಲ್ಲಿ ವೈಚಾರಿಕ ದೃಷ್ಟಿಕೋನ ಬೆಳೆಸಬೇಕೆಂದು ಹೇಳಿದರು.

“ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು? ”

- Advertisement -

” ಮನುಷ್ಯನ ಜೀವಿತ ಕಾಲವೇ ಒಂದು ಸುಮಹೂರ್ತ
ಇದರೊಳಗೆ ನೀನು ರಾಹುಕಾಲ ,ಗುಳಿಕ ಕಾಲಗಳನ್ನು ನೋಡುವ ಅಗತ್ಯವಿಲ್ಲ ”

ಮನುಷ್ಯ ಯಾವುದೇ ಒಂದು ಮತಕ್ಕೆ ಅಥವಾ ಒಂದು ಜಾತಿಗೆ ಕಟ್ಟುಬೀಳಬಾರದು. ಸಹೋದರತೆ, ಭಾತೃತ್ವದ ಸಮಾಜ ನಿರ್ಮಾಣ ಮಾಡಬೇಕು ಎಂಬ ಆಶಯ ಅವರದು ಮನುಜಮತ ವಿಶ್ವಪಥ ಅವರ ಧ್ಯೇಯವಾಗಿತ್ತು, ಅದಕ್ಕಾಗಿ ಅವರ ಜನ್ಮದಿನಾಚರಣೆಯನ್ನು ವಿಶ್ವ ಮಾನವ ದಿನವನ್ನಾಗಿ ಆಚರಿಸಲಾಗುತ್ತಿದೆ.

ಕರುನಾಡ ಮಡಿಲಲ್ಲಿ ಜನಿಸಿದ ಇವರು ನಾಡಿನ ಕೀರ್ತಿಯನ್ನು ದೇಶ-ವಿದೇಶಗಳಲ್ಲಿ ಹರಡುವಂತೆ ಮಾಡಿದ್ದಾರೆ. ಇವರ ಕನ್ನಡ ಸಾಹಿತ್ಯ ಸೇವೆ ಅಪಾರವಾದದ್ದು. ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಸಾಹಿತ್ಯ ಕೃಷಿ ಮಾಡಿದ್ದಾರೆ. ಕಾದಂಬರಿ, ಖಂಡಕಾವ್ಯ, ಮಹಾಕಾವ್ಯ, ಕವನ ಸಂಕಲನ, ಕಥಾಸಂಕಲನ, ಪ್ರಬಂಧ, ವಿಮರ್ಶೆ, ಆತ್ಮಕತೆ, ಜೀವನಚರಿತ್ರೆ, ಶಿಶು ಸಾಹಿತ್ಯ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

- Advertisement -

ದ ರಾ ಬೇಂದ್ರೆ ಅವರಿಂದ “ಯುಗದ ಕವಿ ಜಗದ ಕವಿ” ಅಂತ ಕರೆಸಿಕೊಂಡವರು. ಕನ್ನಡದ ಏಳಿಗೆಗಾಗಿ ಮಾನಸ ಗಂಗೋತ್ರಿಯನ್ನು ಕಟ್ಟಿ ಬೆಳೆಸಿದರು. ಸಾಹಿತ್ಯದ ಸರ್ವತೋಮುಖ ಬೆಳವಣಿಗೆಗೆ ಕುವೆಂಪು ಅವರ ಕಾಣಿಕೆ ಮಹತ್ತರವಾದದ್ದು. ಸುಮಾರು ಐದು ದಶಕಗಳ ಕಾಲ ಒಂದು ತಪಸ್ವಿಯಂತೆ ಸಾಹಿತ್ಯ ಸೇವೆಯನ್ನು ಮಾಡಿ ನಾಡನ್ನು ನುಡಿಯನ್ನು ಪುಷ್ಟಿಗೊಳಿಸಿದ್ದಾರೆ. ಕನ್ನಡ ಕಾವ್ಯ ಭಂಡಾರವನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡ ನಾಡು ನುಡಿಗಾಗಿ ತಮ್ಮ ಜೀವನವನ್ನೇ ಅರ್ಪಿಸಿಕೊಂಡವರು. ಮಂತ್ರ ಮಾಂಗಲ್ಯ ಎಂಬ ಸರಳ ವಿವಾಹ ಪದ್ಧತಿಯನ್ನು ಜಾರಿಗೆ ತಂದು ಕಂದಾಚಾರದ ಸಂಪ್ರದಾಯಗಳಿಗೆ ಪುರೋಹಿತ ಮತ್ತು ಸಾಮ್ರಾಜ್ಯಶಾಹಿತ್ವವನ್ನು ಅಂತ್ಯಗೊಳಿಸಲು ಪ್ರಯತ್ನಿಸಿದವರು.

“ನೂರು ಸಾರಿ ಸೋತಿದ್ದರೇನಂತೆ
ನೂರು ಸಾರಿ ಬಿದ್ದರೇನಂತೆ
ಸೋಲು ಗೆಲುವಿನ ಮೆಟ್ಟಲು ಬಿದ್ದರಲ್ಲವೇ ಮರಳಿ ಏಳುವುದು
ಬೀಳದವನು ಎಂದೂ ಮೇಲೆದ್ದವನಲ್ಲ”

ಎಂದು ತಮ್ಮ ಸಾಹಿತ್ಯದ ಮೂಲಕ ಗೆಲುವಿನ ಮಂತ್ರವನ್ನು ಸಾರಿದರು. ಜನರಿಗೆ ಪ್ರೇರಣೆ ನೀಡಿದವರು. ನಂಬಿ ಅನುಭವಿಸುವುದಕ್ಕಿಂತ, ಅನುಭವಿಸಿ ನಂಬುವುದೇ ಶಾಶ್ವತ ಮತ್ತು ಸತ್ವ ಎಂದು ಹೇಳಿದವರು. ಇಂತಹ ಯುಗದ ಕವಿಗೆ, ಜಗದ ಕವಿಗೆ, ಕೈ ಮುಗಿಯದೇ ಮಣಿಯದೆ, ಇರುವವರಾರು?

ಆಧುನಿಕ ಸಾಹಿತ್ಯದ ಸರ್ವತೋಮುಖ ಬೆಳವಣಿಗೆಗೆ ಕುವೆಂಪು ಅವರ ಕಾಣಿಕೆ ಮಹತ್ತರವಾದುದು. 1949 ರಲ್ಲಿ ಅವರು ಬರೆದ ಶ್ರೀರಾಮಾಯಣದರ್ಶನಂ ಮಹಾಕಾವ್ಯದಲ್ಲಿ ಈ ಕಾಲಕ್ಕೆ ಅಗತ್ಯವಾದ ದರ್ಶನವನ್ನು ನೀಡಿದ್ದಾರೆ. ಸುಮಾರು 80ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಸಂಪತ್ತನ್ನು ಶ್ರೀಮಂತಗೊಳಿಸಿದ್ದಾರೆ. ಕುವೆಂಪು ಅವರು ಕ್ರಾಂತಿಕವಿ. ಸಾಮಾಜಿಕ ಅನ್ಯಾಯವನ್ನು ಪ್ರತಿಭಟಿಸುವ ಲೇಖಕರು ಅವರ ಸಾಹಿತಿಕ ಧೋರಣೆ ವಿಭಿನ್ನ ಮತ್ತು ವಿಶಿಷ್ಟವಾದದ್ದು. ಕೆಳವರ್ಗದವರಿಗೆ ಆತ್ಮಗೌರವ ಮತ್ತು ಕಿಚ್ಚನ್ನು ತುಂಬಿಸಿದರು. ಇವರ ಸಾಹಿತ್ಯ ಕನ್ನಡನಾಡಿನ ಜನಮನವನ್ನು ತನಿಸುತ್ತಾ, ಹುರಿದುಂಬಿಸುತ್ತಾ, ಹಸನುಗೊಳಿಸುತ್ತದೆ’ ಉನ್ನತಿಗೊಳಿಸುತ್ತದೆ’ ಚೇತನಗೊಳಿಸುತ್ತದೆ, ಪುಷ್ಟಿಗೊಳಿಸುತ್ತದೆ. ನವೋದಯ ಕಾಲದ ಕವಿಯಾಗಿದ್ದರೂ ದಲಿತ ಬಂಡಾಯ ಸಾಹಿತ್ಯಕ್ಕೆ ಪ್ರೇರಕ ಶಕ್ತಿಯಾದರು. ನಿಸರ್ಗದ ಚೆಲುವು, ದೇಶಪ್ರೇಮ, ಆದರ್ಶಪ್ರಿಯತೆ, ಕ್ರಾಂತಿಯ ವೀರಭಾವ, ಅಧ್ಯಾತ್ಮಿಕತೆ….. ಹೀಗೆ ಅನೇಕ ವಿಷಯಗಳು ಅವರ ಕಾವ್ಯಕ್ಕೆ ಇಂಬುಕೊಟ್ಟಿವೆ. ಮಾನವ ಜನ್ಮದ ಉದ್ದೇಶವಾದ ಆತ್ಮಸಾಕ್ಷಾತ್ಕಾರವೇ ಅವರ ಬಾಳಿನ ಗುರಿಯಾಗಿತ್ತು. ಕನ್ನಡ ಕನ್ನಡಕರ್ನಾಟಕ ವರೆಗೆ 2 ಶಾಸಕೋಶಗಳಿದ್ದಂತೆ ಆ ಸ್ವಾಶಕೋಶಗಳ ಚಲನೆ ನಿಂತರೆ ಅವರ ಬಾಳ ಉಸಿರು ನಿಂತಂತೆ. ಕನ್ನಡಕ್ಕೆ ಹೊಸ ನುಡಿಗಟ್ಟು ಹೊಸ ಕಲ್ಪನೆಯನ್ನು ನೀಡಿ, ಕಲ್ಪನಾ ಶಕ್ತಿಯೊಂದಿಗೆ ಬೌದ್ಧಿಕ ಸಾಮರ್ಥ್ಯವನ್ನು ಮೇಳೈಸಿ, ನೈತಿಕ ಮತ್ತು ಸೌಂದರ್ಯ ಮೀಮಾಂಸೆಯನ್ನು ಉನ್ನತ ಸ್ಥಾನಕ್ಕೆ ಒಯ್ದವರು.

ಬೌದ್ದಿಕವಾಗಿ ಅವರು ನಮ್ಮನ್ನು ಅಗಲಿದರು ಅವರ ವಿಚಾರಗಳ ಮೂಲಕ, ಅವರ ವಿಚಾರ ಕ್ರಾಂತಿಯ ಮೂಲಕ, ವಿಶ್ವಮಾನ ಸಂದೇಶದ ಮೂಲಕ, ಅವರ ಕವನಗಳ ಮೂಲಕ, ಕಾದಂಬರಿಗಳ ಮೂಲಕ, ನಾಟಕಗಳ ಮೂಲಕ ನಮ್ಮ ಜೊತೆ ಇದ್ದಾರೆ.
” ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಎಂದೆಂದಿಗೂ ನೀ

ಪ್ರೊ.ವಿದ್ಯಾ ರೆಡ್ಡಿ,
ಕನ್ನಡ ಪ್ರಾಧ್ಯಾಪಕರು ಎಸ್ಎಸ್ಎ ಕಾಲೇಜು, ಗೋಕಾಕ

- Advertisement -
- Advertisement -

Latest News

ಸಿಂದಗಿ ಅಧ್ಯಕ್ಷರಾಗಿ ಶಾಂತವೀರ, ಉಪಾಧ್ಯಕ್ಷರಾಗಿ ರಾಜಣ್ಣಿ ಆಯ್ಕೆ

ಸಿಂದಗಿ; ಪಟ್ಟಣದ ಪುರಸಭೆಯ ಅಧ್ಯಕ್ಷ, ಉಪಾದ್ಯಕ್ಷರ ಅವಧಿ ಮುಗಿದು ಹಲವು ವರ್ಷಗಳು ಕಳೆದಿತ್ತು ಅದು ಅ. ೨೮ ರಂದು ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಿ ಸೆ.೯ ದಿನಾಂಕ...
- Advertisement -

More Articles Like This

- Advertisement -
close
error: Content is protected !!
Join WhatsApp Group