ಬೀದರ : ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯ ಸಂಸ್ಥಾನ ಗವಿಮಠ, ಅಭಿನವಶ್ರೀ ಪ್ರಕಾಶನ, ಅಭಿನವಶ್ರೀಗಳ 38ನೇ ಜನ್ಮದಿನೋತ್ಸವ, 19ನೇ ಪಟ್ಟಾಧಿಕಾರ ವರ್ಧಂತಿ ಮಹೋತ್ಸವ ಹಾಗೂ ಗ್ರಂಥಗಳ ಲೋಕಾರ್ಪಣೆ ಸಮಾರಂಭ ಇತ್ತೀಚೆಗೆ ಬೀದರ್ ಜಿಲ್ಲೆಯ ಬಸವಕಲ್ಯಾಣದ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯ ಸಂಸ್ಥಾನ ಗವಿಮಠದಲ್ಲಿ ನೆರವೇರಿತು.
ಈ ಕಾರ್ಯಕ್ರಮದಲ್ಲಿ ಶ್ರೀಮಠದ ವತಿಯಿಂದ ಕೊಡಮಾಡುವ “ಅಭಿನವಶ್ರೀ” ಪ್ರಶಸ್ತಿ ಯುವ ಸಾಹಿತಿ ಡಾ. ಬದರೀನಾಥ ಜಹಗೀರದಾರ ಅವರಿಗೆ ಲಭಿಸಿತು.
ಅಭಿನವಶ್ರೀಗಳ ಮೊಬೈಲ್ ಜಾಗೃತಿ ಪಾದಯಾತ್ರೆ ಕೃತಿಯಲ್ಲಿ ಉತ್ತಮವಾದ ಕವನ ರಚನೆ ಜೊತೆಗೆ ಯುವ ಬರಹಗಾರನಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡು ಹಲವು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಅವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಡಾ. ಬದರೀನಾಥ ಜಹಗೀರದಾರ ಅವರಿಗೆ ‘ಅಭಿನವಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ವೀರಶೆಟ್ಟಿ ಪಾಟೀಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.