ರಂಗೇರಿದ ಗ್ರಾಪಂ ಚುನಾವಣೆಯ ಕಾವು ! ಅವಿರೋಧ ಆಯ್ಕೆ ಮಾಡಲು ಪ್ರಯತ್ನ

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

ಎಲ್ಲರ ಚಿತ್ತ ಹಳ್ಳೂರ ಗ್ರಾಪಂ ಚುನಾವಣೆಯತ್ತ

ಮೂಡಲಗಿ: ಎಲ್ಲೆಡೆ ಗ್ರಾ ಪಂ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ಗ್ರಾ ಪಂ ಪ್ರತಿ ಚುನಾವಣೆಯಲ್ಲಿ ಬಾರಿ ಕುತುಹಲದಿಂದ ಹಾಗೂ ಜಿದ್ದಾಜಿದಿ ಕಣವಾಗಿ ಕಾಣುತ್ತಿತು. ಆದರೆ ಇದೇ ಗ್ರಾಮದಲ್ಲಿ ಡಿ.22ರಂದು ಜರಗುವ ಚುನಾವಣೆಯಲ್ಲಿ ಗ್ರಾಮದ ಶಾಂತಿ ಹಾಗೂ ಅಭಿವೃದ್ಧಿಗಾಗಿ ಅವಿರೋಧ ಆಯ್ಕೆಯಾಗುವ ಲಕ್ಷಣಗಳು ಕಂಡು ಬಂದಿವೆ.

ಸ್ಥಳೀಯ ಚುನಾವಣೆಗೆ ಆಖಾಡ ಸಿದ್ದವಾಗಿದ್ದು ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸ ಬಯಸುವ ಅಭ್ಯರ್ಥಿಗಳು ತೆರೆಮರೆಯಲ್ಲಿ ಕಸರತ್ತುಗಳನ್ನು ನಡೆಸುತ್ತಾ ತರಾತುರಿಯಲ್ಲಿ ತಮ್ಮ ಸ್ಥಾನಕ್ಕೆ ಲಾಭಿ ನಡೆಸುತ್ತಿದ್ದಾರೆ. ಇನ್ನು ಕೆಲವರು ಈಗಲೇ ಚುನಾವಣಾ ಪ್ರಚಾರ, ಬಾಯಿ ಮಾತಿನ ಪ್ರಣಾಳಿಕೆಗಳು ಹೊರಹಾಕುತ್ತಾ ಚುನಾವಣಾ ತಯಾರಿ ನಡೆಸಿಕೊಳುತ್ತಿದ್ದಾರೆ.

- Advertisement -

ತಾಲೂಕಿನ ಗ್ರಾಮಗಳ ಪಂಚಾಯಿತಿ ಚುನಾವಣೆ ಯಾವುದೇ ಪಕ್ಷದ ಚಿಹ್ನೆಯಡಿಯಲ್ಲಿ ನಡೆಯದೇ ಇದ್ದರೂ ಹಳ್ಳೂರ ಗ್ರಾಮದ ಮಾಜಿ ಜಿಪಂ ಸದಸ್ಯ ಭೀಮಶಿ ಮಗದುಮ್ ಬಣ ಹಾಗೂ ಮಾಜಿ ಪಿಕೆಪಿಎಸ್ ಅಧ್ಯಕ್ಷ ಹಣಮಂತ ತೇರದಾಳ ಬಣ ಒಳಗೊಳಗೆ ಅವಿರೋಧ ಆಯ್ಕೆ ಮಾಡುವುದು ವಿಶೇಷವಾಗಿದೆ.
ಈ ವರ್ಷ ಎರಡೂ ಬಣದ ನಡುವೆ ತೀವ್ರ ಪೈಪೋಟಿ ನಡೆಯುವ ಸಾಧ್ಯತೆ ವ್ಯಕ್ತವಾಗಿತ್ತು.

ಆದರೆ ಶುಕ್ರವಾರ ಗ್ರಾಮದ ಹಿರಿಯರ ಮಧ್ಯೆ ನಡೆದ ಸಭೆಯಲ್ಲಿ ಚರ್ಚೆಯಾಗಿ ಅವಿರೋಧ ಆಯ್ಕೆ ಮಾಡಲು ಎಲ್ಲರ ತರಹದ ಕಸರತ್ತುಗಳನ್ನು ಮಾಡಲಾಗುತ್ತಿದೆ. ಆದರಿಂದ ಎಲ್ಲರ ಚಿತ್ತ ಗ್ರಾ ಪಂ ಚುನಾವಣೆಯ ನಾಮಪತ್ರ ಹಿಂತೆಗೆದುಕೊಳ್ಳವ ದಿನದತ್ತ ಎಂದು ಹಳ್ಳೂರಿನ ಜನತೆ ಎದುರು ನೋಡಿದ್ದಾರೆ.

ಏನೇ ಇರಲಿ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಲಿ ಅಥವ ಚುನಾವಣೆಗೆ ಸ್ಪರ್ಧಿಸಲಿ ತಮ್ಮ ಗ್ರಾಮಗಳನ್ನು ಅಭಿವೃದ್ದಿ ಪಡಿಸಬೇಕೆನ್ನುವ ಕನಸು ಕಾಣುತ್ತಿದ್ದಾರೆ. ಒಟ್ಟಾರೆಯಾಗಿ ಚುನಾವಣೆಯ ಅಖಾಡಕ್ಕೆ ಸಿದ್ದತೆಗಳು ಮಾತ್ರ ಬರದಿಂದ ಸಾಗುತ್ತಿವೆ

ಅಲ್ಲದೇ ಈ ಬಾರಿಯ ಚುನಾವಣೆಯಲ್ಲಿ ವಿದ್ಯಾವಂತ ಯುವಕರು ಸ್ಪರ್ಧೆಗಿಳಿಯುವ ಸೂಚನೆಯೂ ಕಾಣುತ್ತಿದೆ. ಒಟ್ಟಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ಕಣ ರಂಗೇರುತ್ತಿದ್ದು ಮತದಾರನ ನಿರ್ಣಯವೇನು ಎಂಬುದು ಕಾದು ನೋಡಬೇಕಿದೆ.

- Advertisement -
- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!