ರಮೇಶ್ ಜಾರಕಿಹೋಳಿಗೆ ಕೊರೊನಾ ಪಾಸಿಟಿವ್, ಆಘಾತಕಾರಿ ಸುದ್ದಿ

Must Read

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...

ಪ್ರಕೃತಿಯೇ ನಿಜವಾದ ದೇವರು – ಶಾಂತ ಗಂಗಾಧರ ಶ್ರೀಗಳು

ಸಿಂದಗಿ: ಪ್ರಕೃತಿಯೇ ನಿಜವಾದ ದೇವರು ನಿಸರ್ಗವೇ ಕೂಡಲ ಸಂಗಮ ಎಂದು ಹೇಳಿದ ಬಸವಣ್ಣನವರ ಹಾಗೂ ಶರಣೆ ಮಾತುಗಳು ಅಕ್ಷರಶಃ ಪ್ರಸ್ತುತವಾಗಿವೆ. ಎಂದು ಪಟ್ಟಣದ ಗುರುದೇವಾಶ್ರಮದ ಶ್ರೀ ಶಾಂತಗಂಗಾಧರ...

ಉತ್ತಮ ಸಮಾಜ ನಿರ್ಮಾಣದಲ್ಲಿ ಶರಣರ ಪಾತ್ರ ಕುರಿತು ಪ್ರವಚನ

ಸಿಂದಗಿ: ಪ್ರತಿಯೊಬ್ಬರಲ್ಲಿ ವಚನ ಸಾಹಿತ್ಯ ಭಂಡಾರವೇ ಅಡಗಿರುತ್ತದೆ ಅದನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯ ಹೊಂದಿದವರಿಗೆ ಮಾತ್ರ ಸಂಗ್ರಹ ಮಾಡುವ ಧ್ಯೇಯ ಇರುತ್ತದೆ ಅಂಥವರ ಸಾಲಿನಲ್ಲಿ ಶ್ರೀ ಶಾಂತಗಂಗಾಧರ...

ಮಾಜಿ ಸಚಿವ ರಮೇಶ್ ಜಾರಕಿಹೋಳಿ ಅವರಿಗೆ ಕೊರೊನಾ ಪಾಸಿಟಿವ್ ಆಗಿದೆ.. ಹೌದು ರಮೇಶ್ ಜಾರಕಿಹೋಳಿ ಅವರು ಇಂದು ತಮ್ಮ ಸಿಡಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗಬೇಕಿತ್ತು.. ಆದರೆವೀಗ ಕೊರೊನಾ ಪಾಸಿಟಿವ್ ಆಗಿರುವ ಕಾರಣ ಇನ್ನು ಹದಿನೈದು ದಿನ ವಿಚಾರಣೆಗೆ ಹಾಜರಾಗುವುದು ಸಂಶಯವಾಗಿದೆ.. ಈ ಬಗ್ಗೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಅವರು ಮಾಹಿತಿ ನೀಡಿದ್ದು ರಮೇಶ್ ಜಾರಕಿಹೋಳಿ ಅವರಿಗೆ ಕೊರೊನಾ ಪಾಸಿಟಿವ್ ಆಗಿದೆ ಎಂದು ತಿಳಿಸಿದ್ದಾರೆ.. ಅವರು ಹುಷಾರಾದ ಬಳಿಕ ಉಪಚುನಾವಣೆಯ ಪ್ರಚಾರಕ್ಕೆ ಬರಲಿದ್ದಾರೆ ಎನ್ನಲಾಗಿದೆ..

ಆದರೆ ಇತ್ತ ಎಸ್ ಐ ಟಿ ವಿಚಾರಣೆಗೂ ಹಾಜರಾಗಬೇಕಿದ್ದ ರಮೇಶ್ ಜಾರಕಿಹೋಳಿ ಅವರು ಇಂದು ಗೈರಾಗಲಿದ್ದಾರೆ.. ಆದರೆ ಇಂದು ರಮೇಶ್ ಜಾರಕಿಹೋಳಿ ಅವರಿಗೆ ಕೊರೊನಾ ಪಾಸಿಟಿವ್ ಆಗುವ ಮುನ್ನ ನಿನ್ನೆ ನಡೆದ ಘಟನೆಯೇ ಬೇರೆ ಆಗಿತ್ತು.. ಹೌದು ನಿನ್ನೆ ಯುವತಿ ಪೊಲೀಸ್ ಆಯುಕ್ತರಿಗೆ ಈ ಪ್ರಕರಣದ ಕುರಿತು ಪತ್ರ ಬರೆದಿದ್ದು ನಾನು ಸಂತ್ರಸ್ಥೆಯೋ ಅಥವಾ ಆರೋಪಿಯೋ ಗೊತ್ತಾಗ್ತಿಲ್ಲ.. ನನಗೆ ನ್ಯಾಯ ಕೊಡಿಸಿ.. ನನ್ನ ವಿಚಾರಣೆಯ ಮಾಹಿತಿ ಸೋರಿಕೆಯಾಗ್ತಿದೆ ಎಂದು ಮನವಿ ಮಾಡಿದ್ದಳು.. ನಂತರ ಲಾಯರ್ ಜಗದೀಶ್.. ಹಾಗೂ ಲಾಯರ್ ಸೂರ್ಯ ಮುಕುಂದ್ ರಾಜ್ ಅವರು ಮಾತನಾಡಿ ವಿಚಾರಣೆ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದರು..

ಯುವತಿಯ ಹೇಳಿಕೆಗಳು ಸೋರಿಕೆಯಾಗ್ತಿದೆ.. ಬೇಗ ಬೇಗ ವಿಚಾರಣೆ ನಡೆಯಬೇಕು.. ಈಗಾಗಲೇ ಯುವತಿಯ ಪರ ವಕಾಲತ್ತು ಹಾಕಿದ್ದ ಲಾಯರ್ ಮಂಜುನಾಥ್ ಅವರನ್ನು ಬಾರ್ ಕೌನ್ಸಿಲ್ ನಿಂದ ಅಮಾನತು ಮಾಡಲಾಗಿದೆ.. ಸರ್ಕಾರವೇ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಅನ್ನು ನೇಮಕ ಮಾಡಿದ್ದಾರೆ.. ಎಂದಿದ್ದರು.. ಆದರೆ ಇದರ ಜೊತೆಗೆ ಇಂದು ರಮೇಶ್ ಜಾರಕಿಹೋಳಿ ಅವರಿಗೆ ಕೊರೊನಾ ಪಾಸಿಟಿವ್ ಆಗುವ ವಿಚಾರವನ್ನು ನಿನ್ನೆಯೇ ಸೂರ್ಯ ಮುಕುಂದ್ ರಾಜ್ ಅವರು ಭವಿಷ್ಯ ನುಡಿದಿದ್ದರು..

- Advertisement -

ಹೌದು ಈ ಮೊದಲು ಶುಕ್ರವಾರವೇ ಎಸ್ ಐ ಟಿ ಮುಂದೆ ರಮೇಶ್ ಜಾರಕಿಹೋಳಿ ಅವರು ಹಾಜರಾಗಬೇಕಿತ್ತು.. ಆದರೆ ಜ್ವರ ಇದೆ ಎಂಬ ಕಾರಣಕೊಟ್ಟು ಎರಡು ದಿನ ಬಿಟ್ಟು ವಿಚಾರಣೆಗೆ ಬರುವುದಾಗಿ ತಿಳಿಸಿದ್ದರು.. ಆದರೀಗ ಕೊರೊನಾ ಪಾಸಿಟಿವ್ ಎನ್ನುತ್ತಿದ್ದಾರೆ.. ಈ ಬಗ್ಗೆ ನಿನ್ನೆಯೇ ಮಾತನಾಡಿದ್ದ ಯುವತಿ ಪರ ಲಾಯರ್ ತಂಡದ ಸೂರ್ಯ ಮುಕುಂದ್ ರಾಜ್ ಅವರು ನಿನ್ನೆ ರಮೇಶ್ ಜಾರಕಿಹೋಳಿ ಅವರಿಗೆ ಜ್ವರ ಬಂದಿದೆ.. ನಾಳೆ ಕೊರೊನಾ ಪಾಸಿಟಿವ್ ಎಂಬ ರಿಪೋರ್ಟ್ ಬರುತ್ತದೆ.. ವಿಚಾರಣೆ ಇನ್ನು ಹದಿನೈದು ದಿನ ಮುಂದೆ ಹೋಗುತ್ತದೆ.. ಈ ರೀತಿಯಾದರೆ ಸಾಕ್ಷಿಗಳನಾಶ ವಾಗಲಿದೆ ಎಂದಿದ್ದರು..

- Advertisement -
- Advertisement -

Latest News

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...
- Advertisement -

More Articles Like This

- Advertisement -
close
error: Content is protected !!