ರಾಷ್ಟ್ರಭಕ್ತಿ ಮತ್ತು ಭಕ್ತಿಭಾವವನ್ನು ಮೂಡಿಸುವ ‘ಬಲೋಪಾಸನಾ ಸಪ್ತಾಹ’ಕ್ಕೆ ಯುವಜನತೆಯಿಂದ ಅಭೂತಪೂರ್ವ ಸ್ಪಂದನ

Must Read

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಟೈಮ್ಸ್ ಆಫ್ ಕರ್ನಾಟಕ ವರದಿಗೆ ಸ್ಪಂದನೆ ; ಅಕ್ರಮ ಮರಳು ದಂಧೆಯ ಬಗ್ಗೆ ಸ್ಪಷ್ಟೀಕರಣ ನೀಡಿದ ಎಸಿ

ಸಿಂದಗಿ: "ಅಕ್ರಮ ಮರಳು ಸಾಗಾಟ ನಿರಂತರ ; ಜಾಣ ಕುರುಡರಾದ ಅಧಿಕಾರಿಗಳು " ಎಂಬ ಶೀರ್ಷಿಕೆಯಲ್ಲಿ ನಮ್ಮ ಟೈಮ್ಸ ಆಫ್ ಕರ್ನಾಟಕ ವೆಬ್ ಪತ್ರಿಕೆಯಲ್ಲಿ ದಿ....

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ರಾಮನವಮಿಯಿಂದ ಹನುಮಂತ ಜಯಂತಿಯ ಈ ಅವಧಿಯಲ್ಲಿ ಆನ್‌ಲೈನ್ ಮೂಲಕ ‘ಬಲೋಪಸನಾ ಸಪ್ತಾಹ’ದ ಆಯೋಜನೆ !

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಯುವಕರಲ್ಲಿ ಸದ್ಯ ದೇಶಕ್ಕೆ ಬಂದಿರುವ ಗಂಡಾಂತರವನ್ನು ಎದುರಿಸಲು ಧೈರ್ಯ ಬರಬೇಕು, ಅವರಲ್ಲಿ ರಾಷ್ಟ್ರ ಭಕ್ತಿ ಮತ್ತು ಹನುಮ ಭಕ್ತಿ ನಿರ್ಮಾಣ ಮಾಡಲು ದಿನಾಂಕ 21 ಏಪ್ರಿಲ್ ರಾಮನವಮಿಯಿಂದ 27 ಏಪ್ರಿಲ್ ಹನುಮಂತ ಜಯಂತಿಯ ತನಕ ಆನ್‌ಲೈನ್ ಮೂಲಕ ಬಲೋಪಾಸನಾ ಸಪ್ತಾಹದ ಆಯೋಜನೆ ಮಾಡಲಾಗಿತ್ತು.

ಬೆಳಗಾವಿ, ಬಾಗಲಕೋಟೆ, ಧಾರವಾಡ ಮತ್ತು ಶಿವಮೊಗ್ಗ ಜಿಲ್ಲೆಯ ಯುವಕ-ಯುವತಿಯರ ಅತ್ಯುತ್ತಮ ಸಹಭಾಗ, ಬೆಂಬಲ ಸಿಕ್ಕಿತು.  ಪ್ರತಿದಿನ ಸಂಜೆ 7 ರಿಂದ 8 ಈ ಸಮಯದಲ್ಲಿ ನಡೆಯುವ ಬಲೋಪಾಸನಾ ವರ್ಗದಲ್ಲಿ ಪ್ರತಿದಿನ ಹೆಚ್ಚು ಯುವಕರು ಈ ಜಿಲ್ಲೆಗಳಿಂದ ಆನ್‌ಲೈನ್ ಮೂಲಕ ಭಾಗವಹಿಸಿದ್ದರು.

- Advertisement -

ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ವಿಜಯ ರೇವಣಕರ ಇವರು ಸದ್ಯ ದೇಶಕ್ಕೆ ಬಂದಿರುವ ಸಂಕಟವನ್ನು ಧೈರ್ಯ ಮತ್ತು ಸಂಘಟಿತವಾಗಿ ಎದುರಿಸಬೇಕು ಅದಕ್ಕಾಗಿ ಇದರಲ್ಲಿ ಶರೀರದ ಸಧೃಡತೆಗೆ ಶಾರೀರಿಕ ವ್ಯಾಯಾಮದ ಪ್ರಕಾರಗಳು, ಶ್ರೀರಾಮನ ಜೀವನದಲ್ಲಿನ ಕಠಿಣ ಪ್ರಸಂಗಗಳ ಶ್ರವಣ, ಹನುಮಂತನ ಜೀವನದಲ್ಲಿನ ಶ್ರೀರಾಮನ ಸೇವಾ ಭಾವದ ಪ್ರಸಂಗಗಳನ್ನು ಹೇಳಲಾಯಿತು.

ಈ ವರ್ಗವು ಯುವಕರಲ್ಲಿ ಬಲೋಪಾಸನೆ, ಏಕಾಗ್ರತೆ ಹೆಚ್ಚಾಗುವುದು, ಆತ್ಮವಿಶ್ವಾಸದಲ್ಲಿ ಹೆಚ್ಚಳ, ಶಾರೀರಿಕ ಕ್ಷಮತೆ ವಿಕಸನ, ಗುಣವೃದ್ಧಿ ಹೀಗೆ ಅನೇಕ ರೀತಿಯಲ್ಲಿ ಲಾಭವಾಗುವುದು ಎಂದು ತಿಳಿಸಿದರು.

ಸದ್ಯ ದೇಶ ಎದುರಿಸುತ್ತಿರುವ ಕೊರೋನಾ ಸಂಕ್ರಾಮಿಕತೆಯ ಸಂಕಟ ಮತ್ತು ಒತ್ತಡದಿಂದ ಹೊರಬರಲು ಬಲೋಪಾಸನೆ, ಶ್ರೀರಾಮ ಭಕ್ತಿ, ಶ್ರೀ ಮಾರುತಿಯ ಸೇವಾ ಭಾವ ಒಂದೇ ಪರಿಹಾರ ಎಂದರು.


ಶ್ರೀ. ವಿಜಯ ರೇವಣಕರ, ಸಮನ್ವಯಕರು,
 ಹಿಂದೂ ಜನಜಾಗೃತಿ ಸಮಿತಿ, ಶಿವಮೊಗ್ಗ.
ಸಂಪರ್ಕ : 7204082673

- Advertisement -
- Advertisement -

Latest News

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...
- Advertisement -

More Articles Like This

- Advertisement -
close
error: Content is protected !!