ರಾಷ್ಟ್ರ ವೈವಿಧ್ಯತೆಯನ್ನು ಸಾರುವ ತಿರಂಗಾ ಗರಗದಲ್ಲಿ ಜನ್ಮ ತಾಳುತ್ತಿದೆ.

Must Read

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...

ಸ್ನೇಹಿತರ ದಿನಾಚರಣೆಯ ಶುಭಾಷಯಗಳು

ನಮ್ಮಲ್ಲಿ ಎಷ್ಟೋ ದಿನಾಚರಣೆಗಳಿವೆ. ಇದರಲ್ಲಿ ಸ್ನೇಹಕ್ಕೆ ಕೊಡುವ ಬೆಲೆ ಯಾವುದಕ್ಕೂ ಕೊಡಲಾಗದು ಎನ್ನುತ್ತಾರೆ. ಕಾರಣ ಇಲ್ಲಿ ಸ್ವಾರ್ಥ ಅಹಂಕಾರವಿರದೆ ಶುದ್ದ ಭಾವನೆಗಳ ಸಮ್ಮಿಲನವಿರುತ್ತದೆ. ಬಡವ ಬಡವನನ್ನು...

ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಲು ಒತ್ತಾಯ

ಸಿಂದಗಿ: ರಾಜ್ಯದಲ್ಲಿ ಪಿಂಜಾರ, ನದಾಫ್ ಸಮುದಾಯಗಳು ಶಿಕ್ಷಣ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದ್ದು ಈ ಜನಾಂಗ ಉದ್ದಾರವಾಗಬೇಕಾದರೆ ಪಿಂಜಾರ್ ಅಭಿವೃದ್ಧಿ ನಿಗಮ ಅವಶ್ಯಕತೆ ಇದೆ. ಪ್ರವರ್ಗ...

ನಮ್ಮ ದೇಶ ಭಾರತ….. ಭಾರತ ದೇಶದಲ್ಲಿ ಹುಟ್ಟಿರುವ ಪ್ರತಿಯೊಬ್ಬ ಪ್ರಜೆಯೂ ಕೂಡ ಪುಣ್ಯವಂತರು , ಒಟ್ಟಿನಲ್ಲಿ ನಾವೆಲ್ಲರೂ ಭಾರತೀಯರು.ರಾಷ್ಟ್ರ ಧ್ವಜವನ್ನು ನೋಡಿದ ತಕ್ಷಣ ಯಾರಿಗಾದರೂ ಆಗಲಿ ದೇಹದ ಮೇಲಿನ ರೋಮಗಳು ಎದ್ದು ನಿಂತು ಜಾತಿ ಮತ ಪಂಥ ಧರ್ಮಗಳು ಎಲ್ಲವೂ ಕೂಡ ಒಮ್ಮೆ ಮರೆತು ಬಿಡುತ್ತದೆ,ಒಂದು ಕ್ಷಣದಲ್ಲಿ ದೇಶ ಒಂದೇ ನಮಗೆ ಮುಖ್ಯ ಎಂದು ಅನಿಸಿಬಿಡುತ್ತದೆ,ದೇಶದ ರಾಷ್ಟ್ರ ಧ್ವಜವನ್ನು ತಲೆ ಎತ್ತಿ ನೋಡಿದರೆ ಭಾರತೀಯ ವಿಶ್ವ ಮಟ್ಟದಲ್ಲಿ ತಲೆ ಎತ್ತಿ ನಿಂತಂತೆ.ತಿರಂಗಾ ನೋಡಿದ ತಕ್ಷಣ ನಮ್ಮ ಸೈನಿಕರು ಯಾವುದೇ ಪರಿಸ್ಥಿತಿಯಲ್ಲಿ ಧ್ವಜಕ್ಕೆ ತೊಂದರೆ ಆಗದೆ ತಮ್ಮ ಪ್ರಾಣವನ್ನು ಲೆಕ್ಕಿಸದೆ ಕಾಪಾಡುವರು, ಧ್ವಜಾರೋಹಣ ಸಮಯದಲ್ಲಿ ಎಲ್ಲರೂ ಕೂಡ ಎದ್ದು ನಿಂತು ಗೌರವ ನೀಡುವ ವಸ್ತು ಎಂದರೆ ರಾಷ್ಟ್ರ ಮಾತೆಗೆ ಮತ್ತು ಧ್ವಜಕ್ಕೆ ಮಾತ್ರ ,ನಮ್ಮ ಆಧುನಿಕ ಯುಗದಲ್ಲಿ ಗುರು ಹಿರಿಯರಿಗೂ ಗೌರವ ಕೊಡದ ಜನರು ದೇಶ ಎಂದರೆ ಸಾಕು ಒಗ್ಗೂಡುವರು ಇದು ತುಂಬಾ ಸಂತೋಷ ವಿಷಯ,ಈ ರಾಷ್ಟ್ರ ಧ್ವಜವನ್ನು ಹೇಗೆ ತಯಾರಿ ಮಾಡುವರು ,ಎಲ್ಲಿ ಮಾಡುವರು, ಅಂತ ತುಂಬಾ ಜನ ತಿಳಿಯಬೇಕು.ರಾಷ್ಟ್ರ ಧ್ವಜವನ್ನು ತಯಾರಿಸುವ ನೆಲೆ ನಮ್ಮ ನಾಡಿನಲ್ಲಿ ಇದೆ ಎಂದು ನನಗೆ ತುಂಬಾ ತುಂಬಾ ಸಂತೋಷದ ಪರ್ವ.

ರಾಷ್ಟ್ರ ಧ್ವಜವನ್ನು ತಯಾರಿಸುವ ಪುಣ್ಯ ಸ್ಥಳ ನಮ್ಮ ಕರುನಾಡಿನ ಧಾರವಾಡ ಜಿಲ್ಲೆಯ ಗರಗ ಎಂಬ ಹಳ್ಳಿಯಲ್ಲಿ ಎನ್ನುವುದು ಖುಷಿ ಖುಷಿಯಾಗಿ ಹೇಳುವ ವಿಚಾರ.ರಾಷ್ಟ್ರ ಧ್ವಜವನ್ನು ತಯಾರಿಸುವ ಹಕ್ಕನ್ನು ಈಗಾಗಲೇ ಅನಾದಿ ಕಾಲದಿಂದಲೂ ಭಾರತ ಸರ್ಕಾರ ಕರ್ನಾಟಕದ ಗರಗ ಗ್ರಾಮಕ್ಕೆ ಕೊಟ್ಟಿದೆ ಅದು ನಮ್ಮ ಕರುನಾಡಿನ ನೆಲೆಯಲ್ಲಿ . ಒಟ್ಟಾರೆ ಗರಗ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ 52 ಹಳ್ಳಿಗಳಲ್ಲಿ ರಾಷ್ಟ್ರ ಧ್ವಜವನ್ನು ತಯಾರಿಸುವ ಹಕ್ಕನ್ನು ಪಡೆದುಕೊಂಡಿವೆ.ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ಕಾಲದಲ್ಲಿ ರಾಷ್ಟ್ರ ಧ್ವಜವನ್ನು ಎಲ್ಲಿ ಕೂಡ ಹಾರಿಸುವ ಹಕ್ಕನ್ನು ಪಡೆದುಕೊಂಡಿದ್ದಿಲ್ಲ , ಧ್ವಜವನ್ನು ಹಾರಿಸಿದರೆ ಬ್ರಿಟಿಷರ ಗುಂಡಿಗೆ ಬಲಿಯಾದ ಎಷ್ಟೋ ಜೀವಗಳು ಸಾಕ್ಷಿ ಎಂದು ಇತಿಹಾಸದಲ್ಲಿ ಓದುತ್ತೇವೆ, ಸ್ವಾತಂತ್ರ್ಯ ಹೋರಾಟದಲ್ಲಿ ಜನ ಹೋರಾಟ ಮಾಡಿ ಬಾವುಟವನ್ನು ಆಕಾಶದ ಎತ್ತರಕ್ಕೆ ಹಾರಿಸಿದಾಗ ಬ್ರಿಟಿಷರು ಗುಂಡುಗಳ ದಾಳಿ ಮಾಡಿ ಬಿಟ್ರು , ಆದರೆ ಈಗ ನಾವು ಧ್ವಜಾರೋಹಣ ಮಾಡಿ ಹಬ್ಬದಂತೆ ಆಚರಣೆ ಮಾಡುತ್ತೇವೆ .

ಗರಗ ಗ್ರಾಮದಲ್ಲಿ ಕೈಮಗ್ಗದಿಂದ ಖಾದಿ ಬಟ್ಟೆಯನ್ನು ಬಳಸಿ ಬಾವುಟವನ್ನು ತಯಾರಿಸುವರು,ಅಂದು ಗಾಂಧೀಜಿ ಚರಕದಿಂದ ಖಾದಿ ಬಟ್ಟೆಯಲ್ಲಿ ಧ್ವಜವನ್ನು ತಯಾರಿಸುವ ವಿಧಾನ ಎಲ್ಲರಿಗೂ ಹೇಳಿ ಕೊಡುತ್ತಿದ್ದರು , ಏಕೆಂದರೆ ಅಂದು ಬ್ರಿಟಿಷರ ಕಾರ್ಖಾನೆಯ ಬಟ್ಟೆಗಳು ಭಾರತ ದೇಶವನ್ನು ಸುತ್ತಿ ಕೊಂಡ ಪರಿಣಾಮಕ್ಕಾಗಿ , ಇಂದು ಗರಗ ದೇಶದ ಎಲ್ಲಾ ಮೂಲೆ ಮೂಲೆಗಳಲ್ಲಿ ಗೊತ್ತಿರುವ ಚಿಕ್ಕ ಗ್ರಾಮ ,ಈ ಗ್ರಾಮ ಒಂದು ದೇವಸ್ಥಾನ ಇದ್ದಂತೆ ,ಇಲ್ಲಿ ಬಾವುಟವೇ ದೇವರು ನೇಕಾರರೇ ಪೂಜಿಸುವರು , ವರ್ಷದಲ್ಲಿ ಎರಡು ದಿನ ಆಕಾಶದ ಎತ್ತರಕ್ಕೆ ಎಳೆದು ಹಾರಿಸುವ ನಾವು ಭಕ್ತರು,ಈ ಗ್ರಾಮ ತುಂಬಾ ಪರಿಸರಾತ್ಮಕ ಗ್ರಾಮ ,ಎಲ್ಲರೂ ಕೂಡ ತಮ್ಮ ಕಾಯಕವನ್ನು ಶುದ್ಧತೆಯಿಂದ ಮಾಡುವರು , ಯಾವುದೇ ಜಾತಿ ಮತ ಪಂಥ ಧರ್ಮವನ್ನು ನೋಡದೇ ಎಲ್ಲರೂ ಭಾರತೀಯರಂತೆ ಕೆಲಸ ಮಾಡುವರು ,ನಾನು ಈ ಗ್ರಾಮದಲ್ಲಿ ನೋಡಿದಂತೆ ಅತಿ ಹೆಚ್ಚಾಗಿ ಮಹಿಳೆಯರು ಜಾಸ್ತಿ ಇರುವರು, ತಾಳ್ಮೆಯ ಗುಣ ಅಮ್ಮಂದಿರ ಸ್ವಂತ ಅಲ್ವಾ ಅದಕ್ಕೆ .ಆ ಸ್ಥಳದಲ್ಲಿ ಯಾರು ಕೂಡ ಪಾದರಕ್ಷೆಗಳನ್ನು ಹಾಕದೇ ಶುದ್ಧ ಮನಸ್ಸಿನಿಂದ , ಭ್ರಷ್ಟಾಚಾರ ಮಾಡದೇ ಎಲ್ಲರೂ ಕೂಡ ಕೆಲಸ ಮಾಡುವರು . ಎಲ್ಲರೂ ವೀರಪ್ಪ ನಾಯಕ ಚಲನಚಿತ್ರ ನೋಡಿರುವಿರಿ ಅಲ್ವಾ ಹಾಗೆ ಆದೇ ರೀತಿ ಗರಗ ಗ್ರಾಮ , ಈಗೀನ ಯುವಕರು ಪುಸ್ತಕ ಓದುವುದಿಲ್ಲ ಅಲ್ವಾ ಅದಕ್ಕೆ ಚಲನಚಿತ್ರದ ಉದಾಹರಣೆ ಕೊಟ್ಟೆ ,ದೇಶದ ತಾಯಿ ದುಡಿಯಲು ಕೆಲಸ ಕೊಟ್ಟಿದೆ, ಅನ್ನವನ್ನು ನೀಡಿದೆ, ಧ್ವಜವನ್ನು ದೇಶದ ಮೂಲೆ ಮೂಲೆಗಳಲ್ಲಿ ಕಳೆಸುವುದರ ಮೂಲಕ ಆರ್ಥಿಕ ಮಟ್ಟವನ್ನು ಕಾಪಾಡಿಕೊಂಡಿದೆ.

- Advertisement -

ಕ್ರಿಶ 1954 ರಲ್ಲಿ ಧಾರವಾಡದ ಕೆಲವು ಸ್ವಾತಂತ್ರ್ಯ ಹೋರಾಟಗಾರರು ಧಾರವಾಡ ತಾಲೂಕು ಕ್ಷೇತ್ರ ಸೇವಾ ಸಂಘ ಎಂದು ಸ್ಥಾಪನೆ ಮಾಡಿದರು ಆಗ ಕೆಲವು ವರ್ಷಗಳ ನಂತರ ಗರಗ ಗ್ರಾಮಕ್ಕೆ ರಾಷ್ಟ್ರ ಧ್ವಜವನ್ನು ತಯಾರಿಸುವ ಲೈಸೆನ್ಸ್ ಸಿಕ್ಕಿತು,ಕೈಮಗ್ಗದಲ್ಲಿ ತಯಾರಿಸುವ ದೇಶದ ಏಕೈಕ ತಾಣ ಕರುನಾಡಿನ ಗರಗವಾಗಿದೆ.ಇಲ್ಲಿಂದ ಹಲವಾರು ತಾಣಕ್ಕೆ ರಾಷ್ಟ್ರ ಧ್ವಜ ಸರಬರಾಜು ಮಾಡುವರು ಹಾಗೆ ರಾಷ್ಟ್ರ ಧ್ವಜವನ್ನು ಸುಖಾಸುಮ್ಮನೆ ನಮಗೆ ಮನಬಂದಂತೆ ಹೊಲಿದು ಬಳಸುವಂತಿಲ್ಲ ,ಈಗ ಪ್ಲಾಸ್ಟಿಕ್ ಧ್ವಜವನ್ನು ಕೂಡ ನಿಷೇಧ ಮಾಡಿಬಿಟ್ಟರು.ಕೇಸರಿ ಬಿಳಿ ಹಸಿರಿನ ಬಣ್ಣದ ಖಾದಿ ಹತ್ತಿಯ ನೂಲಿನ ಎಳೆ ಭಾರತ ಬಾವುಟವನ್ನು ಆಕಾಶದ ಎತ್ತರಕ್ಕೆ ಎಳೆದು ವಿಶ್ವಕ್ಕೆ ಮಾದರಿ ಮಾಡಿಕೊಟ್ಟಿದೆ. ಕ್ರಿಶ 1947 ಜುಲೈ 22 ರಂದು ರಾಷ್ಟ್ರದ ನಾಯಕರು ಪಿಂಗಾಳಿ ವೆಂಕಯ್ಯ ತಯಾರಿಸಿದ ರಾಷ್ಟ್ರ ಧ್ವಜವನ್ನು, ಇದೆ ನಮ್ಮ ದೇಶದ ಧ್ವಜವೆಂದು ಒಪ್ಪಿಕೊಂಡರು.

ನಮ್ಮ ರಾಷ್ಟ್ರ ಧ್ವಜವನ್ನು ತಿರಂಗಾ ಎನ್ನುವ ಹೆಸರಿನಿಂದ ಕರೆಯುತ್ತಾರೆ, ತಿರಂಗಾ ಎಂದರೆ ಮೂರು ಬಣ್ಣಗಳ ಧ್ವಜ ಎಂದರ್ಥ , ವಾಸ್ತವದಲ್ಲಿ ನಾಲ್ಕು ಬಣ್ಣಗಳಿವೆ.ರಾಷ್ಟ್ರ ಧ್ವಜವನ್ನು ಒಂಬತ್ತು ಗಾತ್ರಗಳಲ್ಲಿ ತಯಾರಿಸಲಾಗುತ್ತದೆ,ಅತಿ ಚಿಕ್ಕದ್ದು 6/4 ಇಂಚು ಗಾತ್ರ ಹೊಂದಿದ್ದಾರೆ ಪ್ರಮುಖ ಕಟ್ಟಡಗಳ ಮೇಲೆ ಹಾರಿಸಬಹುದು ,ದೊಡ್ಡ ಧ್ವಜವನ್ನು 21/14 ಅಡಿಯಲ್ಲಿ ಹಾರಿಸಬಹುದು ,ದೆಹಲಿಯ ಕೆಂಪುಕೋಟೆಯಲ್ಲಿ ಮತ್ತು ರಾಷ್ಟ್ರಪತಿ ಭವನ ಮೊದಲಾದ ಕಟ್ಟಡಗಳ ಮೇಲೆ ಮಾಧ್ಯಮ ಗಾತ್ರದ ಅಂದರೆ 12/8 ಅಡಿಯ ಅಳತೆಯ ಧ್ವಜವನ್ನು ಹಾರಿಸಲಾಗುತ್ತದೆ.ಒಟ್ಟನಲ್ಲಿ ನಾವೆಲ್ಲ ಭಾರತೀಯರು ಎಂಬ ಭಾವ ಮೂಡಲಿ, ನಮ್ಮಲ್ಲಿ ಬೇಧ ಭಾವ ದೂರವಾಗಲಿ ಎನ್ನುವ ಗೀತೆಯ ಸಾಲುಗಳು ನಿಜವಾಗಲಿ.ನನ್ನ ದೇಶ ,ನನ್ನ ಹೆಮ್ಮೆ, ನಾವೆಲ್ಲರೂ ಭಾರತೀಯರು , ಭಾರತೀಯ ಪ್ರಜೆಗಳಾದ ನಾವು ಏಕತೆ ಸಮಾನತೆ ಜಾತ್ಯತೀತತೆಯಿಂದ ಬದುಕಬೇಕು , ಭಾಷೆ ಬೇರೆಯಾದರೂ ನಾಲಿಗೆ ಒಂದೇ,ಆಚರಿಸುವ ಸಂಸ್ಕೃತಿ ಬೇರೆಯಾದರೂ ಕೆಂಪು ಬಣ್ಣದ ರಕ್ತ ಒಂದೇ,ಬಣ್ಣ ಬೇರೆಯಾದರೂ ಉಸಿರಾಡುವ ಗಾಳಿ ಒಂದೇ ,ಜೀವಿಸುವ ಮಣ್ಣು ಬೇರೆಯಾದರೂ ಭೂಮಿ ತಾಯಿ ಎಲ್ಲರಿಗೂ ಒಂದೇ.

ಧನ್ಯವಾದಗಳು ಎಲ್ಲರಿಗೂ.


ಭೋವಿ ರಾಮಚಂದ್ರ
ಹರಪನಹಳ್ಳಿ
8861588118.

- Advertisement -
- Advertisement -

Latest News

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...
- Advertisement -

More Articles Like This

- Advertisement -
close
error: Content is protected !!