ಶುಂಠಿ ಬೆಳೆಗಾರನೊಬ್ಬನನ್ನು ಕಾಡಿನ ಆನೆ ಕೊಂದು ಹಾಕಿದ ಘಟನೆ ಮೈಸೂರಿನ ಸರಗೂರು ತಾಲೂಕಿನಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಕೇರಳದ ವಯನಾಡ ಮೂಲದ ಕೆ ವಿ ಜಾಯ ವರ್ಕೆ ಎಂಬ ರೈತನ ಮೃತ ದೇಹವು ಭಾನುವಾರ ಹೊಲದಲ್ಲಿ ದೊರಕಿದ್ದು, ಶುಂಠಿ ಬೆಳೆಗೆ ಆತ ನೀರು ಹಾಯಿಸುವಾಗ ಆನೆ ದಾಳಿ ಮಾಡಿ ಕೊಂದು ಹಾಕಿದೆ ಎಂದು ಶಂಕಿಸಲಾಗಿದೆ.
ಅರಣ್ಯ ಉಪಸಂರಕ್ಷಕ ಅಧಿಕಾರಿ ಪ್ರಶಾಂತ ಕುಮಾರ ಅವರು ಸ್ಥಳಕ್ಕೆ ಭೆಟ್ಟಿ ನೀಡಿ ಪರಿಶೀಲನೆ ಮಾಡಿದರು.
ಸರಗೂರು – ಹೆಗ್ಗಡದೇವನಕೋಟೆ ಪ್ರದೇಶವು ಬಂಡಿಪುರ ಸಂರಕ್ಷಿತ ಅರಣ್ಯ ಪ್ರದೇಶದಿಂದ ಸುತ್ತುವರೆದಿದ್ದು ಇಲ್ಲಿ ಕಾಡಾನೆಗಳ ಸಂಚಾರ ಸಾಮಾನ್ಯವಾಗಿ ದೆ ಎನ್ನಲಾಗಿದೆ.