ರೈತರ ಹೋರಾಟ ; ಗಗನಕ್ಕೇರಿದ ದರಗಳು. ಮೂಲೆಗುಂಪಾದ ಕೊರೋನಾ ಎಚ್ಚರಿಕೆ

Must Read

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...

ಕಾಂಗ್ರೆಸ್ ಸರ್ಕಾರದ ಕೆಲಸಗಳು ಅದರ ಗೆಲುವಿಗೆ ಕಾರಣವಾಗುತ್ತದೆ – ಸುಜಾತಾ ಕಳ್ಳಿಮನಿ

ಸಿಂದಗಿ: ಸಿದ್ದರಾಮಯ್ಯನವರು ಐದು ವರ್ಷದ ಅಧಿಕಾರದ ಅವಧಿಯಲ್ಲಿ ಈ ಕರುನಾಡಿಗೆ ಬಡವರ ಪರ, ರೈತರ ಪರ ಜಾರಿಗೆ ತಂದ ಯೋಜನೆಗಳು ಈ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಬಿಜೆಪಿ ಅಲೆಮಾರಿ ಜನಾಂಗಕ್ಕೆ ಸುಳ್ಳು ಹೇಳಿ ಮತ ಪಡೆಯುತ್ತಿದೆ – ಮೇಘರಾಜ್ ಆರೋಪ

ಸಿಂದಗಿ: ಬಿಜೆಪಿಯ ಸರ್ಕಾರ  ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ  ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಆಶ್ರಯ ಮನೆಗಳನ್ನು  ಮಂಜೂರು ಮಾಡದೆ ಕೇವಲ ಕಾಗದ ಪತ್ರದಲ್ಲಿ ಮಂಜೂರು...

ದಿಲ್ಲಿ ಹರಿಯಾಣದ ಗಡಿಯಲ್ಲಿ ರೈತರು ನಡೆಸುತ್ತಿರುವ ಚಳವಳಿ ಉಗ್ರ ರೂಪ ಪಡೆದುಕೊಂಡಿದ್ದು ಈವರೆಗೆ ನಾಲ್ಕು ಸುತ್ತುಗಳ ಮಾತುಕತೆ ನಡೆದರೂ ರೈತರು ತಮ್ಮ ಹಠವಾದಿ ಧೋರಣೆ ಬಿಡುತ್ತಿಲ್ಲ. ಮಾತುಕತೆ ವಿಫಲವಾಗುತ್ತಿದೆ.

ರೈತರು ದಿಲ್ಲಿ ಮಹಾನಗರಕ್ಕೆ ಸಂಪರ್ಕ ಸಾಧಿಸುವ ಎಂಟು ರಸ್ತೆಗಳಲ್ಲಿ ಐದು ರಸ್ತೆಗಳನ್ನು ಬಂದ್ ಮಾಡಿದ್ದು ದಿಲ್ಲಿಗೆ ಹೊರಡುವ ಕಾಯಿಪಲ್ಯೆ, ಹಾಲು ಮುಂತಾದ ಅಗತ್ಯ ವಸ್ತುಗಳ ಪೂರೈಕೆ ನಿಂತುಹೋಗಿದೆ.

ಇದರಿಂದ ಮಹಾನಗರದಲ್ಲಿ ಕಾಯಿಪಲ್ಯೆಯ ದರ ದುಪ್ಪಟ್ಟಾಗಿದೆ. ಜನತೆ ನಿಟ್ಟುಸಿರು ಬಿಡುತ್ತಿದ್ದು ರೈತರು ಬೆಳೆ ಬೆಳೆದರೆ ಜನಸಾಮಾನ್ಯರು ತೆರಿಗೆ ಕಟ್ಟುತ್ತಾರೆ. ಈಗ ಈ ತೊಂದರೆಗಳಿಗೆ ಜನರು ತೆರಿಗೆ ಕಟ್ಟಬೇಕಾ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

- Advertisement -

ದಿಲ್ಲಿಗೆ ಪ್ರತಿದಿನ ೨೫೦ ಟನ್ ಕಾಯಿಪಲ್ಯೆ ಮಾರುಕಟ್ಟೆಗೆ ಬರುತ್ತಿತ್ತು ಆದರೆ ಈಗ ಅರ್ಧ ಬರುತ್ತಿದೆ. ದರ ದುಪ್ಪಟ್ಟಾಗಿದೆ. ದಿನಕ್ಕೆ ೨೦೦೦-೩೦೦೦ ಕಾಯಿಪಲ್ಯೆ ಟ್ರಕ್ ಬರುವುದು ಈಗ ಕೇವಲ ೧೦೦೦ ಟ್ರಕ್ ಬರುತ್ತಿವೆ.

ಹಾಗೆ ನೋಡಿದರೆ ರೈತರ ಈ ಹೋರಾಟದಲ್ಲಿ ಕೇವಲ ನಾಲ್ಕು ರಾಜ್ಯಗಳ ರೈತರು ಮಾತ್ರ ಭಾಗವಹಿಸಿದ್ದು ಉಳಿದ ರಾಜ್ಯಗಳಲ್ಲಿ ರೈತರು ಇಲ್ಲವೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಲಾಗುತ್ತಿದೆ.ಅಲ್ಲದೆ ಕೃಷಿ ಕಾಯ್ದೆಯಿಂದ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಗೆ, ದಲ್ಲಾಳಿಗಳಿಗೆ ತೊಂದರೆಯಾಗಿದ್ದರಿಂದ ಈ ಚಳವಳಿಯನ್ನು ಹುಟ್ಟುಹಾಕಿ ಮುಗ್ಧ ರೈತರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಸರ್ಕಾರ ಸೇರಿದಂತೆ ಜನತೆಯೂ ಭಾವನೆ ವ್ಯಕ್ತಮಾಡುತ್ತಿದ್ದಾರೆ.

ಇನ್ನೊಂದು ವಿಷಯವೆಂದರೆ ಚಳವಳಿಯಲ್ಲಿರುವ ರೈತರಲ್ಲಿ ಕೊರೋನಾ ಬಗ್ಗೆ ಹೆದರಿಕೆಯೇ ಇಲ್ಲವಾಗಿದೆ. ಯಾರೂ ಮಾಸ್ಕ್ ಧರಿಸಿಲ್ಲ,ಸಾಮಾಜಿಕ ಅಂತರವಿಲ್ಲ, ಸ್ವಚ್ಛತೆಯಿಲ್ಲ . ಇದರಿಂದ ಮೊದಲೇ ಕೊರೋನಾ ಮಹಾಮಾರಿಯಿಂದಾಗಿ ಹೈರಾಣಾಗಿರುವ ದಿಲ್ಲಿ ಮತ್ತಷ್ಟು ಹೈರಾಣಾಗುವುದು ನಿಶ್ಚಿತವೇನೋ ಎನಿಸುತ್ತಿದೆ.

- Advertisement -
- Advertisement -

Latest News

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...
- Advertisement -

More Articles Like This

- Advertisement -
close
error: Content is protected !!