ಹೊಸದಿಲ್ಲಿ – ಭಾರತೀಯ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಕಪಿಲ್ ದೇವ ಕೂಡಾ ರೈತರ ಚಳವಳಿಯ ಬಗ್ಗೆ ತಮ್ಮ ಮೌನ ಮುರಿದಿದ್ದು ರೈತರು ಹಾಗೂ ಸರ್ಕಾರ ಆದಷ್ಟು ಬೇಗ ಒಂದು ಒಪ್ಪಂದಕ್ಕೆ ಬರಬೇಕು ಎಂದು ಆಗ್ರಹಿಸಿದ್ದಾರೆ.
ಎಲ್ಲಕ್ಕಿಂತ ಸುಪ್ರೀಮ್ ಅಂದರೆ ನಮ್ಮ ತಿರಂಗಾ ಧ್ವಜ ಅದಕ್ಕೆ ಅವಮಾನ ಆಗಬಾರದು. ತಜ್ಞರು ಆದಷ್ಟು ಬೇಗ ಈ ಚಳವಳಿಯ ಬಗ್ಗೆ ಒಂದು ತೀರ್ಮಾನ ತೆಗೆದುಕೊಳ್ಳಬೇಕು ಎಂದಿರುವ ಕಪಿಲ್ ದೇವ್, ಇಂಗ್ಲೆಂಡ್ ಕ್ರಿಕೆಟ್ ಸರಣಿಯಲ್ಲಿ ನಮ್ಮ ಭಾರತ ತಂಡ ಯಶಸ್ವಿಯಾಗಿ ಬರಲಿ, ಲಾಂಗ್ ಲಿವ್ ಇಂಡಿಯಾ ಎಂದು ಟ್ವೀಟ್ ಮಾಡಿದ್ದಾರೆ.
ಈ ಮುಂಚೆ ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ರವಿ ಶಾಸ್ತ್ರಿ ಕೂಡ ರೈತ ಚಳವಳಿಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಆದರೆ ಸಚಿನ್ ಅವರ ಟ್ವೀಟ್ ಬಗ್ಗೆ ಕೆಲವು ದುಷ್ಟ ಶಕ್ತಿಗಳು ಆಕ್ರೋಶ ವ್ಯಕ್ತಪಡಿಸಿ ಅವರ ಭಾವಚಿತ್ರಕ್ಕೆ ಮಸಿ ಎರಚಿದ್ದರು.
ಈ ಎಲ್ಲ ಸೆಲೆಬ್ರಿಟಿಗಳು ರೈತ ಹೋರಾಟದ ಬಗ್ಗೆ ಖ್ಯಾತ ಪಾಪ್ ತಾರೆಗಳಾದ ರಿಹಾನಾ ಹಾಗೂ ಗ್ರೆಟಾ ಥನ್ ಬರ್ಗ್ ಅವರು ಮಾತನಾಡಿದ ಬಗ್ಗೆ ಟ್ವೀಟ್ ಮಾಡಿ ಭಾರತದ ನೀತಿಗಳ ಬಗ್ಗೆ ವಿದೇಶಿಯರು ತಲೆ ಕೆಡಿಸಿಕೊಳ್ಳುವುದು ಬೇಡ ಎಂದಿದ್ದರು.