ಬೆಳ್ಳಂಬೆಳಗ್ಗೆ ಪಕ್ಕದ ಮನೆಯ ಯುವಕ ಬಂದು ನನ್ನತ್ರ ಬೈಕ್ ಕೇಳಿದ – ” ಅಣ್ಣಾ ಬೈಕ್ ಒಮ್ಮೆ ಕೊಡುತ್ತೀರಾ…? ಲ್ಯಾಬ್ ವರೆಗೆ ಹೋಗಿ ರಿಪೋರ್ಟ್ ತರಬೇಕಿತ್ತು..”
ನಾನು – ಅದಕ್ಕೇನಂತೆ… ತಗೋ ಕೀ…
ಆತ ಬೈಕ್ ಸ್ಟಾರ್ಟ್ ಮಾಡಿ ಹೊರಟೋದ.
ಪಾಪ ಯುವಕ.. ಇತೀಚೆಗಷ್ಟೇ ಮದುವೆಯಾಗಿದ್ದು. ಅದೂ ಕೂಡಾ ಲಾಕ್ ಡೌನ್ ಆಗುವುದಕ್ಕಿಂತ ಒಂದುವಾರದ ಹಿಂದೆ.
ಹೆಚ್ಚು ತಡಮಾಡದೆ ಆ ಯುವಕ ಹಿಂತಿರುಗಿದ. ಆಗ ನಾನು ಮನೆಯ ಹಿತ್ತಲಲ್ಲಿ ನಿಂತಿದ್ದೆ.
ಆತ ಬಂದವನೇ ಬೈಕನ್ನು ಪಕ್ಕದಲ್ಲಿ ನಿಲ್ಲಿಸಿ, ಕೀಯನ್ನು ನನ್ನ ಕೈಗೆ ಕೊಡುತ್ತಾ, ನನ್ನನ್ನು ಅಪ್ಪಿಕೊಂಡು, ‘ತುಂಬಾ ಧನ್ಯವಾದಗಳು ಅಣ್ಣಾ’ ಅಂತ ಹೇಳಿ ಸರಸರನೇ ನಡೆದು ಸಾಗಿದ.
ಆತನ ಮನೆಯ ಹಿತ್ತಲವರೆಗೆ ತಲುಪಿದವನೇ ಆತ ಕೂಗಿ ಹೇಳುವುದನ್ನು ಕೇಳಿಸಿಕೊಂಡೆ –
“ ರಿಪೋರ್ಟ್ ಪಾಸಿಟಿವ್ ಆಗಿದೆ ಪುಷ್ಪಾ… ಇನ್ನು ತುಂಬಾ ಜಾಗೃತೆವಹಿಸಬೇಕು”
ಪುಷ್ಪಾ ಆತನ ಪತ್ನಿಯ ಹೆಸರು
ನನ್ನ ತಲೆಗೆ ಸಿಡಿಲುಬಡಿದ ಅನುಭವ ಆಯಿತು ನನ್ನ ಅವಸ್ಥೆ…. ಕಣ್ಣು ಕತ್ತಲಾಗುವಂತೆ ನನಗೆ ಅನಿಸಿತು. ಕೆಳಕ್ಕೆ ಬೀಳದಿರಲು ಹರಸಾಹಸಪಟ್ಟೆ.. ಮೆಲ್ಲಮೆಲ್ಲನೆ ಮನೆಯ ಒಳಗೆ ಹೋದೆ. ಕೀ ಮತ್ತು ಕೈಗಳನ್ನು ಸಾನಿಟಯಿಸರ್ ನಿಂದ ಮೂರು ಮೂರು ಬಾರಿ ತೊಳೆದೆ…
ಬೈಕನ್ನು ಮೂರು ಮೂರು ಬಾರಿ ಸರ್ಫ್ ನಿಂದ ತೊಳೆದೆ.
ಆಗ ನನಗೆ ನೆನಪಾಯ್ತು ಆ ಮಹಾಪಾಪಿ ನನ್ನನ್ನು ಅಪ್ಪಿಕೊಂಡು ಧನ್ಯವಾದಗಳನ್ನು ಹೇಳಿದ್ದು….
ನನ್ನ ಮನಸು ನನ್ನತ್ರ ಹೇಳಿತು – ” ನೀನು ಕೊರೋನಾದ ಅಂತರ್ವಲಯದಲ್ಲಿ ಸಿಕ್ಕಾಕ್ಕೊಂಡಿದ್ದಿ… ಈ ಕೊರೋನಾ ನಿನ್ನನ್ನು ಖಂಡಿತವಾಗಿಯೂ ಬಿಡದು… ಇನ್ನು ಕೇವಲ ಬೆರಳೆಣಿಕೆಯ ದಿನಗಳಷ್ಟೇ ನಿನ್ನ ಮುಂದಿರುವುದು….”
ಬೇಗಬೇಗನೇ ಬಾತ್ ರೂಮೊಳಗೆ ಹೋದೆ…
ಮೂರು ಮೂರು ಬಾರಿ ಡೆಟ್ಟಾಲ್ ಸೋಪ್ ನಿಂದ ದೇಹವನ್ನೆಲ್ಲಾ ಬ್ರಷ್ ನಿಂದ ಉಜ್ಜಿ ಸ್ನಾನ ಮಾಡಿದೆ…. ಭಯಭೀತನಾಗಿ ತುಂಬಾ ಹೊತ್ತು ಬಾತ್ ರೂಮಿನ ಮೂಲೆಯಲ್ಲಿ ಕುಸಿದು ಕುಳಿತೆ…..
ಮತ್ತೆ ಮೈಯನ್ನೆಲ್ಲಾ ಬಟ್ಟೆಯಿಂದ ಒರಸಿ ಬೇರೆ ಬಟ್ಟೆಯನ್ನು ಧರಿಸಿ ಹೊರಬಂದೆ….
ಮೂಗು ಮತ್ತು ಬಾಯಿಯನ್ನು ಒಂದು ಟವೆಲ್ ನಿಂದ ಸುತ್ತುತ್ತಾ, ಮುಂಚೆ ಧರಿಸಿದ್ದ ಬಟ್ಟೆಯನ್ನು ಒಂದು ಕೋಲಿನಿಂದ ತೆಗೆದು ಮನೆಯ ಮುಂಬಾಗದಲ್ಲಿರುವ ಮಾವಿನ ಮರದ ಅಡಿಯಲ್ಲಿ ಹಾಕಿ ಬೆಂಕಿ ಹಾಕಿ ಹಿಂತಿರುಗುವಾಗ ಆ ಪಾಪಿ ಯುವಕ ನನ್ನ ಮನೆಯ ಅಂಗಳದಲ್ಲಿ ನಿಂತಿದ್ದ…
ಆತನನ್ನು ನೋಡಿದ್ದೇ ನೋಡಿದ್ದು ನನ್ನ ನಿಯಂತ್ರಣ ತಪ್ಪಿತ್ತು.
ನಾನು ಚೀರಾಡುತ್ತಾ – “ ಏ ಮಹಾಪಾಪಿಯೇ ನಿನ್ನ ರಿಪೋರ್ಟ್ ಪಾಸಿಟಿವ್ ಅಂತ ಗೊತ್ತಾದಾಗ ನೀನು ನನ್ನನ್ನಾದರೂ ಬಿಟ್ಟುಬಿಡಬಹುದಿತ್ತಲ್ಲಾ… ನಾನು ನಿನಗೇನು ದ್ರೋಹ ಮಾಡಿದೆ ಹೇಳು…? ನಾನು ಬೈಕ್ ಕೊಟ್ಟು ನಿನಗೆ ಉಪಕಾರ ಮಾಡಿದ್ದು ನನ್ನ ತಪ್ಪಾ…? ನಾನಾದರೂ ಈ ಮಹಾಮಾರಿಯಿಂದ ಪಾರಾಗುತ್ತಿದ್ದೆನಲ್ಲಾ ಪಾಪೀ…” ಅಷ್ಟು ಹೇಳುವಷ್ಟರಲ್ಲಿ ನನ್ನ ಕಂಠ ಗದ್ಗದಿತವಾಯಿತು….
ನನ್ನ ಮಾತುಗಳನ್ನು ಕೇಳುತ್ತಾ ಆತ ಆಶ್ಚರ್ಯಚಕಿತನಾಗಿ ನಿಂತ…
ಮತ್ತೆ ಜೋರಾಗಿ ನಗತೊಡಗಿದ…. ಏನೂ ತಿಳಿಯದೆ ನಾನೂ ಆತನನ್ನು ನೋಡುತ್ತಾ ನಿಂತೆ….
ನಗುವನ್ನು ಒಮ್ಮೆ ನಿಯಂತ್ರಿಸುತ್ತಾ ಆತ ಹೇಳಿದ – ” ಓ ಆ ರಿಪೋರ್ಟಿನ ವಿಷಯ…. ಅದು… ಅದು… ನನ್ನ ಪತ್ನಿಯ ಪ್ರೆಗ್ನೆನ್ಸಿ ರಿಪೋರ್ಟಾಗಿತ್ತು ಅಣ್ಣಾ…. ರಿಪೋರ್ಟ್ ಪಾಸಿಟಿವ್ ಆಗಿದೆ. ಅಂದ್ರೆ ಆಕೆ ಗರ್ಭಿಣಿ ಆಗಿದ್ದಾಳೆ….!
ಆತ ಮತ್ತಷ್ಟು ಜೋರಾಗಿ ನಗತೊಡಗಿದ… ಈ ಬಾರಿ ನಾನು ಕೂಡಾ ಆತನ ಜೊತೆ ನಗತೊಡಗಿದೆ…
😀😀😀
ಆದ್ದರಿಂದ ಸ್ನೇಹಿತರೇ ಈ ಕೊರೋನಾ ಕಾಲದಲ್ಲಿ ನೆನಪಿಟ್ಟುಕೊಳ್ಳಿ –
“ಪಾಸಿಟಿವ್ ರಿಪೋರ್ಟ್ ಗಳೆಲ್ಲವೂ ಕೊರೋನಾ ಆಗಿರಬಹುದು ಅಂತೇನಿಲ್ಲ….!
😀😀 ವಂದನೆಗಳು ಸ್ನೇಹಿತರೆ…