“ಅಂಜಿಕೆ ಏಕೆ”
ಮಲ್ಲಿಗೆ ಮುಡಿಯಲು ಅಂಜುವೆ ಏಕೆ
ಕೊರೋನ ನನಗಿಲ್ಲ ಬಿಡುನೀ ಶಂಕೆ
ಸರ್ವಸ್ವ ನೀನೆ ಎಂದೆ ಅಂದು
ಸನಿಹವೆ ಬೇಡ ಎನುತಿಹೆ ಇಂದು
ಬಿಟ್ಟಿರಲಾರೆ ಎನುತಿದ್ದೆ ಅಂದು
ಬಿಟ್ಟರೆ ಸಾಕು ಎನುತಿಹೆ ಇಂದು
ಕೇಳದೆ ಕೊಡುತ್ತಿದ್ದೆ ಎಲ್ಲವ ಅಂದು
ಕೇಳಲೆಬೇಡ ಎನುತಿಹೆ ಇಂದು
ಪಾಸಿಟೀವ್ ಬಂದಿಲ್ಲ ನನಗೆ
ಅಂತರವೇಕೆ ನಮಗೆ
ಪ್ರೀತಿಯ ಕೊಲ್ಲೊದು ಸರೀನಾ
ದಯವಿಟ್ಟು ತೊಲಗು ಕೊರೋನಾ.
ಒಳ್ಳೆಯ ಕೊರೋನಾ!
ಕಣ್ಣಿಗೆ ಕಾಣದ ಕ್ರಿಮಿ ಕೊರೋನ
ವಿಶ್ವದೆಲ್ಲೆಡೆ ಮಾಡಿತು ಯಮನ ಮಿಮಿಕ್ರೀನ, ಮಾರಣಹೋಮವನ್ನ ಕೆಡುಕಿನ ಜೊತೆ ಜೊತೆಗೆ
ಒಳಿತಿಗೂ ಅವಕಾಶ ಕೊಟ್ಟಿದೆ.
ಗಂಗೆಯ ಶುದ್ದಮಾಡಿದೆ
ಪರಿಸರ ಮಾಲಿನ್ಯ ನಿಂತಿದೆ
ಪ್ರೇಮಿಗಳ ರಾಸಲೀಲೆಗಳೂ ನಿಂತು
ಉದ್ಯಾನವನಗಳ ಶೋಭೆ ಹೆಚ್ಚಿದೆ
ರಸ್ತೆ ಅಪಘಾತಗಳು ನಿಂತಿವೆ
ಮದುವೆ ಮುಂಜಿ ಸಭೆ ಸಮಾರಂಭಗಳು ಸರಳವಾಗಿವೆ,
ದುಂದು ವೆಚ್ಚ ನಿಂತಿದೆ
ವ್ಯಭಿಚಾರ ಡೇಟಿ೦ಗ್ ಕ್ಲಬ್ ಪಬ್
ಪಾರ್ಟಿಗಳಿಲ್ಲ.
ಕುಡುಕರ ಕಿರುಕುಳ ವರದಕ್ಷಿಣೆ ಸಾವಿಲ್ಲ.
ಕುಂಟುಂಬಗಳ ಒಲವು ಹೆಚ್ಚಿದೆ
ಶ್ರೀಮಂತರ ಸೊಕ್ಕು ಇಳಿದಿದೆ
ಮಾನವೀಯ ಮೌಲ್ಯಗಳು ಮೆರೆದಿದೆ
ದಾನ ಧರ್ಮಗಳ ಚಿಂತನೆ ನಡೆದಿದೆ
ವಿಶ್ವದ ಚಿತ್ತ ಭಾರತದತ್ತ ತಿರುಗಿದೆ.
ಆದರೂ ಕೋರೋನ ಬೇಡ .
ಮುಚ್ಕೊಂಡು ಮನೆಯಲ್ಲಿದ್ರೆ
ಜೀವ ಉಳಿಯುತ್ತೆ
ಬಿಟ್ಕೊಂಡು ಹೊರಗೆ ಹೋದರೆ
ಕೋರೋನ ಕೊಲ್ಲುತ್ತೆ.
ವಿಕ್ರಂ ಶ್ರೀನಿವಾಸ್ ಮಾಲೂರು