ಮುಧೋಳ – ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಮಿನಿ ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಬೆಂಕಿ ಹೊತ್ತಿಕೊಂಡು ಇಬ್ಬರು ಸಜೀವ ದಹನಗೊಂಡ ದಾರುಣ ಘಟನೆ ಯಾದವಾಡ ಬಳಿ ಜರುಗಿದೆ.
ಮುಧೋಳ ಯಾದವಾಡ ರಸ್ತೆಯ ಉತ್ತೂರಿನ ಸಿಮೆಂಟ್ ಕಾರ್ಖಾನೆ ಹತ್ತಿರ ಈ ಅವಘಡ ಸಂಭವಿಸಿದ್ದು ಯಾದವಾಡದ ಇಬ್ಬರು ಮೃತಪಟ್ಟಿದ್ದಾರೆ.
ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಬಸ್ಸು ಸಂಪೂರ್ಣ ಸುಟ್ಟು ಹೋಗಿದ್ದು ಇಬ್ಬರನ್ನು ಬಲಿಪಡೆದಿದೆ.