spot_img
spot_img

ವಿಶ್ವದ ವಾಸ್ತುಶಿಲ್ಪಿ ವಿಶ್ವಕರ್ಮ: ಇಂದು ವಿಶ್ವಕರ್ಮ ಜಯಂತಿ ನಿಮಿತ್ತ ಈ ಲೇಖನ

Must Read

spot_img
- Advertisement -

ಸೃಷ್ಟಿಕರ್ತ ಬ್ರಹ್ಮನಾದರೆ ಅವನ ವಂಶಸ್ಥನಾದ ವಿಶ್ವಕರ್ಮನು ಇಡಿ ಸೃಷ್ಟಿಯ ಕರಡು ಪ್ರತಿಯ ಪಿತಾಮಹ. ವಿಶ್ವಕರ್ಮ ಎಂದರೆ…. ಸ್ವರ್ಗದ ಶಿಲ್ಪಿ. ವಿಶ್ವಕರ್ಮರು ಇಡಿ ವಿಶ್ವದ ವಾಸ್ತುಶಿಲ್ಪಿ ಸಕಲ ಕಲೆಗಳನ್ನು ಕರಗತಮಾಡಿಕೊಂಡ ಕಲಾದೇವತೆಯೇ ವಿಶ್ವಕರ್ಮ.

ಇವರ ತಂದೆ ತ್ವಷ್ಟ ಉಪನಯನವಾದಬಳಿಕ ಗುರುಕುಲದಲ್ಲಿ ವಾಸಮಾಡುವಾಗ ಒಮ್ಮೆ ಗುರುಗಳು ಇವರನ್ನು ಕುರಿತು ಎಂದೆಂದಿಗೂ ಹಳೆಯದಾಗದ ಜೀರ್ಣವಾಗದ ಒಂದು ಮನೆಯನ್ನು ನಿರ್ಮಿಸು ಎಂದರು. ಗುರುಗಳ ಪತ್ನಿ ಎಂದೆಂದಿಗೂ ಮಾಸದೆ ಬೆಳಗುವ ನಾರುಮಡಿಯ ಕುಪ್ಪಸವನ್ನು ಹೊಲಿಗೆ ಇಲ್ಲದೆ ಲೋಕವೆಲ್ಲ ಮೆಚ್ಚುವಂತೆ ಮಾಡಿಕೊಡೆಂದಳು, ಗುರುಗಳ ಪುತ್ರನು ಚರ್ಮ ಸಂಪರ್ಕವಿಲ್ಲದ ನೀರು, ಬೆಂಕಿಗಳು ಸರಿಹೋಗುವ ಓಡುವಾಗಲೂ, ನಡೆಯುವಾಗಲೂ ಸುಖಕರವಾದ ಭೂಮಿ, ಆಕಾಶಗಳಲ್ಲಿ ಸಮಾನವಾಗಿರುವ ಹರಿಯದ ಪಾದುಕೆಗಳನ್ನು ಮಾಡಿಕೊಡಬೇಕೆಂದು ಹೇಳಿದ. ಗುರು ಪುತ್ರಿ ಎಲೆ ತ್ವಾಷ್ಟ ! ನನ್ನ ಕಿವಿಗಳಿಗೆ ಒಪ್ಪುವ, ಮಿನುಗುವ ಚಿನ್ನದ ಓಲೆಗಳನ್ನು ಆನೆಯದಂತದಿಂದ ತಯಾರಿಸಿದ ಮನೋಹರವಾದ ಆಟದ ಸಾಮಾನುಗಳನ್ನೆಲ್ಲಾ ನಿನ್ನ ಬುದ್ದಿ ಚಾತುರ್ಯದಿಂದ ಮಾಡಿಕೊಡು, ಎಂದೆಂದಿಗೂ ಒಡೆಯದ, ಮುರಿಯದ, ಸವೆಯದ, ಒರಳು ಒನಕೆ ಮುಂತಾದ ಮನೆಗೆ ಬೇಕಾಗುವ ಸಕಲ ಸಾಮಗ್ರಿಗಳನ್ನೆಲ್ಲಾ ಮಾಡಿಕೊಡು. ಮನೆಯ ಪಾತ್ರೆಗಳು, ಆಸನಗಳು, ತೊಳೆಯದಿದ್ದರೂ ಯಾವಾಗಲೂ ಮಿನುಗುತ್ತಿರಬೇಕು. ಅಡುಗೆ ಕೆಲಸವನ್ನೆಲ್ಲಾ ಚೆನ್ನಾಗಿ ಹೇಳಿಕೊಡು ನನ್ನ ಕೈಗೆ ಬಿಸಿ ತಟ್ಟಬಾರದು. ಅಡುಗೆ ರುಚಿಕರವಾಗಿರಬೇಕು. ಒಂದೇ ಮರದ ಮುಟ್ಟುಗಳಿಂದ ಅಂದವಾಗಿ, ಅನೂಕುಲವಾಗಿ ಅಣಿಮಾಡಿದಂತಿರುವ ಒಂದೇ ಕಂಬದ ಒಂದು ಮನೆಯನ್ನು ನಿರ್ಮಿಸು ನಾನು ಬೇಕಾದೆಡೆಗೆ ಅದನ್ನು ಹೊತ್ತೊಯುವಂತಿರಬೇಕು. ನಿನಗಿಂತಲೂ ಹಿರಿಯರಾಗಿರುವ ನಿನ್ನ ಸಹಾದ್ಯಾಯಿಗಳು ಲೋಕವು ಮೆಚ್ಚುವಂತಿರಬೇಕು.ಆ ಮನೆಯಲ್ಲಿ ಯಾರೇನು ಕೇಳಿದರೂ ದೊರೆಯುವಂತಿರಬೇಕು ಎಂದಳು.

ತ್ವಾಷ್ಟ ಎಲ್ಲದಕ್ಕೂ ಸರಿ ಎಂದು ಅಡವಿಗೆ ಹೋಗಿ ದಿಕ್ಕು ತೊಚದೆ ಚಿಂತಾಕ್ರಾಂತನಾಗಿರುವಲ್ಲಿ ಒಬ್ಬ ಮುದಿ ತಾಪಸ ಕಾಣಿಸಿದ. ತ್ವಾಷ್ಟ ಎಲ್ಲವನ್ನು ಆತನಿಗೆ ಅರುಹಿದ. ಆ ತಪಸ್ವಿಯ ಸೂಚನೆಯಂತೆ ಕಾಶಿ ಕ್ಷೇತ್ರವನ್ನು ಸೇರಿ ಮೂರು ವರ್ಷ ತಪಸ್ಸು ಮಾಡಿ ತನ್ನ ಎದುರಿನಲ್ಲಿ ನಿಂತ ಶಿವನಲ್ಲಿ ಮೊರೆಯಿಟ್ಟ.

- Advertisement -

ಕರುಣಾಮಯನಾದ ಶಿವ ಎಲ್ಲವನ್ನೂ ಅನುಗ್ರಹಿಸಿದ ಬಳಿಕ ತ್ವಾಷ್ಟನನ್ನು ಕುರಿತು, ನಿನ್ನ ತಪಸ್ಸಿಗೆ ಮೆಚ್ಚಿ ಇನ್ನೂ ಅನೇಕ ವರಗಳನ್ನು ಕೊಡುತ್ತೇನೆ. ಕೇಳು. ಚಿನ್ನ, ಬೆಳ್ಳಿ, ಮೊದಲಾದ ಧಾತುಗಳ, ರತ್ನಗಳ, ಪುಷ್ಪವಸ್ತ್ರ, ಕರ್ಪೂರಾದಿ ಸುಗಂಧ ದ್ರವ್ಯಗಳ, ಕಂದ ಮೂಲ ಫಲಗಳಂತಹ ದಂತದ ಚರ್ಮದ ಅಷ್ಟೆ ಏಕೆ? ಜನಗಳ ಕೋರಿಕೆಯಂತೆ ಅವರಿಗೆ ಮೆಚ್ಚುಗೆಯಾಗುವಂಥ ಮನೆ, ಮಠ, ದೇವಾಲಯ, ವಸ್ತ್ರ ಭೂಷಣಾಲಂಕಾರಾದಿಗಳನ್ನು ಮಾಡುವ ಚಾತುರ್ಯವನ್ನು, ಭಕ್ಷ ಪೂಜ್ಯಾದಿರಚನಾ ನಿಪುಣತೆಯನ್ನು ಶಿಲ್ಪ, ಚಿತ್ರಕಲಾ ಪ್ರವೀಣತೆಯನ್ನು, ವೃತ್ತ ಗೀತಾ ವಾದ್ಯ ರಹಸ್ಯಗಳನ್ನು ಅರಿತು ಸರ್ವಜ್ಞನೆನಿಸಿ ಎರಡನೆಯ ಚತುರ್ಮುಖನಾಗುವೆ.

ಜಲಭೂಮ್ಯಾಂತರಿಕ್ಷಗಳಲ್ಲಿ ಸಂಚರಿಸಿ ಯೋಗ್ಯವಾದ ವಾಹನಗಳಲ್ಲಿ ನಿನ್ನ ಪ್ರಜ್ಞೆ ಲೋಕೋತ್ತರವಾಗಿರಲಿ. ಸಕಲ ಕಲೆಗಳು ಇಂದ್ರಜಾಲಾದಿ ವಿದ್ಯೆಗಳು ಅತ್ಯದ್ಭುತವಾಗಿರಲಿ. ಸಕಲರ ಮನೋಭಿಪ್ರಾಯಕ್ಕೆ ತಕ್ಕಂತೆ ನಿರ್ಮಾಣ ಚಾತುರ್ಯವು ನಿನಗೆ ಲಭಿಸುವುದು. ವಿಶ್ವದ ವಿಶ್ವಕರ್ಮ ನೆಂಬ ಹೆಸರು ರೂಢಿಯಲ್ಲಿರಲಿ ಎಂದು ಅನುಗ್ರಹಿಸಿ ಕಣ್ಮರೆಯಾದನು.

ವಿಶ್ವಕರ್ಮರಿಗೆ ಐದು ಮಕ್ಕಳು ಒಂದೊಂದು ವೃತ್ತಿಯನ್ನು ಆಯ್ದುಕೊಂಡು ಜೀವನ ನಡೆಸುತ್ತಿದ್ದರು. ಆ ಪಂಚಕರ್ಮರು ಯಾರೆಂದರೆ ಮನು-ಕಮ್ಮಾರ, ಮಾಯಾ-ಬಡಿಗ, ತ್ವಸ್ತರ-ಕಂಚಗಾರ, ಶಿಲ್ಪಿ-ಶಿಲ್ಪಿಕಾರ, ವಿಶ್ವಜ್ಞ – ಅಕ್ಕಸಾಲಿಗ, ಪತ್ತಾರ ಪಂಚಕರ್ಮರನ್ನು ಪಂಚ್ಯಾಳರು ಎಂದು ಇವರನ್ನು ವಿಶ್ವಕರ್ಮರೆಂದು ಕರೆಯಲಾಯಿತು ಹಾಗೂ ವಿಶ್ವ ಬ್ರಾಹ್ಮಣರೆಂದು ಕರೆಯಲಾಯಿತು.

- Advertisement -

ಇಂದು ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದ ಸ್ಥಳಗಳು ಸೇರಿದಂತೆ ಭಾರತದ ಅಜಂತಾ, ಎಲ್ಲೋರಾ, ಖಜುರಾಹೋ, ಲಂಕಾ, ದ್ವಾರಕಾ, ನಳಂದಾ, ದೆಹಲಿಯ ಕುತಬ್ ಮಿನಾರ್, ಕೋನಾರ್ಕ್ ನ ಸೂರ್ಯದೇವಾಲಯ, ಕರ್ನಾಟಕದ ಐಹೊಳೆ, ಹಂಪಿ, ಬದಾಮಿ, ಪಟ್ಟದಕಲ್ಲುಗಳಲ್ಲಿರುವ ಪ್ರವಾಸಿ ತಾಣಗಳು ವಿಶ್ವಕರ್ಮರ ಕೊಡುಗೆಗಳಾಗಿವೆ.

ಇಂದು ಪ್ರತಿ ಗ್ರಾಮದ ಪ್ರತಿಯೊಂದು ಕಾರ್ಯಕ್ಕೂ ವಿಶ್ವಕರ್ಮರ ಅಗತ್ಯವಿದೆ. “ಆಡು ಮುಟ್ಟದ ಸೊಪ್ಪಿಲ್ಲ” ವಿಶ್ವಕರ್ಮರು ಆವರಿಸದ ಕ್ಷೇತ್ರವಿಲ್ಲ. ಅವರ ಪಾತ್ರವಿಲ್ಲದ ಕ್ಷೇತ್ರಗಳಿಲ್ಲ, ಜಾತ್ರೆಗಳಿಲ್ಲ, ಮದುವೆಗೂ, ಮಸಣಕ್ಕೂ ಅವರ ಅಗತ್ಯತೆ ಇದ್ದೇ ಇದೆ.

ಶ್ರೀ ಎಂ.ವೈ. ಮೆಣಸಿನಕಾಯಿ
ಇಂದಿರಾ ಕಾಲೋನಿ, ಬೆಳಗಾವಿ.
ಮೊ: 9449209570

- Advertisement -
- Advertisement -

Latest News

ರಾಜ್ಯದ ರಸ್ತೆ ಕಾಮಗಾರಿಗಳು ಸೆ.2024 ರೊಳಗೆ ಪೂರ್ಣ ; ಮೇಲ್ಮನೆಗೆ ಗಡಕರಿ ಉತ್ತರ

ಮೂಡಲಗಿ: ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ ಯೋಜನೆಯಡಿ ಕರ್ನಾಟಕ ರಾಜ್ಯದಲ್ಲಿ 663 ಕೋಟಿ ರೂ.ಗಳ ವೆಚ್ಚದಲ್ಲಿ ಸುಮಾರು 241 ಕಿ.ಮೀ ಉದ್ದದ 36 ರಾಜ್ಯ...
- Advertisement -

More Articles Like This

- Advertisement -
close
error: Content is protected !!
Join WhatsApp Group