ವಿಶ್ವ ಚೇತನ (ಶ್ರೀ ಸಿದ್ದಗಂಗಾ ಶ್ರೀ ಗಳು)

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

1

ಶ್ರೀ ಸಿದ್ದಗಂಗಾ ಕ್ಷೇತ್ರದಗುರು

ಚರಣಕೆ ಶರಣು ಸಾವಿರದ ಶರಣು
ಶಿವನ ರೂಪದಿ ಶಿವಣ್ಣನಾಗಿ
ಧರೆಗವತರಿಸಿ ಬಂದ ಶರಣರಿಗೆ ಸಾವಿರದಶರಣು !!

2

ಸಂಸಾರದ ಜಂಜಡದ ಬೇಲಿಯ ತೊರೆದು
ಖಾವಿಬಟ್ಟೆಯ ನಿಜ ತೃಷೆಯ ಹಂಬಲಕೆ
ವಾಲಿತು ನಿಮ್ಮ ಮನ ಮನದೊಳಗೆ ಮೂಡಿದವು ಕ್ರಾಂತಿಕಾರಕ ಬಸವತತ್ವದ ಆದರ್ಶ
ಬೆಳಸಿದ ಶರಣರಿಗೆ ಸಾವಿರದ ಶರಣ. !!

3

- Advertisement -

ನನಗೇನು ಬೇಡ ವಿಶ್ವಕೇನೆ ಬೇಕೆನ್ನುವ
ಕಾಯಕ ನಿಷ್ಟೆಯ ಬೀಜಾಂಕುರದ ಬಾಳಬುತ್ತಿಯ
ಧಾರೆಯೆರೆದರು ತನ್ನ ತಾ ಮರೆತು ಬಾಳಿ ಬದುಕಿದ
ನಿಷ್ಕಾಮಿ ಶರಣರಿಗೆ ಸಾವಿರದ ಶರಣು !!

4

ಕಾಯಕಯೋಗಿ , ತ್ರಿವಿಧ ದಾಸೋಹಿ,
ದಾನಚಿಂತಾಮಣಿ, ಅಕ್ಷರಬ್ರಹ್ಮ,
ಅನ್ನದಾಸೋಹಿ, ವಿಧ್ಯಾಗುರುಶೇಷ್ಠ ,
ನಡೆದಾಡುವ ದೇವರಿಗೆ ಶರಣು ಸಾವಿರದ ಶರಣು !!

5

ಮಹಾನ್ ಜಂಗಮಯೋಗಿ,
“”ವಿಶ್ವ ಚೇತನ”” , ಮಕ್ಕಳ ಪ್ರೇಮಿ ,
ಶತಾಯುಷಿ ,ಅಧ್ಯಾತ್ಮ ಚಿಂತಕ ,
ಜ್ಞಾನ ಮೂರುತಿಗೆ ಸಾವಿರದ ಶರಣು !!

6

ಸಿದ್ದಿಪುರುಷ ,ಅಕ್ಷರದಾಸೋಹಿ ,
“” ವಿಶ್ವರತ್ನ “” ಜಂಗಮಪುಂಜ,
ನಿತ್ಯಕಾಯಕಯೋಗಿ,ತ್ಯಾಗಮಹಿ, ಧರ್ಮಜಾಗ್ರತೆಯ
ಸಂಗಮ ಶರಣರಿಗೆ ಸಾವಿರದ ಶರಣು !!

7

ತ್ರಿಕಾಲ ಪೂಜಾನಿಷ್ಟರು, ನಿತ್ಯದಾಸೋಹಿ,
ಅನಾಥ ಮಕ್ಕಳ, ವಾತ್ಸಲ್ಯಮಹಿ ,
ಜಂಗಮ ಕುಲಕೆ ದಾರಿದೀಪವಾಗಿಹ
ಶರಣಪಾದಕೆ ಸಾವಿರದ ಶರಣು !!

8

ಶ್ರೀ ಸಿದ್ದಗಂಗ ಕ್ಷೇತ್ರದಲ್ಲಿ ಶಿವನ
ಅವತಾರವೆತ್ತಿ ,ತಫಃ ಸಾಧಕಯೋಗಿ
ಯಾಗಿ ಜ್ಞಾನ ಮಾರ್ಗ ತೋರಿದ
ಸಿದ್ದಿ ಶರಣರಿಗೆ ಸಾವಿರದ ಶರಣು !!

9

ಈ ನಭೋಮಂಡಲಕೆ ಉಸಿರಿನೊಂದಿಗೆ
ಜನಿಸಿ ಧರ್ಮಸೇವೆಯ ಮಾರ್ಗ ತೋರಿ
ಅನಂತತೆಯಡೆಗೆ ” ಹೆಸರಿನೊಂದಿಗೆ ” ಹೆಜ್ಜೆಹಾಕಿದ
ಗುರುಸಂತ ಮಹಾಮುನಿಗೆ ಸಾವಿರದ ಶರಣು !!

ಹಾಚಿ ಇಟ್ಟಿಗಿ ಸಮರ್ಥ ಕನ್ನಡಿಗ ರಾಷ್ಟ್ರಪುರಸ್ಕೃತರು ಹೂವಿನ ಬಳ್ಳಾರಿ
9844312559

- Advertisement -
- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!