ವಿಶ್ವ ಹಿಂದು ಪರಿಷತ್ ಷಷ್ಠ್ಯಬ್ದಿ ಕಾರ್ಯಕ್ರಮ
ಮೂಡಲಗಿ: ‘ವಿಶ್ವ ಹಿಂದು ಪರಿಷತ್ ಯಾವುದೇ ಧರ್ಮ, ಸಮಾಜವನ್ನು ವಿರೋಧಿಸುವುದಿಲ್ಲ ಹಿಂದು ಧರ್ಮ ಸಂಘಟಿಸುವುದು, ಸಂರಕ್ಷಣೆ ಮಾಡುವುದೇ ಅದರ ಮುಖ್ಯ ಉದ್ಧೇಶವಾಗಿದೆ’ ಎಂದು ವಿಶ್ವ ಹಿಂದು ಪರಿಷತ್ ಬೆಳಗಾವಿ ವಿಭಾಗದ ಸಹಮಂತ್ರಿ ವಿಠಲ ಮಾಳಿ ಹೇಳಿದರು.
ಇಲ್ಲಿಯ ಮಡ್ಡಿ ವೀರಭದ್ರೇಶ್ವರ ದೇವಸ್ಥಾನದ ಸಭಾಭವನದಲ್ಲಿ ವಿಶ್ವ ಹಿಂದು ಪರಿಷತ್ ಮೂಡಲಗಿ ಪ್ರಖಂಡದಿಂದ ಆಯೋಜಿಸಿದ ವಿಶ್ವ ಹಿಂದು ಪರಿಷತ್‌ನ ಷಷ್ಠ್ಯಬ್ಧಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪರಿಷತ್ತು ದೇಶದಲ್ಲಿ ಸಾಮರಸ್ಯ, ಸಂಸ್ಕೃತಿ, ಶಿಷ್ಟಾಚಾರ, ಪರಿಸರ ರಕ್ಷಣೆ ಹಾಗೂ ಸ್ವದೇಶೀಯತೆಯನ್ನು ಬೆಳೆಸುತ್ತಲಿದೆ ಎಂದರು.
ವಿಶ್ವ ಹಿಂದು ಪರಿಷತ್‌ನ ಪ್ರಾಂತ ಸತ್ಸಂಗ ಪ್ರಮುಖ ದೇಶಪಾಂಡೆ ಮತ್ತು ಪ್ರಾಂತ ಸತ್ಸಂಗ ಪ್ರಮುಖ ನಾರಾಯಣ ಅವರು ಮಾತನಾಡಿ ವಿಶ್ವ ಹಿಂದು ಪರಿಷತ್‌ವು ೧೯೬೪ರಲ್ಲಿ ಸ್ಥಾಪನೆಯಾಗಿ ೬೦ ವಸಂತಗಳನ್ನು ಕಳೆದಿದೆ. ಹಿಂದೂಗಳು ಜಗತ್ತಿನ ೪೦ಕ್ಕೂ ಅಧಿಕ ದೇಶಗಳಲ್ಲಿ ನೆಲೆಸಿದ್ದು, ವಿಶ್ವ ಮಟ್ಟದಲ್ಲಿ ಹಿಂದೂ ಸಮಾಜಕ್ಕೆ ಕಟಿಬದ್ಧರಾಗಿರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಡಾ. ಆರ್.ಕೆ. ಬಾಗಿ ಮಾತನಾಡಿದರು.
ನಾಗರಾಳದ ಅನಂತಾನಂದ ಶರಣರು ಮಾತನಾಡಿ ಜಗತ್ತಿಗೆ ನಾಗರೀಕತೆಯನ್ನು ಸಂಸ್ಕೃತಿಯನ್ನು ಕಲಿಸಿಕೊಟ್ಟ ದೇಶ ಭಾರತವಾಗಿದ್ದು, ಜಗತ್ತಿನ ಗುರು ಸ್ಥಾನವನ್ನು ಹೊಂದಿರುವುದು. ಭಾರತದಲ್ಲಿರುವ ಪ್ರತಿಯೊಬ್ಬರು ಹಿಂದುತ್ವದ ಬಗ್ಗೆ ದೇಶದ ಸಂಸ್ಕೃತಿಯನ್ನು ಪ್ರೀತಿಸುವಂತಾಗಬೇಕು ಎಂದರು.
ವಿಶ್ವ ಹಿಂದು ಪರಿಷತ್ ಚಿಕ್ಕೋಡಿ ಜಿಲ್ಲಾ ಸಹ ಕಾರ್ಯದರ್ಶಿ ದಯಾನಂದ ಸವದಿ ಪ್ರಾಸ್ತಾವಿಕ ಮಾತನಾಡಿದರು. ಅತಿಥಿಗಳಾಗಿ ಬಸವರಾಜ ಪಾಟೀಲ, ಪುರಸಭೆ ಸದಸ್ಯ ಈರಣ್ಣ ಕೊಣ್ಣೂರ, ವಕೀಲ ಬಲದೇವ ಸಣ್ಣಕ್ಕಿ, ಪ್ರಕಾಶ ಮಾದರ, ಡಾ. ಬಿ ಎಮ್ ಪಾಲಭಾವಿ, ಬಸವರಾಜ ಪಾಟೀಲ, ಈರಪ್ಪ ಬನ್ನೂರ, ಶಿವಬಸು ಹಂದಿಗುಂದ, ರವೀಂದ್ರ ದಂತಿ, ಮಾಲತಿ ಆಶ್ರೀತ, ಮೂಡಲಗಿ ಪ್ರಖಂಡ ಅಧ್ಯಕ್ಷ ಶಿವಶಂಕರ ಖಾನಾಪುರ, ಸಿದ್ದಪ್ಪ ತಿಗಡಿ, ಶ್ರೀಧರ ಬಡಿಗೇರ, ಮಾಳಪ್ಪ ಮೆಳವಂಕಿ, ಬಸಯ್ಯ ಹಿರೇಮಠ, ದುಂಡಪ್ಪ ಹಳ್ಳೂರ ಇದ್ದರು. ಮಹಾಂತೇಶ ಕುಡಚಿ ನಿರೂಪಿಸಿದರು.