spot_img
spot_img

ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

Must Read

spot_img

ಸಿಂದಗಿ: ಪಟ್ಟಣದ ಭೀಮಾಶಂಕರ ಮಠದಲ್ಲಿ ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಮಾಡಲಾಯಿತು.

ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ್ದ ಕೊಗಟನೂರ ಪೂಜ್ಯಶ್ರೀ ಮಡಿವಾಳೇಶ್ವರರು ಮಾತನಾಡಿ, ಶ್ರೀಕೃಷ್ಣ್ಣನ ಬಾಲ ಜೀವನದ ತುಂಟಾಟ ಕುರಿತು ತಿಳಿಸುತ್ತ ಹಿಂದೂ ಧರ್ಮದ ಬಗ್ಗೆ ಒಲವು ಹೊಂದಿರಬೇಕು. ಧರ್ಮವನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಎಂದರು.

ಮಾಡಬಾಳ ಪೂಜ್ಯಶ್ರೀ ಸಂಗಮನಾಥ  ಸ್ವಾಮಿಗಳು ಉಪಸ್ಥಿತರಿದ್ದರು.  ವಿಶ್ವ ಹಿಂದೂ ಪರಿಷತದ ಕಾರ್ಯದರ್ಶಿಗಳಾದ ಶ್ರೀಯುತ ಶೇಖರ್ ಗೌಡ ಹರನಾಳ ಅವರು ವಿಶ್ವ ಹಿಂದೂ ಪರಿಷತದ ಸ್ಥಾಪನೆ ಅದರ ಹಿನ್ನೆಲೆ ಹಾಗೂ ಆಯಾಮಗಳ ಹಾಗೂ ಶ್ರೀಕೃಷ್ಣನ ಬಾಲ ಲೀಲೆಗಳ ಬಗ್ಗೆ ಉಲ್ಲೇಖಿಸಿದರು.

ವಿಶ್ವ ಹಿಂದೂ ಪರಿಷತದ ತಾಲೂಕು ಅಧ್ಯಕ್ಷ ಶರಣ ಗೌಡ ಬಿರಾದಾರ ಮತ್ತು ದುರ್ಗಾ ವಾಹಿನಿ ಪ್ರಮುಖರಾದ ಬೋರಮ್ಮ ಕರ್ಪೂರಮಠ. ನಿಖಿಲ್ ಬಿರಾದಾರ್ ಬಸು ಬನ್ನಟ್ಟಿ. ಜಗ್ಗು ಸೋಂಪುರ್.ಬೀರು ಪೂಜಾರಿ.ಹುಲಿಗೆಪ್ಪ ಕೋಟನೂರ್ ರಾಯಪ್ಪ ಬಡಿಗೇರ್. ಸಿದ್ದನಗೌಡ ಅಂಬಳನೂರ ರಮೇಶ್ ಪುರದಾಳ. ಶ್ರೀಮತಿ ಅರುಣಾ ಹಿರೇಮಠ್ ಚಿದಾನಂದ ದೇಸಾಯಿ. ಅವಿನಾಶ್ ನೆಲೋಗಿ ಇನ್ನೂ ಅನೇಕ ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ದರು.

ಸತ್ಸಂಗ ಪ್ರಮುಖ ಬಸವರಾಜ ಬಿರಾದಾರ್ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!