spot_img
spot_img

ಶರಣರ ದೃಷ್ಟಿಯಲ್ಲಿ ಪಾದೋದಕ ಹಾಗೂ ಪ್ರಸಾದ

Must Read

- Advertisement -

ಪಾದೋದಕ

ಪಾದ ಅಂದ್ರೆ ಅರಿವು ಜ್ಞಾನ . ಅಷ್ಟಾವರಣಗಳು ಅವು ಬಾಹ್ಯ ವ್ಯಕ್ತಿ ಶಬ್ದ ಅಥವಾ ವಸ್ತುಗಳಲ್ಲ .ಅವು ವ್ಯಕ್ತಿಯಲ್ಲಿ ಕಂಡುಕೊಳ್ಳಬೇಕಾದ ಸ್ಥಿತಿಗಳು. ಆಧ್ಯಾತ್ಮಿಕ ಯಾತ್ರೆಯಲ್ಲಿ ಅಷ್ಟಾವರಣಗಳು ಅತ್ಯಂತ ಮಹತ್ತರ ಪಾತ್ರ ವಹಿಸಿವೆ . ಇವೆಲ್ಲವೂ ಶರಣ ತಾನಾಗುವ ಮಾರ್ಗ ಕಂಡುಕೊಳ್ಳಬೇಕು .
ಪಾದೋದಕ ಅಂದ್ರೆ -ಮನುಷ್ಯನ ಸೂಕ್ಷ್ಮ ಮನಸಿನ ಪಿನೆಯಲ್ ಗ್ರಂಥಿ ಇದನ್ನು ಲಿಂಗ ಗ್ರಂಥಿಯೆಂದಲೂ ಕರೆಯುತ್ತಾರೆ . ಕಾರಣ ಪಿನೇಅಲ್ ಗ್ರಂಥಿ ( PINEAL GLAND)ಇದು ಲಿಂಗಾಕಾರದ ರೂಪವನ್ನು ಹೊಂದಿದೆ .ವೈದ್ಯಕೀಯವಾಗಿ ನಾವು ಇದರ ಚಿತ್ರಣ ಕಾಣಬಹುದು .

ಇಷ್ಟ ಲಿಂಗ ಪೂಜೆಯಲ್ಲಿ ತೊಡಗಿ ತನು ಲಿಂಗ ಏಕಭಾವವಾಗಿ ಐಕ್ಯ ಹೊಂದುವ ಮಹಾ ಮಾರ್ಗದ ಹಂತದಲ್ಲಿ ಮೆದುಳಿನಿಂದ ಊರ್ಧ್ವ ಮುಖವಾಗಿ ಹರಿಯುವ ಶ್ರವಿಸುವ ಜಲವೇ ಪಾದೋದಕ .ಈ ಪಾದೊದಕವು ಅರಿವಿನ ಗುರುವಿದ್ದಲ್ಲಿ ಜ್ಞಾನಾರ್ಜನೆಯಲ್ಲಿ ಕರುಣಾ ರಸವಾಗಿರಬೇಕು .ಲಿಂಗವಿದ್ದಲ್ಲಿ ಸಮತಾ ರಸವಾಗಿರಬೇಕು. ಜಂಗಮ ಅಂದರೆ ಸಮುದಾಯವಿದ್ದಲ್ಲಿ ವಿನಯ ರಸವಾಗಿರಬೇಕು. ಶರಣ ಧರ್ಮದಲ್ಲಿ ವ್ಯಕ್ತಿಯ ಆತ್ಮೊದ್ಧಾರದ ಜೊತೆಗೆ ಸಮಾಜದ ಒಳಿತನ್ನು ಕಾಣುವ ವ್ಯಕ್ತಿ ಸಮಷ್ಟಿಯ ಸಂಬಂಧವಾಗಿರಬೇಕು. ಪಾದೋದಕ ಅಂದರೆ ವ್ಯಕ್ತಿಯ ಕಾಲುಗಳನ್ನು ತೊಳೆಯುವ ಅನಿಷ್ಠವಲ್ಲ. ಈ ಜಾಲದಲ್ಲಿ ಮೆಲಟೊನಿನ ಎಂಬ ರಾಸಾಯನಿಕ ಪದಾರ್ಥವಿದ್ದು ಅದು ಚೈತನ್ಯವನ್ನು ಉತ್ಪತ್ತಿ ಮಾಡುತ್ತದೆ.ಶಕ್ತಿ ಸಂಚಯನಗೊಳ್ಳುತ್ತದೆ.

- Advertisement -

ಪ್ರಸಾದ

ಪ್ರಸಾದ ಆಹಾರವಲ್ಲ ಪ್ರಸಾದ ವಸ್ತುವಲ್ಲ . ಪ್ರಸಾದ ಊಟ ಕೂಳು ಸಕ್ಕರಿ ಕಲ್ಲು ಸಕ್ಕರಿ ತುಳಸಿ ಎಲೆ ಕೊಬ್ಬರಿ ಚುರುಮುರಿ ಅಲ್ಲ. ಪ್ರಸಾದ ಈ ಪದವೇ ಕೇಳಲು ಅನಂದ
ಪ್ರಸನ್ನತೆಯೆ ಪ್ರಸಾದ .ಶುದ್ಧ ಚಿತ್ತವಾಗಿ ಇರುವಾಗ ಗೋಚರಿಸುವ ವಿಚಾರವೇ ಪ್ರಸಾದ ಅದೊಂದು ಅದ್ಭುತ ಅನುಭವ . ಆನಂದದ ತುಟ್ಟ ತುದಿ ತಲುಪುವುದೆ ಪ್ರಸಾದ
ಲಿಂಗಾಂಗ ಸಾಮರಸ್ಯದ ಸ್ಥಿತಿ ಹಾಗೂ ಈ ಸ್ಥಿತಿ ಮಟ್ಟವನ್ನು  ಪಡೆದ ಜಂಗಮ ಸದ್ಬಕ್ತನ ಆನಂದಾನುಭವವೇ ಪ್ರಸಾದ

ಇಲ್ಲಿ ಆತ್ಮ ಮತ್ತು ಪರಮಾತ್ಮನನ್ನು ಸಮರಸಗೊಳಿಸಿ ಆ ಆನಂದ ಪ್ರಸಾದವನ್ನು ಅನುಭವಿಸುವ ಅನುಭಾವದ ಅರಿವಿನ ಅಡುಗೆ .
ಪರಮ ಜ್ಞಾನ ವೈಚಾರಿಕ ಪ್ರಜ್ಞೆ ಅರಿವಿನ ಹೊಳಹು ಪ್ರಸಾದ
ಪ್ರಸಾದವೇ ಜಂಗಮ -ಜಂಗಮ ಮುಖಿಯಾಗಿ ವ್ಯಕ್ತಿಯ ವಿಚಾರವೆಂಬ ಪ್ರಸಾದ ಜನರಿಗೆ ಉಪಯುಕ್ತವಾದ ಮಾರ್ಗ ಸೂಚಿ
ಪ್ರಸನ್ನತೆಯ ಭಾವವೇ ಪ್ರಸಾದ
ಗುರುವಿಗೆ ಗುರುವಾಗಿ
ಗುರು ಪ್ರಸಾದವ ಕೊಂಬುದು
ಲಿಂಗಕ್ಕೆ ಲಿಂಗವಾಗಿ ಲಿಂಗ ಪ್ರಸಾದವ ಕೊಂಬುದು
ಜಂಗಮಕ್ಕೆ ಜಂಗಮವಾಗಿ ಜಂಗಮ ಪ್ರಸಾದವ ಕೊಂಬುದು
ಪ್ರಸಾದಕ್ಕೆ ಪ್ರಸಾದವಾಗಿ ಪ್ರಸಾದವಾಗಿ ಪ್ರಸಾದವನೇ ಕೊಂಬುದು
ಈ ಚತುರ್ವಿಧ ಸ್ಥಲಕ್ಕೆ ಚತುರ್ವಿಧವಾಗಬಲ್ಲಡೆ ಕೂಡಲ ಚೆನ್ನಸಂಗನಲ್ಲಿ ಲಿಂಗೈಕ್ಯವು
ತನ್ನ ಲಿಂಗಕ್ಕೆ ಬಾರದ ರುಚಿಯ
ಜಂಗಮಕ್ಕೆ ಸಲ್ಲಿಸಿ  ಕೈಯ ನೀಡಿ ಪ್ರಸಾದವನಿಕ್ಕೆಂಬಿರಿ
ಅದು ಪ್ರಸಾದವಲ್ಲ
ಸಿಂಗಿ ಕಾಳಕೂಟ ವಿಷವು ಕೇಳಿರಣ್ಣ
ಆ ಪ್ರಸಾದ ಪದವೆಂಬಿರಿ
ಆ ಪ್ರಸಾದ ಪದವೆಂಬಿರಿ
ಆ ಪ್ರಸಾದ ಕಿಲಿಪ್ಶವೆಂಬೆ ಕೂಡಲ ಚೆನ್ನ ಸಂಗಮದೇವಾ

- Advertisement -

ಬಹಳಷ್ಟು ಭಕ್ತರು ಎಂದು ಹೇಳಿಕೊಳ್ಳುವವರು ತಮಗೆ ಬೇಡವಾದ ಆಹಾರವನ್ನು ಪ್ರಸಾದ ವೆಂದು ಸಮಾಜದ ( ಜಂಗಮದ ) ಜನರಿಗೆ ನೀಡುತ್ತಾರೆ. ಮನೆಯಲ್ಲಿ ಹಳಸಿದ ಅನ್ನ ಕೊಳೆತ ಹಣ್ಣು ಜನರಿಗೆ ನೀಡುತ್ತಾರೆ. ಅದು ಪ್ರಸಾದವಾಗದು. ಅಂತಹ ಕೆಟ್ಟ ವಸ್ತು ಸಿಂಗಿ ಕಾಳವೆಂಬ ಹಾವಿನ ವಿಷವಿದ್ದಂತೆ .ಅಂತಹ ಹೊಲಸು ಪದಾರ್ಥವನ್ನು ಜನರಿಗೆ ನೀಡಿದರೆ ನಿಮ್ಮ ಜೀವನದಲ್ಲಿ ಕಲ್ಮಶವಾಗುವದರಲ್ಲಿ ಕಿಲುಬುವದರಲ್ಲಿ ಎರಡು ಮಾತಿಲ್ಲ.

ಮಾಡುವ ಮಾಡಿಸಿಕೊಂಬಾ ಉಭಯ ಒಂದೇ

ಗುರು ಒಂದೇ
ಲಿಂಗ ಒಂದೇ
ಪ್ರಸಾದ ಒಂದೇ
ಒಂದಾದಲ್ಲಿ ಎರಡಾಗಿ ಮಾಡುವಾ ಭಕ್ತನು ನೀನೇ
ಕೂಡಲ ಸಂಗಮದೇವ.

ಶರಣರು ಉಭಯ ಭಾವ ಹಾಗೂ ಶ್ರೇಣಿಕೃತ ವ್ಯವಸ್ಥೆಯನ್ನು ಸ್ತರಗಳನ್ನು ಸಂಪೂರ್ಣ ಅಲ್ಲಗಳೆದಿದ್ದಾರೆ. ಗುರು ಲಿಂಗ ಪ್ರಸಾದ ಒಂದೇ ಎನ್ನುವ ಭಾವವು ಪ್ರಸಾದ .
ಎರಡನ್ನು ಮಾಡುವ ಭವಿಯಾಗುತ್ತಾನೆ.
ಪ್ರಸಾದ ಅನುಭವಕ್ಕೆ ನಿಲುಕಿದ ಮೌಲ್ಯಗಳು ವಿಚಾರ ಚಿಂತನ ಮಂಥನದಿಂದ ನಡೆದ ಉತ್ಪತ್ತಿ.

ಜಗತ್ತಿನ ಎಲ್ಲಾ ಸಮಾಜವಾದಿಗಳು ಪದಾರ್ಥವಾದಿಗಳು (Materialistic)ಆದರೆ ಬಸವಣ್ಣ ಪ್ರಸಾದವಾದಿ .ನೀನೊಲಿದರೆ ಕೊರಡು ಕೊನರುವುದು
ನೀನೊಲಿದರೆ ಬರಡು ಹಯನವಹುದಯ್ಯಾ ಎಂದು ನಂಬಿದ ದಿಟ್ಟ ಮಾನವತಾವಾದಿ

ಡಾ .ಶಶಿಕಾಂತ ಪಟ್ಟಣ -ಪೂನಾ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ವೇದವ್ಯಾಸರ ಸ್ಮರಣಾರ್ಥ ಗುರು ಪೂರ್ಣಿಮಾ

ಗುರುಪೂರ್ಣಿಮಾ ವಿಶೇಷ ಅರಿವಿಗೆ ಅನಂತ ಶಯನನಾಗಿ ಜ್ಞಾನ ಜ್ಯೋತಿ ಬೆಳಗುತ್ತಿರುವ ಗುರಿತೋರುವ ನೇತಾರ ಬದುಕು ಭವಿಷ್ಯದ ಹಾದಿಯ ದಿಟ್ಟ ಹೆಜ್ಜೆಯಿಡಲು ಗುರಿ ತೋರುವ ದೈವದ ಗುರಿಕಾರ ಜ್ಞಾನದ ತೃಷೆಯನ್ನು ತಣಿಸಿದ ಬದುಕನ್ನು ಹದಗೊಳಿಸುವ ಗುರುಬಲದ ಶಿಲ್ಪಿಗಾರ ಸಕಲ ಜ್ಞಾನವಾಹಿನಿ ಜಾಗೃತಿ ಜಗಕೆ...
- Advertisement -

More Articles Like This

- Advertisement -
close
error: Content is protected !!
Join WhatsApp Group