ಶವಾಗಾರದ ಹಾದಿಯಲ್ಲಿ ಮಾನವೀಯ ಮೌಲ್ಯಗಳು

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

ಶಿಕ್ಷಣ ಎನ್ನುವುದು ಒಬ್ಬ ವ್ಯಕ್ತಿಯ ಮನಸ್ಸಿನಲ್ಲಿ ಅಕ್ಷರಗಳನ್ನು ತುಂಬುವುದಲ್ಲ.ಅಥವಾ ಇನ್ಯಾವುದೋ ಉನ್ನತ ಮಟ್ಟದ ಅಧಿಕಾರ ಇರುವ ಕೆಲಸ ಮಾಡಲು ಅವಕಾಶ ಮಾಡಿಕೊಡುವ ಸಂವಹನ ಮಾಧ್ಯಮವೂ ಅಲ್ಲ.ಅಧಿಕಾರ ಲಾಲಸೆಯಿಂದ ಇಡೀ ಜೀವನ ಹಣವೆಂಬ ಕಾಗದವನ್ನು ಗುಡ್ಡೆ ಹಾಕಲು ಮಾಡಿಕೊಂಡ ಒಂದು ಸಾಂಪ್ರದಾಯಿಕ ಒಳ ಒಪ್ಪಂದವಲ್ಲ. ಇದು ಇಂದಿನ ದಿನಗಳಲ್ಲಿ ಕೇವಲ ಒಂದು ಸೊಗಸಾಗಿ (Fashion) ಬದಲಾಗಿದೆ. ಶಿಕ್ಷಣ ಎನ್ನುವುದು, ಕೇವಲ ಈ ಮೇಲಿನ ಕೆಲಸಕ್ಕೆ ಮಾತ್ರ ಸೀಮಿತವಾಗಿದೆ. ಬದಲಿಗೆ ಶಿಕ್ಷಣಕ್ಕೆ ಮತ್ತೊಂದು ಮುಖವಿದೆ.

ಶಿಕ್ಷಣ ಮಾನವೀಯ ಮೌಲ್ಯಗಳನ್ನು ಬಿಂಬಿಸಬೇಕು. ಇಂದು ನಾವು ವಿದೇಶಿ ಸಂಸ್ಕ್ರತಿಯನ್ನು ಅನಾವರಣ ಮಾಡಿ,ನಮ್ಮ ನೆಲದ ಸಂಸ್ಕ್ರತಿಯನ್ನು ಒದ್ದು ಮುನ್ನಡೆಯುತ್ತಿದ್ದೇವೆ.ಕಾರಣ ಇಷ್ಟೇ ನಾವು ಬದಲಾಗುತ್ತಿದ್ದೇವೆ ಎಂದು. ಇಂದಿನ ದಿನಗಳಲ್ಲಿ ಶಿಕ್ಷಣ ಎನ್ನುವುದು ಕೇವಲ ವ್ಯಾಪಾರ ವಹಿವಾಟು ನಡೆಸುವ ಪ್ರಮುಖ ಶಕ್ತಿ ಉತ್ಪಾದನಾ ಘಟಕಗಳಾಗಿವೆ. ಇಲ್ಲಿ ನಾವೆಲ್ಲರೂ ಈ ಹಿಂದೆ ಗಳಿಸಿ ಗುಡ್ಡೆ ಹಾಕಿದ ಹಣವೆಂಬ ಕಾಗದವನ್ನು ಮರುಬಳಕೆ ಮಾಡಲು ಸಿದ್ದರಿದ್ದೇವೆ.ಅದಕ್ಕಾಗಿ ನಮ್ಮ ಮಕ್ಕಳು ಉನ್ನತ ಮಟ್ಟದ ಅಧಿಕಾರದ ಮೇಲೆ ಅವಲಂಬಿತರಾಗಿದ್ದಾರೆ. ಎಲ್ಲಿಯವರೆಗೆ ಇದು ಮುಂದುವರೆಯುತ್ತದೆಯೋ ಅಲ್ಲಿಯವರೆಗೆ.

ನಮ್ಮ ಇಂದಿನ ಶಿಕ್ಷಣ ಕೇವಲ ಅಂಕಗಳನ್ನು ಗಳಿಸಿ ದಾಖಲೆ ನಿರ್ಮಿಸಲು ಹೊರಟಿದೆಯೇ ವಿನಃ ಬೇರೆನೂ ಅಲ್ಲ. ನಮ್ಮ ಮಕ್ಕಳು ೯೯% ಅಂಕ ಗಳಿಸಿದರೆ ಮಾತ್ರ ನಮಗೆ ನಮ್ಮ ಸಮಾಜದಲ್ಲಿ ಉತ್ತಮ ಗೌರವ. ಇಲ್ಲದೇ ಹೋದರೆ ನಮ್ಮ ಗೌರವ ಮಣ್ಣು ಪಾಲಾಗುತ್ತದೆ.ಕೇವಲ ಸ್ವಪ್ರತಿಷ್ಟೆಗಾಗಿ ನಾವು ಏನೆಲ್ಲವನ್ನು ತ್ಯಾಗ ಮಾಡಲು ಹೊರಟಿರುವ ತ್ಯಾಗರಾಜರು ನಾವು. ಎಲ್ಲಿಯವರೆಗೆ ಎಂದರೆ ನಮ್ಮನ್ನು ನಾವು ಮಾರಿಕೊಳ್ಳುವ ಮಟ್ಟಿಗೆ ನಾವು ತ್ಯಾಗರಾಜರು.ಯಾವುದಕ್ಕಾಗಿ ಈ ತ್ಯಾಗ.
ಒಂದು ಕ್ಷಣ ಯೋಚಿಸಿ ಇಷ್ಟೆಲ್ಲ ತ್ಯಾಗ ಮಾಡಿದ ನಾವು ಇಳಿವಯಸ್ಸಿನಲ್ಲಿ ನಮ್ಮ ನೆಲೆ ಎಲ್ಲಿ ಎಂಬುದನ್ನು? ಆಗ ಗೋಚರಿಸಿದ್ದು ಯಾವುದೋ ಅನಾಥಾಶ್ರಮದ ಮಂಚದಲ್ಲಿ ನೆಲ ಕಚ್ಚಿ ಮಲಗಿ,ಯಾರೋ ದಾನಿಗಳು ನೀಡಿದ ಗಂಜಿಯನ್ನು ತಿನ್ನಲು, ಕಿಟಕಿಯಾಚೆಗಿನ ಕೈಗಳನ್ನು ನೋಡುತ್ತ ಕುಳಿತುಕೊಳ್ಳಲೋ? ನಮ್ಮ ಶಿಕ್ಷಣ. ಪಕ್ಕದಲ್ಲಿ ಮಲಗಿರುವ ಯಾರು ನನ್ನವರಲ್ಲ.ಆದರೂ ನನ್ನವರೇ! ಎತ್ತಿ ಆಡಿಸಿ,ಹೆಗಲ ಮೇಲೆ ಕುಳ್ಳಿರಿಸಿಕೊಂಡು, ನಾನು ನೋಡದ ಪ್ರಪಂಚವನ್ನು ,ನನ್ನೊಲುಮಿನ ಮಗನಿಗೆ ತೋರಿಸಿದ್ದೆನಲ್ಲ ಅವನೆಲ್ಲಿ?ಅಪ್ಪ ಅಮ್ಮ ಎಂದಾಗ ತಬ್ಬಿ ಮುದ್ದಾಡಿದ ಮಗಳೆಲ್ಲಿ? ಎಲ್ಲರೂ ಊತೀರ್ಥ! ರೆಕ್ಕೆ ಬಲಿತ ಹಕ್ಕಿ ಗೂಡು ಬಿಡುತ್ತದೆ. ಹೊಳೆ ದಾಟಿದ ಮೇಲೆ ಅಂಬಿಗನ ಹಂಗೇಕೆ? ಎನ್ನುವ ಜಾಯಮಾನ ನಮ್ಮದು.
ಇದಕ್ಕೆ ಅಲ್ಲವೇ? ಈ ವೈಕುಂಠಕ್ಕೆ ಅಲ್ಲವೇ? ಈ ರಾಜ ಮರ್ಯಾದೆಗೆ ಅಲ್ಲವೇ? ನಾವು ಕಲಿಸಿದ್ದು.ಸುತ್ತುತ್ತಿರುವ ಭೂಮಿಯಲ್ಲಿ ಸತ್ತು ಹೋಗುವವರು ನಾವು. ಒಂದಷ್ಟಾದರೂ ಮೌಲ್ಯಗಳು ಬೇಡವೇ? ಏಕೆ ಮೌಲ್ಯಗಳು ನಮ್ಮನ್ನು ಬದಲಿಸಲು ಸಾದ್ಯವಿಲ್ಲವೇ? ಸಾದ್ಯತೆ ಇತ್ತು. ನಾವು ನಮ್ಮ ಮಕ್ಕಳು ಉನ್ನತ ಮಟ್ಟದ ಅಧಿಕಾರ ವಹಿಸಿಕೊಳ್ಳುವ ಮೊದಲು ಮಾನವೀಯ ಮೌಲ್ಯಗಳನ್ನು ತುಂಬಿದ್ದರೆ,ಇಂದು ಈ ಗತಿ ಬರುತ್ತಿರಲಿಲ್ಲ. ನಾವು ನಮ್ಮ ಮಕ್ಕಳನ್ನು ಉನ್ನತ ಮಟ್ಟದಲ್ಲಿ ಇರಲೆಂದು ಕೇಳಿಕೊಂಡೆವು,ಹೊರತಾಗಿ ಸಾಮಾಜಿಕ ಪ್ರಜ್ಞೆಯನ್ನು ಬೆಳೆಸಲಿಲ್ಲ.ಅದಕ್ಕಾಗಿ ಇಂದು ಈ ಗತಿ ಬಂದೊರಗಿರುವುದು.

- Advertisement -

ಒಂದು ಕ್ಷಣ ಯೋಚಿಸಿ ಹಣವೆಂಬ ಮಾಯಾಂಗನೆಯ ಹಿಂದೆ ಹೋಗಿದ್ದುದರ ಫಲವಿದು.ಹಣ ಎಲ್ಲವನ್ನೂ ಒಳಗೊಂಡಿರುತ್ತದೆ.ಆದರೆ ಮಾನವೀಯ ಮೌಲ್ಯಗಳನ್ನು ಬಿಟ್ಟು.ಈ ಮೌಲ್ಯಗಳನ್ನು ಯಾವುದೋ ದಿನಸಿ ಅಂಗಡಿಯಲ್ಲಿ ಖರೀದಿಸಲು ಸಾದ್ಯವಿಲ್ಲ.ಈ ಮೌಲ್ಯಗಳನ್ನು ನಾವು ಅನುಭವಿಸಿ,ಮಕ್ಕಳಿಗೆ ಅನುಭವಿಸಲು ಕೊಡಬೇಕಿತ್ತು.ಒಂದು ಕಲ್ಲು ಹಲವಾರು ಉಳಿ ಪೆಟ್ಟುಗಳನ್ನು ತಿಂದಾಗಲೆ ಅದು ಅಗ್ರ ಪೂಜೆಗೆ ಅರ್ಹತೆಯನ್ನು ಪಡೆಯುವುದು. ಹಾಗೆ ನಮ್ಮ ಮಕ್ಕಳಿಗೆ ಮಾನವೀಯ ಮೌಲ್ಯಗಳ ಪೆಟ್ಟುಗಳನ್ನು ಕೊಟ್ಟಿದ್ದರೆ,ಅವರು ಮೂರ್ತಿಗಳಾಗುತ್ತಿದ್ದರು.

ಕೊನೆಯ ಭಾಗದ ಹೊತ್ತಿಗೆ ನಾಲ್ಕು ಜನರ ಮೇಲೆ ಅಂತಿಮ ಯಾತ್ರೆ ಕೈಗೊಂಡಾಗ ಶವಾಗಾರದ ಹಾದಿಯಲ್ಲಿ ಮೌಲ್ಯಗಳು ಒಟ್ಟುಗೂಡಿ ಗಹಗಹಿಸಿ ನಗುತ್ತಿದ್ದರೆ,ಸಂಬಂಧದ ಕೊಂಡಿಗಳು ಒಂದೊಂದಾಗಿ ಕಳಚಿಕೊಳ್ಳುತ್ತ ಸಮಾಧಿಯಲ್ಲಿ ಮಣ್ಣಾಗುತ್ತವೆ.ಮಾನವ ಮಾನವೀಯ ಮೌಲ್ಯಗಳನ್ನು ತಿಳಿಯದೆ,ತಿಳಿಸದೆ ಲೀನನಾಗುತ್ತಾನೆ.ಭವ ಸಾಗರ ಈಜಿದಷ್ಟು ಬಲೂ ದೂರ. ದೂರ ತೀರ ಯಾನ.ನಮ್ಮ ಸಮಾಧಿಯಲ್ಲಿನ ಕಲ್ಲು ಕರಗಿ ಹೋಗಿ ಮತ್ತೆ ಉದಿಸಬಹುದೇ? ನನ್ನೊಳಗಿನ ಅಂತಃಸತ್ವ.ಬದುಕು ನಾವು ಅಂದುಕೊಂಡಷ್ಟು ಸುಲಭವಲ್ಲ.ಕಾರಣ ಬದುಕು ಯಾವತ್ತಿಗೂ ಅದೊಂದು ಅಗಮ್ಯ, ಅಗೋಚರ ಬರಹ ಅಲ್ಲವೇ?

ಶ್ರೀ ಇಂಗಳಗಿ ದಾವಲಮಲೀಕ

- Advertisement -
- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!