ಬೆಳಗಾವಿ:- ರಾಷ್ಟ್ರೀಯ ಸಮಾಜ ಕಲ್ಯಾಣ ಸೇವಾ ಸಂಸ್ಥೆ ಹಾಗೂ ಕನ್ನಡ ಸಾಂಸ್ಕೃತಿಕ ಜಾನಪದ ಕಲಾವಿದರ ಸಂಘ ಬೆಳಗಾವಿ ಇವರು ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ನೀಡುವ ರಾಜ್ಯಮಟ್ಟದ ಸುವರ್ಣ ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿ ಯನ್ನು ಶಿಕ್ಷಕರಾದ ಎನ್.ಎನ್.ಕಬ್ಬೂರ ಇವರಿಗೆ ನೀಡಿ ಗೌರವಿಸಲಾಯಿತು.
ಬೆಳಗಾವಿಯ ಚಿಂದೋಡಿ ಲೀಲಾ ಕಲಾ ರಂಗ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿಯನ್ನು ನೀಡಲಾಯಿತು. ಪ್ರತಿ ವರ್ಷ ಸಮಾಜಸೇವೆ, ಶಿಕ್ಷಣ, ಕಲೆ, ಸಾಹಿತ್ಯ, ಕ್ರೀಡೆ, ಆರೋಗ್ಯ, ಪತ್ರಿಕಾ ರಂಗ, ಕೃಷಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಸದ್ಯ ಎನ್.ಎನ್.ಕಬ್ಬೂರ ಇವರು ಸವದತ್ತಿಯ ಸ.ಕಿ.ಪ್ರಾ ಶಾಲೆ ನಂ-6 ಗೊಲ್ಲರ ಕಾಲೋನಿಯಲ್ಲಿ ಸಹಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.