ಶಿಕ್ಷಣವೇ ನಮ್ಮ ಬದುಕಿನ ಸರ್ವತೋಮುಖ ಬೆಳವಣಿಗೆಗೆ ಕಾರಣ – ನಾಗೇಶ್ ಜೆ. ನಾಯಕ

Must Read

ಬೆಳ್ಳಿ ರಥ ಎಳೆದ ಮಹಿಳೆಯರು; ಇದೇ ಈ ಜಾತ್ರೆಯ ವಿಶೇಷ – ಡಾ.ಪ್ರಭು ಸಾರಂಗದೇವ

ಸಿಂದಗಿ- ಶ್ರೀ ಮಠದಿಂದ ಸುಮಾರು 3-4 ವರ್ಷಗಳಿಂದ ಶ್ರೀ ವೀರಭದ್ರೇಶ್ವರ ಮತ್ತು ಭದ್ರಕಾಳಿ ಅಮ್ಮನವರ ಜಾತ್ರಾ ಮಹೋತ್ಸವವನ್ನು ಆಚರಿಸುತ್ತಾ ಬರಲಾಗುತ್ತಿದೆ ಭಕ್ತರ ಸಹಕಾರದಿಂದ ಬೆಳ್ಳಿ ರಥ...

ಹಾನಿಯಾದ ದ್ರಾಕ್ಷಿ ಬೆಳೆಗೆ ಪರಿಹಾರ ಒದಗಿಸಲು ಮುಖ್ಯಮಂತ್ರಿ ಗೆ ಮನವಿ ಸಲ್ಲಿಸಿದ ಕಡಾಡಿ

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಇತ್ತೀಚಿನ ಅಕಾಲಿಕ ಮಳೆಯಿಂದಾಗಿ ಕಾಗವಾಡ ಹಾಗೂ ಅಥಣಿ ವಿಧಾನಸಭಾ ಕ್ಷೇತ್ರದ ಮಂಗಸೂಳಿ ಸೇರಿದಂತೆ ಅನೇಕ ಗ್ರಾಮಗಳ ಸುತ್ತಮುತ್ತ ನೂರಾರು ಎಕರೆ ಪ್ರದೇಶದಲ್ಲಿ...

ನಮ್ಮ ಸಾಧನೆಗಳನ್ನು ಪರಿಗಣಿಸಿ ಮತ ನೀಡಿ – ಸತೀಶ ಜಾರಕಿಹೊಳಿ

ಮೂಡಲಗಿ - ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರಸ್ತೆಗಳು, ಕೃಷಿ ಹೊಂಡ ಮುಂತಾದ ಜನಪ್ರಿಯ ಕಾರ್ಯಗಳನ್ನು ಮಾಡಿದ್ದಾರೆ ಅವುಗಳನ್ನು ಪರಿಗಣಿಸಿ ಕಾಂಗ್ರೆಸ್ ಪಕ್ಷಕ್ಕೆ ಮತ ಕೊಡಿ ಎಂದು ಕೆಪಿಸಿಸಿ...

ಸವದತ್ತಿ: ಶಿಕ್ಷಣವೇ ನಮ್ಮ ಬದುಕಿನ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗಿದೆ. ಅದಕ್ಕಾಗಿ ವಿದ್ಯಾರ್ಥಿಗಳೆಲ್ಲರೂ ಸತತ ಪರಿಶ್ರಮದೊಂದಿಗೆ ಅಧ್ಯಯನವನ್ನು ಮಾಡಿದಲ್ಲಿ ಯಶಸ್ಸು ಖಂಡಿತ ಸಿಗುತ್ತದೆಂದು ಉಡಿಕೇರಿಯ ಶ್ರೀ ರಾಮಲಿಂಗೇಶ್ವರ ಪ್ರೌಢ ಶಾಲೆಯ ಅಧ್ಯಾಪಕರಾದ ನಾಗೇಶ್ ಜೆ. ನಾಯಕ ನುಡಿದರು
ಅವರು ಪಟ್ಟಣದ ಕೆ.ಎಲ್.ಇ.ಸಂಸ್ಥೆಯ ಎಸ್.ವಿ.ಎಸ್.ಬೆಳ್ಳುಬ್ಬಿ ಮಹಾವಿದ್ಯಾಲಯ ಮತ್ತು ಹಳೆಯ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ಏರ್ಪಡಿಸಿದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಸಮಾಜ ನನ್ನನ್ನು ಗುರುತಿಸಬೇಕು ಎಂಬ ಆಸೆ ಎಲ್ಲರಲ್ಲಿರುತ್ತದೆ. ಆದರೆ ಪ್ರತಿಯೊಬ್ಬರೂ ತಮ್ಮಲ್ಲಿನ ಆತ್ಮವಿಶ್ವಾಸದೊಂದಿಗೆ ತಮ್ಮ ಗುರಿಯನ್ನು ಮುಟ್ಟಲು ನಿರಂತರ ಪ್ರಯತ್ನಿಸಿದರೆ ಸಾಧನೆ ಅವರದಾಗುತ್ತದೆ. ತಮಿಳುನಾಡಿನ ಒಬ್ಬ ಸಾಧಕಿ ಹೇಳುವಂತೆ ಆತ್ಮವಿಶ್ವಾಸ ಜೊತೆಗಿದ್ದರೆ ಹೆಳವನೂ ಕೂಡ ಹಿಮಾಲಯವನ್ನು ಹತ್ತಬಲ್ಲ ಎಂದಿದ್ದಾರೆ. ಸಾಧನೆಯ ಹಾದಿಯ ಪಯಣ ಕೂಡ ಒಂದು ಪುಟ್ಟ ಹೆಜ್ಜೆಯಿಂದ ಆರಂಭವಾಗುತ್ತದೆ. ಮೊದಲು ಆ ಹೆಜ್ಜೆಯನ್ನು ಮುಂದಿಡಲು ಪ್ರತಿಯೊಬ್ಬರೂ ಪ್ರಯತ್ನಿಸಿದಾಗ ಗುರಿ ಮುಟ್ಟಬಹುದೆಂದರು.

ಇಂದಿನ ದಿನಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಲೋಕ ಹೆಚ್ಚು ಬೆಳೆದಿದೆ. ಇದರ ದುರುಪಯೋಗ ಹೆಚ್ಚು ನಡೆದಿದೆ. ಅದನ್ನು ಸದುಪಯೋಗ ಮಾಡಿಕೊಂಡಲ್ಲಿ ಬಹಳಷ್ಟು ಯುವಕರು ಉತ್ತಮ ಭವಿಷ್ಯವನ್ನು ಕಂಡುಕೊಳ್ಳಬಹುದು ಎಂದರು.

ನಾನು ಕಲಿತ ಶಾಲೆಯಲ್ಲಿ ನಾನು ಮುಖ್ಯ ಅತಿಥಿಯಾಗಿ ಇಂದು ಪಾಲ್ಗೊಳ್ಳುತ್ತಿರುವ ನನ್ನ ಸೌಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಯಾರು ಪ್ರಾಮಾಣಿಕ ಪ್ರಯತ್ನವನ್ನು ಮಾಡುವರೋ ಅವರಿಗೆ ಅವಕಾಶಗಳ ಬಾಗಿಲು ತೆರೆದೇ ಇರುತ್ತದೆ. ಅದಕ್ಕಾಗಿ ಒಬ್ಬ ಕವಿ ಒಂದು ಮಾತು ಹೇಳುತ್ತಾನೆ ಪ್ರತಿಭೆಗಳು ಮಹಲುಗಳಲ್ಲಿ ಹುಟ್ಟುವದಿಲ್ಲ, ಬಡತನದಲ್ಲಿ ಹುಟ್ಟುತ್ತವೆಂದಿದ್ದಾನೆ ಎಂದು ಕಿವಿ ಮಾತು ಹೇಳಿದರು.

ಗಿರೀಶ್ ಕಾರ್ನಾಡ್ ಅವರು ತಮ್ಮ ಹಯವದನ ನಾಟಕದಲ್ಲಿ ಬೆಳಕೇ ಇಲ್ಲದ ದಾರಿಯಲ್ಲಿ ಸಾಗಬಹುದು ಆದರೆ ಕನಸೇ ಇಲ್ಲದ ದಾರಿಯಲ್ಲಿ ಹೇಗೆ ನಡೆಯಬಹುದು ಎಂದು ಉಲ್ಲೇಖಿಸಿದ್ದಾರೆ. ಅಂದರೆ ಪ್ರತಿಯೊಬ್ಬ ವಿದ್ಯಾರ್ಥಿಯು ಗುರಿಯನ್ನಿಟ್ಟುಕೊಂಡು ಆ ಗುರಿಯನ್ನು ತಲುಪಲು ಸತತವಾಗಿ ಪ್ರಯತ್ನಿಸಿದ್ದಲ್ಲಿ ಯಶಸ್ಸು ಅವನದಾಗುತ್ತದೆ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ಬಿ.ವಿ.ಮಲಗೌಡರ ವಹಿಸಿದ್ದರು, ಶಾಂಭವಿ ಬಡಿಗೇರ ಮತ್ತು ಸೌಮ್ಯಾ ಪರದೇಶಿ ಪ್ರಾರ್ಥಿಸಿದರು, ಡಾ. ಎನ್.ಆರ್. ಸವತೀಕರ ಸ್ವಾಗತಿಸಿದರು, ಪ್ರೊ. ಕೆ. ರಾಮರೆಡ್ಡಿ ಅತಿಥಿಗಳನ್ನು ಪರಿಚಯಿಸಿದರು. ವೇದಿಕೆ ಮೇಲೆ ಪ್ರಾಚಾರ್ಯ ಪ್ರೊ ಮಾರುತಿ ಎ. ಡೊಂಬರ, ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರೊ. ಶಿವಾನಂದ ಎಂ.ಹೊಳಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನಾಗೇಶ್ ಜೆ. ನಾಯಕ ಅವರನ್ನು ಸನ್ಮಾನಿಸಲಾಯಿತು.

ಡಾ.ಅರುಂಧತಿ ಬದಾಮಿ ವಂದಿಸಿದರು, ಪ್ರೊ. ಮೋಹನ ಬೆಣಚಮರಡಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಹಾಗೂ ಹಳೆಯ ವಿದ್ಯಾರ್ಥಿ ಸಂಘದ ಸದಸ್ಯರಾದ ಬಸವರಾಜ ಪುಟ್ಟಿ, ಮಲ್ಲಿಕಾರ್ಜುನ ಬೀಳಗಿ ಮತ್ತು ನಾಗರಾಜ ಸೋಗಿ ಉಪಸ್ಥಿತರಿದ್ದರು.

- Advertisement -
- Advertisement -

Latest News

ಬೆಳ್ಳಿ ರಥ ಎಳೆದ ಮಹಿಳೆಯರು; ಇದೇ ಈ ಜಾತ್ರೆಯ ವಿಶೇಷ – ಡಾ.ಪ್ರಭು ಸಾರಂಗದೇವ

ಸಿಂದಗಿ- ಶ್ರೀ ಮಠದಿಂದ ಸುಮಾರು 3-4 ವರ್ಷಗಳಿಂದ ಶ್ರೀ ವೀರಭದ್ರೇಶ್ವರ ಮತ್ತು ಭದ್ರಕಾಳಿ ಅಮ್ಮನವರ ಜಾತ್ರಾ ಮಹೋತ್ಸವವನ್ನು ಆಚರಿಸುತ್ತಾ ಬರಲಾಗುತ್ತಿದೆ ಭಕ್ತರ ಸಹಕಾರದಿಂದ ಬೆಳ್ಳಿ ರಥ...
- Advertisement -

More Articles Like This

- Advertisement -
close
error: Content is protected !!