ಶ್ರೀ ನಿತ್ಯ ಪಂಚಾಂಗ

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

🕉 ಶ್ರೀ ಗುರುಭ್ಯೋ ನಮಃ🕉

🔯 ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ 🔯 ‌ ‌ ‌ ‌

ಶ್ರೀ ನಿತ್ಯ ಪಂಚಾಂಗ

ದಿನಾಂಕ : 17/04/2021

- Advertisement -

ವಾರ : ಶನಿ ವಾರ ಶ್ರೀ ಪ್ಲವ ನಾಮ : ಸಂವತ್ಸರೇ

ಉತ್ತರಾಯಣೇ: ವಸಂತ ಋತೌ ‌ ‌ ‌ ‌‌‌

ಚೈತ್ರ ಮಾಸೇ ಶುಕ್ಲ: ಪಕ್ಷೇ ಪಂಚಮ್ಯಾಂ (ಪ್ರಾರಂಭ ಸಮಯ : ಶುಕ್ರ ಹಗಲು 02-30 pm ರಿಂದ ಅಂತ್ಯ ಸಮಯ : ಶನಿ ಹಗಲು 04-13 pm)

ಸ್ಥಿರ ವಾಸರೇ : ವಾಸರಸ್ತು ‌ ಮೃಗಶಿರ ನಕ್ಷತ್ರೇ (ಪ್ರಾರಂಭ ಸಮಯ: ಶುಕ್ರ ರಾತ್ರಿ 11-38 pm ರಿಂದ ಅಂತ್ಯ ಸಮಯ : ಶನಿ ರಾತ್ರಿ 02-32 am ರವರೆಗೆ) ಶೋಭನ ಯೋಗೇ (ಶನಿ ರಾತ್ರಿ 07-16 pm ರವರೆಗೆ) ಬವ ಕರಣೇ (ಶನಿ ಹಗಲು 07-20 am ರವರೆಗೆ) ಉಪರಿ ಬಾಲವ ಕರಣೇ (ಶನಿ ರಾತ್ರಿ 08-31 pm ರವರೆಗೆ)

ಸೂರ್ಯ ರಾಶಿ: ಮೇಷ‌

ಚಂದ್ರ ರಾಶಿ: ವೃಷಭ

‌ಬೆಂಗಳೂರಿಗೆ ಅಗ್ನಿಹೋತ್ರ ಸಮಯಕ್ಕನುಸಾರವಾಗಿ ‌ 🌅

ಸೂರ್ಯೋದಯ – 06-10 am
🌄ಸೂರ್ಯಾಸ್ತ – 06-29 pm

ಅಶುಭ ಕಾಲಗಳು ರಾಹುಕಾಲ‌ : 09-13 am ಇಂದ 10-46 am

ಯಮಗಂಡಕಾಲ

01-52 pm ಇಂದ 03-25 pm ಗುಳಿಕಕಾಲ
06-07 am ಇಂದ 07-40 am


ಅಮೃತ ಕಾಲ : ಶನಿ ಹಗಲು 04-41 pm ರಿಂದ ‌ 06-28 pm ರವರೆಗೆ


ಇಂದಿನ ವಿಶೇಷ: ಪಂಚಮಿ, ಲಕ್ಷ್ಮಿ ಪಂಚಮಿ, ಹಯವ್ರತ, ವಿಷ್ಣು ಡೋಲೋತ್ಸವ , ದೇವಾಂಗ ದೇವಳ ಋಷಿಗಳ ಜಯಂತಿ, ಶ್ರೀ ವಿದ್ಯಾವಿಜಯ ತೀರ್ಥರ ಪುಣ್ಯದಿನ, ಹೆಬ್ಬುರು ಕೋದಂಡ ಆಶ್ರಮದ ಶ್ರೀ ಶ್ರೀಧರಾನಂದ ಸ್ವಾಮಿಗಳ ಆರಾಧನೆ.

ದೇವರ ದಾಸಿಮಯ್ಯರವರ ಜಯಂತಿ. (ಇವರು ವಿಶ್ವದ ಮೊದಲ ವಚನಕಾರ ಎಂಬ ಹೆಗ್ಗಳಿಕೆ ಪಡೆದವರು)


ಮರುದಿನದ ವಿಶೇಷ : ಶ್ರೀ ರಾಮಾನುಜಾಚಾರ್ಯರ ಜಯಂತಿ


ಆರೋಗ್ಯ ಸಲಹೆ: ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಸಂಕೀರ್ಣ, ಮತ್ತು ಕಷ್ಟಕರವೆನಿಸಬಹುದು. ಆದರೆ, ತಜ್ಞರ ಪ್ರಕಾರ ನಮ್ಮ ಜೀವನದಲ್ಲಿ ಕೆಲವು ಸರಳ ಚಟುವಟಿಕೆಗಳನ್ನು ರೂಢಿಸಿಕೊಳ್ಳುವುದರಿಂದ ಮತ್ತು ಜೀವನ ಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.


ನುಡಿ ಮುತ್ತುಗಳು/ Thoughts of the Day

ಹಣೆ ಬರೆಯುವ ಬ್ರಹ್ಮನಿಗಿಂತಲೂ ಜನ್ಮ ಕೊಟ್ಟ ತಾಯಿ ದೊಡ್ಡವರು. ಹಾಗೆಯೇ ಪ್ರೀತಿಸುವ ಹೃದಯಕ್ಕಿಂತ ಪ್ರಾಣಕೊಡುವ ಸ್ನೇಹ ದೊಡ್ಡದು.

ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಮತ್ತು ಯಾರೂ ಕೂಡ ಸರಿಸಮಾನರೂ ಅಲ್ಲ. ಎಲ್ಲರೂ ಅದ್ವಿತೀಯ ವಿಶಿಷ್ಟ ವ್ಯಕ್ತಿಗಳೇ. ಹೋಲಿಕೆ ಮಾಡಲಾಗದು. ನಾನು ನಾನೇ, ನೀವು ನೀವೇ.( ಓಶೋ)

ಪ್ರತಿಯೊಬ್ಬರಿಗೂ ಜಗತ್ತನ್ನೇ ಬದಲಾಯಿಸಬೇಕೆಂಬ ತವಕ. ಆದರೆ ಯಾರೊಬ್ಬರೂ ತಮ್ಮಲ್ಲಿನ ವರ್ತನೆ ಬದಲಿಸಿಕೊಳ್ಳಬೇಕೆಂದು ಚಿಂತಿಸುವದಿಲ್ಲ.
– ಲಿಯೋ ಟಾಲ್ ಸ್ಟಾಯ್-

ಬುದ್ಧಿವಂತನಾದವನು ದುರ್ಜನರನ್ನು ಸ್ನೇಹ ಮತ್ತು ದ್ವೇಷ ಎರಡಕ್ಕೂ ದೂರ ಇರಬೇಕು.
ಅವರು ಹೇಗಿದ್ದರೂ ಎಲ್ಲಿದ್ದರೂ ಎಂದಿಗೂ ಅಪಯಾಯಕಾರಿಗಳು.
ನಾಯಿ ನೆಕ್ಕಿದರೂ ಅಷ್ಟೆ,ಕಚ್ಚಿದರೂ ಅಷ್ಟೆ.ಕೆಡುಕು ತಪ್ಪದು.
( ಸುಭಾಷಿತ ಸುಧಾನಿಧಿ )

ಇನ್ನೊಬ್ಬರ ಯೋಗ್ಯತೆಯನ್ನು ಅಳೆಯುವ ಬದಲು, ಗೌರವಿಸಿ,ನಮ್ಮ ವ್ಯಕ್ತಿತ್ವವನ್ನು ಎತ್ತರಿಸಿಕೊಳ್ಳೋಣ.

ಮನುಷ್ಯನಿಗೆ ದಡ್ಡತನ ಇದ್ದರು ಪರವಾಗಿಲ್ಲ, ಸಣ್ಣತನ ಇರಬಾರದು ಏಕೆಂದರೆ ಮನುಷ್ಯ ಗೌರವ ಕಳೆದುಕೊಳ್ಳುವುದು ಸಣ್ಣತನದಿಂದಲೇ ಹೊರತು ದಡ್ಡತನದಿಂದಲ್ಲ.

ಸಂಬಂಧಗಳು ತಾನಾಗೆ ದೂರವಾಗುವುದಿಲ್ಲ. ಸಂಬಂಧಿಸಿದವರ ವರ್ತನೆ ಅಹಂಕಾರ ನಿರ್ಲಕ್ಷ್ಯದಿಂದ ದೂರವಾಗುತ್ತವೆ.

LIFE is very Short, So Break your silly Egos, forgive Quickly, Believe slowly, love Truly,Laugh Loudly, and never avoid anything that makes you Smile.

If you do not tell the truth about yourself you cannot tell it about other people.There is no greater agony than bearing an untold story inside you.
It’s like everyone tells a story about themselves inside their own head. Always. All the time. That story makes you what you are. We build ourselves out of that story.
Don’t ever tell anybody anything. If you do, you start missing everybody. People are there to carry the tales. They seldom accept the truth.

Nonviolence is the greatest virtue, cowardice the greatest vice. Nonviolence is a universal principle and is not limited by a hostile environment.

🙏”Faith induces one to pray . Prayer purifies the heart . In the purified heart is reflected the light of Lord . When the light shines , the mortal becomes immortal . ”
-Swami Sivananda-


ಶುಭೋದಯ, ಶುಭದಿನ. ಸರ್ವರಿಗೂ ಒಳಿತಾಗಲಿ. ಕೋವಿಡ್ ರಣಮಾರಿ ಬಗ್ಗೆ ಉದಾಸೀನ ಬೇಡ. ಜಾಗರೂಕರಾಗಿರಿ.

Wishing you & your family a Blessed Day.
Wear Mask, Maintain Distance and do not neglect Covid.


ಕೇಶವ ನಾರಾಯಣ

- Advertisement -
- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!