spot_img
spot_img

ಸದ್ದು ಗದ್ದಲವಿಲ್ಲದೆ ನಮ್ಮ ಗೃಹ ಸಚಿವರು ಕಾಶ್ಮೀರದಲ್ಲಿ ಕೈಗೊಂಡ ಈ ಕ್ರಮಗಳನ್ನು ನೋಡಿ

Must Read

- Advertisement -

ನಮ್ಮ ಕೇಂದ್ರ ಗೃಹ ಸಚಿವ ಅಮಿತ್ ಷಾರಿಗೆ ಕೊರೋನಾ ಆದಾಗ ಸುಮ್ಮನೇ ಇದ್ದಾರೆ ಎಂದು ನಾವೆಲ್ಲರೂ ಅಂದುಕೊಂಡಿದ್ದೆವಲ್ಲವೆ ? ಆದರೆ ಅದು ಸುಮ್ಮನೆ ಕೂಡ್ರುವ ಜಾಯಮಾನವಲ್ಲ.

ಮೊದಲೇ ದೇಶಭಕ್ತಿಯ ರಕ್ತ ನರನಾಡಿಗಳಲ್ಲಿ ಹರಿಯುತ್ತಿದೆ. ಎರಡು ಸಲ AIIMs ಆಸ್ಪತ್ರೆಯ ಬಾಗಿಲು ತಟ್ಟಿ ಕೊರೋನಾವನ್ನು ಬಗ್ಗು ಬಡಿದು ಬಂದ ಇವರಿಗೆ ದೇಶದ್ರೋಹಿಗಳು ಯಾವ ಲೆಕ್ಕ ?

ಕಳೆದ ಹತ್ತು ದಿನಗಳಲ್ಲಿ ಗೃಹ ವ್ಯವಹಾರಗಳ ಖಾತೆ ಜಮ್ಮು ಕಾಶ್ಮೀರ ಕುರಿತಂತೆ ಸದ್ದುಗದ್ದಲವಿಲ್ಲದೆ ತೆಗೆದುಕೊಂಡಿರುವ ಕೆಲವು ನಿರ್ಧಾರಗಳನ್ನು ನಾವು ಭಾರತೀಯರು ಅರಿತಿರಬೇಕು.

- Advertisement -
 1. ಸುಮಾರು ಐದು ಲಕ್ಷ ಹಿಂದೂ ಸಿಕ್ಖ ಜನರು ಜಮ್ಮು ಕಾಶ್ಮೀರಕ್ಕೆ ವಲಸೆ ಬಂದಿದ್ದಾರೆ.
 2. ಓಮರ್ ಅಬ್ದುಲ್ಲಾ ಹಾಗೂ ಮೆಹಬೂಬಾ ಅವರಿಗೆ ನೀಡಲಾಗಿದ್ದ ಎಲ್ಲಾ ಪುಕ್ಕಟ್ಟೆ ಸೌಲಭ್ಯಗಳನ್ನು ವಾಪಸ್ ಪಡೆಯಲಾಗಿದೆ
 3. ಜಮ್ಮು ಕಾಶ್ಮೀರ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಸೇರಿದಂತೆ ಎಲ್ಲ ವಿಶ್ವವಿದ್ಯಾಲಯ ಗಳ ಮೇಲಿನ ನಿಯಂತ್ರಣ ಕಾಶ್ಮೀರ ಸರ್ಕಾರದಿಂದ ಕಸಿದುಕೊಳ್ಳಲಾಗಿದೆ
 4. ಹಿಂದೂ ದೇವಾಲಯಗಳ ಮೇಲೀಗ ಕಾಶ್ಮೀರದ ನಿಯಂತ್ರಣವಿಲ್ಲ.
 5. ೧೯೯೦ ರಲ್ಲಿ ಕಾಶ್ಮೀರಿ ಹಿಂದೂಗಳು ಬಿಟ್ಟು ಹೋಗಿದ್ದ ಆಸ್ತಿ ಪಾಸ್ತಿಗಳನ್ನು ತೆರವುಗೊಳಿಸಲು ನೋಟೀಸು ನೀಡುವ ಪ್ರಾಧಿಕಾರ ರಚನೆ.
 6. ಜಮ್ಮು ಕಾಶ್ಮೀರದಲ್ಲಿ ಎಲ್ಲ ಗಾಲ್ಫ್ ಹಾಗೂ ಇತರೆ ಕ್ಲಬ್ ಗಳ ಮೇಲಿನ ನಿಯಂತ್ರಣ ರದ್ದು.
 7. ವಿಶ್ವವಿದ್ಯಾಲಯದ ವ್ಯವಹಾರದಲ್ಲಿ ಕಾಶ್ಮೀರ ಮುಖ್ಯಮಂತ್ರಿ ಯ ಅಧಿಕಾರ ಶೂನ್ಯ.
 8. ೪೨ ವರ್ಷಗಳ ಹಿಂದೆ ಜಮ್ಮು ಕಾಶ್ಮೀರದ ದೇಶದ್ರೋಹಿಗಳಿಗೆ ನೀಡಲಾಗಿದ್ದ ಭದ್ರತೆಯನ್ನು ತೆಗೆದುಹಾಕಲಾಗಿದೆ. ಈಗ, ಸಾರ್ವಜನಿಕ ರಕ್ಷಣಾ ಕಾಯ್ದೆ ೧೯೭೮ ರಡಿ ಬಂಧಿತರಾದವರನ್ನು ದೇಶದ ಯಾವುದೇ ಜೈಲಿನಲ್ಲಿ ಇಡಬಹುದು
 9. ಜಮ್ಮು ಕಾಶ್ಮೀರದಿಂದ ಯಾವುದೇ ಕಾರ್ಯದರ್ಶಿ ಹುದ್ದೆ ಬೇರೆಡೆ ಸ್ಥಳಾಂತರವಾಗುದಿಲ್ಲ.

ಇನ್ನೂ ಕೆಲವು ಕ್ರಮಗಳು

 • ಮಾಜಿ ಮುಖ್ಯಮಂತ್ರಿಗಳಾದ ಫಾರೂಕ, ಓಮರ್, ಆಜಾದ್, ಮೆಹಬೂಬಾ ಅವರ ವಸತಿ ವಾಹನ ಒಳಗೊಂಡಂತೆ ಎಲ್ಲ ಸೌಲಭ್ಯಗಳನ್ನು ಕಸಿದುಕೊಳ್ಳಲಾಗಿದೆ.
 • ರಾಜ್ಯದ ಎಲ್ಲ ಯುನಿವರ್ಸಿಟಿ ಗಳ ನಿಯಂತ್ರಣ ದೆಹಲಿಯ ಕೈಯಲ್ಲಿ.
 • ಹಿಂದೂ ದೇವಾಲಯಗಳ ಆಡಳಿತ ಧಾರ್ಮಿಕ ಟ್ರಸ್ಟ್ ಗಳ ಕೈಯಲ್ಲಿ. ಇನ್ನು ಮುಂದೆ ಇವು ಕೇಂದ್ರಕ್ಕೇ ನೇರವಾಗಿ ವರದಿ ಸಲ್ಲಿಸಬೇಕು. ಇವಷ್ಟೇ ಅಲ್ಲ. ಜೆಕೆ ಯ ವಕ್ಫ್ ಬೋರ್ಡ್ ಈಗ ಕೇಂದ್ರದ ಕೈಯಲ್ಲಿದೆ. ಅದರ ಆಸ್ತಿ ಪಾಸ್ತಿಗಳ ಆಡಳಿತವೀಗ ಕೇಂದ್ರದ ಕೈಯಲ್ಲಿ.
 • ದಶಕಗಳ ಹಿಂದೆ ಕಾಶ್ಮೀರಿ ಪಂಡಿತರಿಂದ ಕಸಿದುಕೊಂಡ ಹಾಗೂ ಒತ್ತಾಯದಿಂದ ಬರೆಸಿಕೊಂಡ ಆಸ್ತಗಳನ್ನು ಅವರಿಗೇ ಹಿಂತಿರುಗಿಸಲು ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ.

ಹೀಗೆ ಇನ್ನೂ ಅನೇಕ ಸುಧಾರಣಾ ಕ್ರಮಗಳನ್ನು ಗೃಹ ಸಚಿವಾಲಯ ಸದ್ದಿಲ್ಲದೆ ಜಾರಿಗೆ ತಂದಿದೆ. ಯಾಕೆಂದರೆ ಅಲ್ಲಿರುವುದು ಕೇವಲ ಕೇವಲ ದೇಶ ಸೇವಾ ಮನೋಭಾವ.

ಅಮಿತ್ ಷಾ ರಿಗೆ ಕೊರೋನಾ ಆದಾಗ ಅವರು ಸಾಯಲಿ ಎಂದು ಬಯಸಿ ಶಾಪ ಹಾಕಿದವರು ಇಂದು ತಾವೇ ಕೊರೋನಾಕ್ಕೆ ಬಲಿಯಾಗಿರಬಹದು ಆದರೆ ದೇಶ ಸೇವೆಯನ್ನೇ ಉಸಿರಾಗಿಸಿಕೊಂಡವರನ್ನು ಕೊರೋನಾ ಏನೂ ಮಾಡುವುದಿಲ್ಲ.
ನಮ್ಮ ಗೃಹ ಮಂತ್ರಿಗಳು ಚಿರಾಯುವಾಗಲಿ ಅವರ ದೇಶಸೇವೆ ಸದಾ ಹೀಗೇ ಸಾಗಲಿ.

- Advertisement -

(ವಾಟ್ಸಪ್ ಕೃಪೆ)

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಹೂಗಾರ ಮಾದಣ್ಣ ಕರ್ನಾಟಕದ ಇತಿಹಾಸದಲ್ಲಿ 12ನೇ ಶತಮಾನ ಒಂದು ಕ್ರಾಂತಿಯ ಕಾಲ. ಅಪ್ಪ ಬಸಣ್ಣನವರ ನೇತೃತ್ವದಲ್ಲಿ ಧಾರ್ಮಿಕ, ಸಾಮಾಜಿಕ, ಆರ್ಥಿಕ ರಂಗದಲ್ಲಿ ಪರಿವರ್ತನೆಯಾಯಿತು. ವ್ಯಕ್ತಿ ಹಾಗೂ ಸಮಾಜದ...
- Advertisement -

More Articles Like This

- Advertisement -
close
error: Content is protected !!
Join WhatsApp Group