ವಿದೇಶಿಗರು ಭಾರತೀಯತೆಯನ್ನು ಒಪ್ಪಿಕೊಂಡು ಬಂದರೆ ಭಾರತೀಯರು ವಿದೇಶಿಗರನ್ನು ಗೌರವಿಸಿ,ಬೆಳೆಸಿ,ಪೂಜಿಸುವ ಮಟ್ಟಿಗೆ ಸಹಕರಿಸುತ್ತಾರೆ. ಅದೇ ನಮ್ಮವರಲ್ಲಿಯೇ ಅಡಗಿದ್ದ ಭಾರತೀಯತೆಯನ್ನು ಮಕ್ಕಳಲ್ಲಿ ತುಂಬಿ ಬೆಳೆಸಲು ಅಸಹಕಾರ ನೀಡುತ್ತಾರೆಂದರೆ ಇಲ್ಲಿ ಬೇಕಾಗಿರೋದು ವಿದೇಶಿಗರ ಹಣ ಎನ್ನಬಹುದಷ್ಟೆ. ನಾವೆಷ್ಟೇ ಮೇಲಿನಿಂದ ಭಾರತೀಯ ಸಂಸ್ಕೃತಿ ,ಸಂಪ್ರದಾಯ,ಆಚಾರ,ವಿಚಾರ, ವಸ್ತ್ರ, ಒಡವೆಗಳನ್ನು ಮೈಮೇಲೆ ಎಳೆದುಕೊಂಡರೂ ಅದನ್ನು ಕಳಚಿಟ್ಟು ತಮ್ಮ ಮೂಲವನ್ನು ಒಳಗಿನಿಂದ ಬೆಳೆಸಿ ಕೊಂಡು ನಮ್ಮವರನ್ನೇ ಆಳುವವರೂ ಇಂದು ಭಾರತದಲ್ಲಿ ತಮ್ಮ ಸಾಮ್ರಾಜ್ಯ ಸ್ಥಾಪನೆ ಮಾಡಲು ತಂತ್ರ ನಡೆಸಿದ್ದಾರೆ. ಕೆಲವರು ಸ್ವಚ್ಚವಾಗಿದ್ದರೂ ನಮ್ಮವರೆ ಅವರನ್ನು ಹೊಲಸು ಮಾಡಬಹುದು. ಕಾರಣ,ನಮ್ಮಲ್ಲೇ ಇಲ್ಲದ ಸ್ವಚ್ಚತೆ ಬೇರೆಯವರಿಗೆ ಕೊಡಲು ಕಷ್ಟ.
ಏನೇ ಇರಲಿ, ನಮ್ಮನ್ನು, ನಮ್ಮವರನ್ನು,ನಮ್ಮ ಮಕ್ಕಳನ್ನು ನಮ್ಮ ದೇಶವನ್ನು ಸ್ವಚ್ಚವಾಗಿಟ್ಟುಕೊಳ್ಳಲು ನಮ್ಮ ಮನಸ್ಸು ಸ್ವಚ್ಚವಾಗಲು ಬೇಕಾದ ಸ್ವಚ್ಚ ಶಿಕ್ಷಣವನ್ನು ನಾವೇ ಕೊಡದೆ ಪಡೆಯದೆ, ಕೇವಲ ವ್ಯವಹಾರಕ್ಕೆ ಸೀಮಿತ ಮಾಡಿಕೊಂಡು ರಾಜಕೀಯಕ್ಕೆ ಇಳಿದಿರುವಾಗ ವಿದೇಶಿಗಳಾದರೂ ಏನು ಮಾಡಲು ಸಾಧ್ಯ? ಅವರವರ ದೇಶ,ಧರ್ಮ,ಸಂಸ್ಕೃತಿ, ಭಾಷೆ ಹುಟ್ಟುವಾಗಲೇ ಒಳಗಿರುವಾಗ ಅಲ್ಲಿದ್ದೇ ಅದನ್ನು ಅವರೇ ಅವರೊಳಗೆ ಬೆಳೆಸಿಕೊಂಡರೆ ಯಾವುದೇ ಸಹಕಾರದ ಅಗತ್ಯವಿಲ್ಲದೆಯೂ ನಾವು ಸ್ವಚ್ಚತೆ ಕಡೆಗೆ ನಡೆಯಬಹುದಿತ್ತು.
ಆದರೆ ಮಧ್ಯವರ್ತಿಗಳ ಕುತಂತ್ರದಿಂದ ಇಂದು ಮಿಶ್ರವರ್ಣ,ಮಿಶ್ರ ಜಾತಿ, ಸಮ್ಮಿಶ್ರ ಸರ್ಕಾರ ಭಾರತೀಯತೆ ಯನ್ನೇ ಹಾಳು ಮಾಡುತ್ತಾ ವಿದೇಶಕ್ಕೆ ಹಾರೋರನ್ನು ಸ್ವಾಗತಿಸುತ್ತಾ,ವಿದೇಶಿಗರಿಗೆ ಭಾರತ ಮಣೆಹಾಕಿ ಸ್ವಾಗತಿಸುವತ್ತ ಬೆಳೆದಿದೆ. ಇದನ್ನು ಮಾಧ್ಯಮಗಳು ದೊಡ್ಡ ಪ್ರಗತಿ ಎನ್ನುವಂತೆ ಪ್ರದರ್ಶನ ಮಾಡಿ ಜನರಿಗೆ ಮನರಂಜನೆ ನೀ ಜನರೆ ಆತ್ಮವಂಚನೆ ಮಾಡಿಕೊಳ್ಳುವರೋ ಆ ದೇವರಿಗೇ ಗೊತ್ತು. “ಪರರೆಲ್ಲಾ ನಮ್ಮವರಾದರೆ ಸ್ವರ್ಗ, ನಮ್ಮವರೆ ಪರರಾದರೆ ನರಕ”
ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು