ಸರಕಾರದ ಯೋಜನೆಗಳನ್ನು ಪಡೆದು ಉತ್ತಮ ಜೀವನ ರೂಪಿಸಿಕೊಳ್ಳಿ – ಪ್ರೊ. ಕೆ.ರಾಮರೆಡ್ಡಿ, ಕನ್ನಡ ಅಧ್ಯಾಪಕ

Must Read

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಟೈಮ್ಸ್ ಆಫ್ ಕರ್ನಾಟಕ ವರದಿಗೆ ಸ್ಪಂದನೆ ; ಅಕ್ರಮ ಮರಳು ದಂಧೆಯ ಬಗ್ಗೆ ಸ್ಪಷ್ಟೀಕರಣ ನೀಡಿದ ಎಸಿ

ಸಿಂದಗಿ: "ಅಕ್ರಮ ಮರಳು ಸಾಗಾಟ ನಿರಂತರ ; ಜಾಣ ಕುರುಡರಾದ ಅಧಿಕಾರಿಗಳು " ಎಂಬ ಶೀರ್ಷಿಕೆಯಲ್ಲಿ ನಮ್ಮ ಟೈಮ್ಸ ಆಫ್ ಕರ್ನಾಟಕ ವೆಬ್ ಪತ್ರಿಕೆಯಲ್ಲಿ ದಿ....

ಸವದತ್ತಿ: ಅನಾದಿಕಾಲದಿಂದಲೂ ಸಮಾಜದಲ್ಲಿ ಮನುಷ್ಯರ ಮನುಷ್ಯರ ನಡುವೆ ಮೇಲು ಕೀಳು ಎಂಬ ಅಸಮತೋಲನ ಜಾರಿಯಲ್ಲಿದೆ. ಈ ಅಸಮತೋಲನವನ್ನು ಹೋಗಲಾಡಿಸಲು ಬುದ್ಧ, ಬಸವ, ಗಾಂಧಿ, ಜ್ಯೋತಿಭಾ ಪುಲೆ, ಅಂಬೇಡ್ಕರ್ ಮುಂತಾದವರು ಸಮಾಜ ಸುಧಾರಣೆಗಾಗಿ ಬಹಳಷ್ಟು ಶ್ರಮಿಸಿದ್ದಾರೆ. ಆದರೂ ಈ ತಾರತಮ್ಯ ನಿವಾರಣೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಅನೇಕ ಸುಧಾರಣಾ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಕೆ.ಎಲ್.ಇ.ಸಂಸ್ಥೆಯ ಎಸ್.ವಿ.ಎಸ್. ಬೆಳ್ಳುಬ್ಬಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಪ್ರೊ. ಕೆ. ರಾಮರೆಡ್ಡಿ ನುಡಿದರು.

ಅವರು ಪಟ್ಟಣದ ಕೆ.ಎಲ್.ಇ.ಸಂಸ್ಥೆಯ ಎಸ್.ವಿ.ಎಸ್. ಬೆಳ್ಳುಬ್ಬಿ ಮಹಾವಿದ್ಯಾಲಯ ಮತ್ತು ಸವದತ್ತಿಯ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿದ ” ಅರಿವು ಮೂಡಿಸುವ ಮಾಸಾಚರಣೆ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಹಿಂದುಳಿದ, ಪರಿಶಿಷ್ಟ ಜಾತಿ ಮತ್ತು ಪಂಗಡದ ವರ್ಗದವರಿಗೆ ಕರ್ನಾಟಕ ಸರಕಾರವು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ಅನೇಕ ಶಿಷ್ಯವೇತನ ನೀಡುತ್ತಿದೆ. ಇವುಗಳನ್ನು ಪಡೆದುಕೊಂಡು ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಲು ಮುಂದಾಗಬೇಕಿದೆ ಎಂದರು.

- Advertisement -

ಇನ್ನು ಪದವಿ ಮುಗಿದ ನಂತರ ಸರಕಾರಿ ನೌಕರಿಗಾಗಿ ಕಾಯದೆ ಸ್ವಾವಲಂಬಿಯಾಗಿ ಬದುಕಲು ವ್ಯಾಪಾರ ಘಟಕ, ಚಿಕ್ಕಉದ್ದಿಮೆಗಳನ್ನು ಸ್ಥಾಪಿಸಲು ಸಹಾಯಧನದೊಂದಿಗೆ ಸಾಲ ಸೌಲಭ್ಯವನ್ನು ಸರಕಾರವು ನೀಡುತ್ತಿದೆ. ಇದನ್ನು ಪಡೆಯುವದರ ಮೂಲಕವು ಪದವೀಧರರು ಸ್ವಾವಲಂಬಿಯಾಗಿ ಉತ್ತಮ ಬದುಕನ್ನು ರೂಪಿಸಿಕೊಳ್ಳಬಹುದಾಗಿದೆ ಎಂದರು.

ಇವುಗಳಲ್ಲದೆ ಪದವಿ ಮುಗಿಸಿದ ವಿದ್ಯಾರ್ಥಿಗಳು ಐ.ಎ.ಎಸ್. ಮತ್ತು ಕೆ.ಎ.ಎಸ್.ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ ಕೂಡ ಅರ್ಹ ಬಡ ವಿದ್ಯಾರ್ಥಿಗಳಿಗೆ ಉಚಿತ ತರಬೇತಿಯ ವ್ಯವಸ್ಥೆಯನ್ನು ಕರ್ನಾಟಕ ಸರಕಾರವು ಮಾಡುತ್ತಿದೆ. ಇವೆಲ್ಲವುಗಳನ್ನು ಪಡೆದುಕೊಳ್ಳಲು ವಿದ್ಯಾರ್ಥಿಗಳು ಸತತ ಪರಿಶ್ರಮ, ನಿಶ್ಚಿತ ಗುರಿಯನ್ನು ಹೊಂದಿ ಉತ್ತಮ ಭವಿಷ್ಯವನ್ನು ಪಡೆಯಬಹುದೆಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಎನ್.ಆರ್.ಸವತೀಕರ ವಹಿಸಿದ್ದರು, ಶ್ರೀಮತಿ ಆಶಾ ಪರೀಟ್ ಪ್ರಾರ್ಥಿಸಿದರು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಆರ್.ಆರ್.ಕುಲಕರ್ಣಿ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು, ಇಲಾಖೆಯ ಅಧೀಕ್ಷಕರಾದ ಶ್ರೀಮತಿ ಜಿ.ಬಿ.ಪಾಟೀಲ ಅವರು ಕರ್ನಾಟಕ ಸರಕಾರದ ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ಪರಿಚಯಿಸಿದರು. ವೇದಿಕೆ ಮೇಲೆ ಐ.ಕ್ಯೂ.ಎ.ಸಿ. ಸಂಯೋಜಕರಾದ ಡಾ.ಅರುಂಧತಿ ಬದಾಮಿ ಉಪಸ್ಥಿತರಿದ್ದರು. ಶ್ರೀ ವಸಂತ ಚಿನಿವಾಲ ಅವರು ವಂದಿಸಿದರು, ಶ್ರೀ ಗುರುನಾಥ ಮೇಟಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

- Advertisement -
- Advertisement -

Latest News

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...
- Advertisement -

More Articles Like This

- Advertisement -
close
error: Content is protected !!