ಸರ್ಕಾರವನ್ನು ರೈತರು ಅರ್ಥ ಮಾಡಿಕೊಳ್ಳಬೇಕು

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

ಸರ್ಕಾರ ರೈತರ ಪರ ನಿಂತರೂ ವಿರೋಧಿ ಗಳಿದ್ದಾರೆಂದರೆ ವಿರೋಧಿಗಳ ಮೂಲ ಉದ್ದೇಶ ವನ್ನು ರೈತರಾದವರೆ ಅರ್ಥ ಮಾಡಿಕೊಂಡರೆ ಉತ್ತಮ. ರೈತರ ಕೋಟ್ಯಂತರ ಬೆಲೆ ಬಾಳುವ ಭೂಮಿಯನ್ನು ವ್ಯವಹಾರಕ್ಕಿಟ್ಟು ರೈತರ ಮಕ್ಕಳಿಗೆ ವಿದೇಶಿ ಕಂಪನಿಗಳಲ್ಲಿ ಉದ್ಯೋಗ ಕೊಡಿಸುವುದಾದರೆ ಇದರಿಂದ ರೈತರಿಗೆ ಮಾತ್ರವಲ್ಲ ಇಡೀ ದೇಶಕ್ಕೆ ನಷ್ಟ.  ಕೃಷಿ ಕ್ಷೇತ್ರ ದೇಶದ ಜೀವ.ಅದನ್ನು ಆತ್ಮಹತ್ಯೆಯತ್ತ ಎಳೆಯದೆ, ಆತ್ಮಜ್ಞಾನದೆಡೆಗೆ, ಸ್ವಾವಲಂಬನೆ ಕಡೆಗೆ ಎಳೆಯುವುದೆ ಧರ್ಮ. ಭಾರತ ಭೂಮಿಯ ಪವಿತ್ರತೆ ಭಾರತೀಯರ ಜ್ಞಾನದಲ್ಲಿದೆ.

ವಿದೇಶಿಗಳ ವಿಜ್ಞಾನಕ್ಕೆ ಬಿಟ್ಟು ಕೊಟ್ಟರೆ, ಅಧರ್ಮಕ್ಕೆ ತಕ್ಕಂತೆ ಪ್ರತಿಫಲ ಅನುಭವಿಸುವುದೂ ರೈತರೆ. ಭೂತಾಯಿ ಸೇವೆ ಮಾಡಲು ಪ್ರಕೃತಿಯನ್ನು ಸದ್ಬಳಕೆ ಮಾಡಿಕೊಳ್ಳಲು, ನಮ್ಮ ಜೀವನ ನಾವು ನಡೆಸಲು, ನಮ್ಮ ಆಂತರಿಕ ಶಕ್ತಿ ಬೆಳೆಸಿಕೊಳ್ಳಲು, ನಮ್ಮ ಮೂಲ ಗುರು ಹಿರಿಯರು ತಿಳಿಸಿ ನಡೆದ ದಾರಿ ಧರ್ಮ, ಕರ್ಮದಿಂದ ಮಾತ್ರ ಸಾಧ್ಯ.

ಯಾವಾಗ, ಮಧ್ಯವರ್ತಿಗಳ ತಂತ್ರಜ್ಞಾನಕ್ಕೆ ಭೂಮಿ ಬಿಟ್ಟು ಹೊರ ನಡೆದರೂ ಭೂಮಿ ಋಣ ತೀರಿಸಲು ಜೀವ ಮತ್ತೆ ಬರಲೇಬೇಕು.
ಬಡತನವಿರುವುದು ಸತ್ಯ ತಿಳಿಸದ ಶಿಕ್ಷಣದಲ್ಲಿಯೇ, ಸರ್ಕಾರ ದಿಂದ ರೈತರಲ್ಲ.ರೈತರಿಂದ ಸರ್ಕಾರ ನಡೆದಿದೆ. ರೈತರಾದವರು ಮಧ್ಯವರ್ತಿಗಳ ಮುಖ್ಯ ಉದ್ದೇಶ ಅರ್ಥ ಮಾಡಿಕೊಳ್ಳಲು ವಿದ್ಯೆಯ ಅಗತ್ಯವಿಲ್ಲ. ಜ್ಞಾನದ ಅಗತ್ಯವಿದೆ ನಿಜವಾದ ಸುಖ,ಶಾಂತಿ,ನೆಮ್ಮದಿ, ತೃಪ್ತಿ, ಆರೋಗ್ಯವಿರೋದು ಹಿಂದಿನವರ ನಡೆ ನುಡಿ, ಧರ್ಮ,ಸತ್ಯ,ಸಂಸ್ಕೃತಿ, ಕರ್ಮದಲ್ಲಿ.

- Advertisement -

ಮರಳಿ ಪರಮಾತ್ಮನೆಡೆಗೆ ಹೋಗಬೇಕಾದ ಜೀವವನ್ನು ಹೊರಗೆಳೆದು ವ್ಯವಹಾರ ನಡೆಸಿರುವ ಮಧ್ಯವರ್ತಿಗಳ ಬಗ್ಗೆ ಎಚ್ಚರವಾಗಿದ್ದರೆ ಮುಂದಿನ ರೈತರ ಭವಿಷ್ಯದಲ್ಲಿ ಉತ್ತಮ ಬದಲಾವಣೆ ಸಾಧ್ಯವಿದೆ.

ಒಂದು ರೂಪಾಯಿಯ ಸಾಲ ತೀರಿಸಲು ಎರಡು ರೂಪಾಯಿ ದುಡಿದು ಗಳಿಸಬೇಕಿದೆ. ಕೋಟ್ಯಂತರ ಬೆಲೆಬಾಳುವ ಭೂಮಿ ಕೊಟ್ಟು ಕೋಟಿ ರೂ. ಗಳಿಸಿದರೂ ಹಣ ಶಾಶ್ವತವಲ್ಲ. ಭೂಮಿ ಶಾಶ್ವತ. ಶಾಶ್ವತವಾಗಿದ್ದ ರೈತರ ಜ್ಞಾನಶಕ್ತಿಯನ್ನು ದುರುಪಯೋಗ ಪಡಿಸಿಕೊಂಡರೆ ಅನ್ನದಾತರಿಲ್ಲದೆ ಮನುಕುಲವೆ ನರಳಬೇಕಲ್ಲವೆ?

ನಮ್ಮ ಸುತ್ತಮುತ್ತಲಿನ ರೈತರನ್ನು ಗೌರವಿಸಿ,ಅವರ ಸಮಸ್ಯೆಗಳಿಗೆ ಧಾರ್ಮಿಕವಾಗಿ ಪರಿಹಾರ ತಿಳಿಸಿ, ಅವರ ಆರ್ಥಿಕ ಸ್ಥಿತಿಯನ್ನು ಧಾರ್ಮಿಕ ಸತ್ಯದಿಂದ ತಿಳಿಸಿ ಬೆಳೆಸಿದರೆ, ಒಗ್ಗಟ್ಟು ಮೂಡುತ್ತದೆ. ಅದು ಬಿಟ್ಟು ನಗರದೆಡೆಗೆ, ಸರ್ಕಾರದ ಸಾಲದ ದವಡೆಗೆ ಮಧ್ಯವರ್ತಿಗಳು ತಮ್ಮ ಸ್ವಾರ್ಥ ಸುಖಕ್ಕಾಗಿ ಬಳಸಿಕೊಂಡರೆ ಎಲ್ಲರಿಗೂ ಕಷ್ಟ ನಷ್ಟ ತಪ್ಪಿದ್ದಲ್ಲ. ಮೊದಲು ಮಾನವರಾಗಿ,ಎಲ್ಲರ ಮನಸ್ಸನ್ನರಿತು ಅವರ ಜ್ಞಾನವನ್ನು ಗುರುತಿಸಿ,ಅದಕ್ಕೆ ತಕ್ಕಂತೆ ಶಿಕ್ಷಣ ನೀಡಿ ಜೀವನದ ಮುಖ್ಯಗುರಿಯನ್ನು ಅರ್ಥ ಮಾಡಿಸುವುದು ಧಾರ್ಮಿಕ ವರ್ಗದವರ ಧರ್ಮವಾಗಿತ್ತು.

ಆದರೆ ಈಗ ಎಷ್ಟೋ ಜನರಿಗೆ ಧರ್ಮ ಎಂದರೆ ದೇವರನ್ನು ಬೇಡೋದು ದೇವರ ಹಿಂದೆ ನಡೆಯೋದು, ದೇವರಿಗೆ ಸೇವೆ ಮಾಡೋದು.

ಹಾಗಾದರೆ ದೇವರು ಎಲ್ಲಿರುವರು? ನಾವು ಯಾರ ಹಿಂದೆ ನಡೆದೆವು? ಯಾರ ಸೇವೆ ಮಾಡಿದ್ದೇವೆ, ಯಾರ ಪರ ನಿಂತಿದ್ದೇವೆ?

ನಮ್ಮ ಹಿಂದಿನ ಗುರು ಹಿರಿಯರ ಪರವೆ? ಭೂ ತಾಯಿಯ ಪರವೆ? ಪ್ರಕೃತಿಯ ಪರವೆ? ಧರ್ಮದ ಪರವೆ? ಅಥವಾ ಇವೆಲ್ಲ ಬಿಟ್ಟು ಮಧ್ಯವರ್ತಿಗಳ ಪರ ನಿಂತು ಸರ್ಕಾರದ ಕಡೆಗೆ ನಡೆದೆವೆ?

ಸ್ವಾವಲಂಬನೆ ಗೆ ನಮ್ಮ ಮೂಲ ಶಿಕ್ಷಣದಲ್ಲಿಯೇ ಸಾತ್ವಿಕಜ್ಞಾನ ಬೇಕು. ಸ್ವತಂತ್ರ ಜ್ಞಾನ ಬೆಳೆಸಬೇಕು.

ಸರಳ ಜೀವನ ಬೇಕು. ಸರ್ಕಾರವಲ್ಲ.ಮಧ್ಯವರ್ತಿ ಗಳಂತೂ ಬೇಡವೆ ಬೇಡ. ಕಾರಣ, ಮಧ್ಯವರ್ತಿಗಳ ಜೀವನ ನಡೆದಿರುವುದೆ ಬಡವರ ಸಹಕಾರದಿಂದ ಎನ್ನಬಹುದಷ್ಟೆ.

ಚಿಂತನೆಯನ್ನು ಆತ್ಮಜ್ಞಾನದಿಂದ ನಡೆಸಿದಾಗಲೆ ರೈತರಿಗೆ ನಮ್ಮ ಈ ಸ್ಥಿತಿಗೆ ಕಾರಣ ತಿಳಿಯಬಹುದು.

ವಿದೇಶಿ ವಿಜ್ಞಾನಿಗಳಿಗೆ ಭೂಮಿ ಕೊಟ್ಟು ಹಣಪಡೆದರೆ ಮುಕ್ತಿ ಸಿಗೋದಿಲ್ಲ. ಪರಾವಲಂಬನೆಯ ಜೀವನದಲ್ಲಿ ಶಾಂತಿ,ಸುಖವಿಲ್ಲ. ಋಣಮುಕ್ತರಾಗಲು ಭೂ ಸೇವೆಯೇ ಶ್ರೇಷ್ಠ.

ನಿಜವಾದ ಶ್ರೀಮಂತರು ರೈತರು. ಆದರೆ, ಇವರನ್ನು ಸಾಲಕ್ಕೆ ಬಲಿಯಾಗಿಸಿ ಶಕ್ತಿಹೀನರಾಗಿಸಿ ಆಳಿ ಅಳಿಸುತ್ತಿರುವುದೆ ಅಧರ್ಮವೆನ್ನಬಹುದು.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!