ಸವದತ್ತಿ – ಸವದತ್ತಿ ಪುರಸಭೆ ಸಿಬ್ಬಂದಿಗಳು ಹಾಗೂ ಪೊಲೀಸ ಇಲಾಖೆಯವರು ಪಟ್ಟಣದ ಪುರಸಭೆ ಮುಂದುಗಡೆ ಹಾಗೂ ಕಡಕೋಳ ಬ್ಯಾಂಕ್ ವೃತ್ತಗಳಲ್ಲಿ ನಿಂತು ಮಾಸ್ಕ್ ಇಲ್ಲದೆ ವಾಹನ ಚಲಾಯಿಸುತ್ತದ್ದವರ ಮೇಲೆ ಮತ್ತು ಪಾದಚಾರಿಗಳಿಗೂ ಮಾಸ್ಕ್ ಇಲ್ಲದೆ ತಿರುಗಾಡುತ್ತಿದ್ದವರಿಗೆ ಒಬ್ಬರಿಗೆ 100 ರೂಪಾಯಿಗಳ ದಂಡ ವಿಧಿಸುತ್ತಿದ್ದಾರೆ.
ಈ ಕುರಿತು ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಎಮ್ ಚಿನ್ನಪ್ಪನವರ, ಮಹಾಮಾರಿ ಕೊರೋನಾ ರೋಗವನ್ನು ನಿಯಂತ್ರಿಸುವುದು ಆ ರೋಗ ಹರಡದಂತೆ ನೋಡಿಕೋಳ್ಳುವುದು ಎಲ್ಲರ ಕರ್ತವ್ಯವಾಗಿದೆ ಕೇವಲ ಅಧಿಕಾರಿಗಳಿಗೆ ಪೊಲೀಸ ಸಿಬ್ಬಂದಿಗಳಿಗಷ್ಟೇ ಅಲ್ಲ ಪ್ರತಿಯೊಬ್ಬರೂ ತಮ್ಮ ತಮ್ಮ ಜೀವವನ್ನು ಕಾಪಾಡಿಕೊಳ್ಳುವುದು ತಮ್ಮದೇ ಕರ್ತವ್ಯವಾಗಿದೆ ಈ ಕುರಿತು ಈಗಾಗಲೇ ಸರಕಾರ ಸಾಕಷ್ಟು ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನೂ ಮಾಡುತ್ತಲೇ ಇದೆ ಮಹಾಮಾರಿ ಕೋರೋನಾ ದಿಂದ ಸಾಕಷ್ಟು ಜನ ಸಾವನ್ನಪ್ಪಿದ್ದಾರೆ ಆದ್ದರಿಂದ ಇನ್ನು ಮುಂದಾದರೂ ಸಾರ್ವಜನಿಕರು ಸರಕಾರದ ಕೋವೀಡ್ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಆದ್ದರಿಂದ ಪಟ್ಟಣದಲ್ಲಿ ಮುಖಕ್ಕೆ ಮಾಸ್ಕ ಇಲ್ಲದೆ ತಿರುಗಾಡುತ್ತಿದ್ದವರಿಗೆ ಬೀಳುತ್ತಿದೆ 100 ರೂಪಾಯಿ ದಂಡ ಹಾಗೂ ಗುರುವಾರ ರಂದು 24 ಜನರಿಗೆ 2 ಸಾವಿರದ 4 ನೂರು ರೂಪಾಯಿಗಳನ್ನು ದಂಡವಿಧಿಸಲಾಗಿದೆ ಎಂದು ತಿಳಿಸಿದರು