ಸಾಗರ ಖಂಡ್ರೆ ಗೆದ್ದಿದ್ದು ಕೇವಲ ಮುಸ್ಲಿಮರ ಮತಗಳಿಂದ ಅಂತೆ !

Must Read

ಬೀದರ – ಮುಸ್ಲಿಮ್ ಸಮುದಾಯದ ಮತಗಳಿಂದ ಬೀದರ ಜಿಲ್ಲಾ ಉಸ್ತುವಾರಿ ಸಚಿವರ ಪುತ್ರ ಸಾಗರ ಖಂಡ್ರೆಗೆ ಗೆಲುವಾಗಿದೆ ಎಂದು ಸಚಿವ ಜಮೀರ ಅಹ್ಮದ ಖಾನ್ ಹೇಳಿರುವ ಹೇಳಿಕೆ ವಿವಾದ ಸೃಷ್ಟಿಸಿದೆ.

ನಗರದ ವಕ್ಫ್ ಅದಾಲತ್ ವೇದಿಕೆಯಲ್ಲಿ ಮಾತನಾಡುತ್ತಿದ್ದ ಜಮೀರ್ ಖಾನ್, ಮುಸ್ಲಿಮರ ಮತಗಳಿಂದ ಸಾಗರ ಖಂಡ್ರೆಯವರಿಗೆ ಲೋಕಸಭೆಯಲ್ಲಿ ಗೆಲುವು ಸಿಕ್ಕಿದೆ ಎಂದು ಹೇಳಿದ್ದು ಹಿಂದೂ ಮತದಾರರನ್ನು ಕೆರಳಿಸಿದೆ. ನಾವೇನು ಖಂಡ್ರೆಗೆ ಮತ ಹಾಕೇ ಇಲ್ಲವೆ ಎಂದು ಹಿಂದೂ ಸಮುದಾಯ ಕೇಳುತ್ತಿದೆ.

ಜಮೀರ ಅಹ್ಮದ ಖಾನ್ ರ ಈ ಹೇಳಿಕೆ ಜಿಲ್ಲಾದ್ಯಂತ ಭಾರೀ ವಿವಾದ ಸೃಷ್ಟಿಸಿದ್ದು ಹಿಂದೂ ಮುಸ್ಲಿಮರಲ್ಲಿ ಕಂದಕವನ್ನೂ ಸೃಷ್ಟಿ ಮಾಡಿದೆಯೆನ್ನಲಾಗಿದೆ. ಹಿಂದೂ ಮತದಾರರಲ್ಲಿ ಅಸಮಾಧಾನವನ್ನೂ ಹುಟ್ಟುಹಾಕಿದೆ.

ಈ ಬಗ್ಗೆ ಜಿಲ್ಲಾದ್ಯಂತ ಚರ್ಚೆ ಶುರುವಾಗಿದ್ದು ಕಾಂಗ್ರೆಸ್ ನ ಮುಸ್ಲಿಮ್ ತುಷ್ಟೀಕರಣ ನೀತಿಯಿಂದಾಗಿ ಕಾಂಗ್ರೆಸ್ ದೇಶದಲ್ಲಿ ಹೀನಾಯವಾಗಿ ಸೋಲುತ್ತಿದೆಯೆಂಬ ಅಭಿಪ್ರಾಯ ಜನತೆಯಲ್ಲಿ ಕೇಳಿಬರುತ್ತಿದೆ.

ವರದಿ : ನಂದಕುಮಾರ ಕರಂಜೆ, ಬೀದರ

Latest News

ರೈತರ ಕುರಿತ ನಿರ್ಲಕ್ಷ್ಯ : ಇದು ಜನಪರ ಸರ್ಕಾರದ ಲಕ್ಷಣವಲ್ಲ

ಕಳೆದ ಎಂಟು ದಿನಗಳಿಂದ ಒಂದು ರಾಜ್ಯ ಹೆದ್ದಾರಿ ( ನಿಪ್ಪಾಣಿ-ಮುಧೋಳ ) ಬಂದ್ ಆಗಿದೆ. ದೂರ ಪ್ರಯಾಣಕ್ಕೆ ಹೋಗುವ ಸರ್ಕಾರಿ ಬಸ್ ಗಳು ಬಂದ್ ಆಗಿವೆ....

More Articles Like This

error: Content is protected !!
Join WhatsApp Group