ದಿನಾಂಕ 14 ರಂದು ವಿಜಯಪುರದಲ್ಲಿ ನಡೆದ ಕರುನಾಡು ಸಾಹಿತ್ಯೋತ್ಸವ ಮತ್ತು ಕೊಲ್ಹಾರ,ಬಸವನ ಬಾಗೇವಾಡಿ ಮತ್ತು ವಿಜಯಪುರ ಜಿಲ್ಲಾ ಘಟಕಗಳ ಉದ್ಘಾಟನಾ ಮಹೋತ್ಸವ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ಕಾ.ಹು.ಬಿಜಾಪೂರ ವಹಿಸಿದ್ದರು. ಫ. ಗು. ಸಿದ್ದಾಪೂರ ಮತ್ತು ಹಿರಿಯ ಹೆಸರಾಂತ ಸಾಹಿತಿ ಗೊಳಸಂಗಿ ಯವರು ಉಪಸ್ಥಿತರಿದ್ದು ನೂರಾರು ಜನ ಪಾಲ್ಗೊಂಡ ಯಶಸ್ವೀ ಕಾರ್ಯಕ್ರಮಕ್ಕೆ ಸಾಕ್ಷೀಭೂತರಾದರು.
ಬಸವಣ್ಣನವರ ಆಸ್ಥಾನದಿಂದ ಆರಂಭಗೊಂಡ ಮೆರವಣಿಗೆ ಜ್ಞಾನ ಭಾರತಿ ಶಾಲೆಯವರೆಗೆ ಸುಂದರ ವಿದ್ಯಾರ್ಥಿ ಲೆಜೀಮ್ ಕವಾಯತುನೊಂದಿಗೆ ಕನ್ನಡದ ಜಯಘೋಷಗಳ ನಾದದೊಂದಿಗೆ ಬಹಳ ಅರ್ಥಪೂರ್ಣವಾಗಿ ನಡೆಯಿತು.
ಕಾರ್ಯಕ್ರಮದ ಸಂಪೂರ್ಣ ಯಶಸ್ಸಿಗೆ ಕಾರಣರಾದ ಶ್ರೀಯುತ ಅಸ್ಲಂ ಶೇಕ್ ನರಸಲಗಿ,ಮತ್ತು ಅವರ ಬಳಗಕ್ಕೆ ರಾಜ್ಯಸಮಿತಿಯು ತುಂಬು ಹೃದಯದ ಅಭಿನಂದನೆಗಳು ಎಂದು ರಾಜ್ಯಾಧ್ಯಕ್ಷರು.
ಗುಡಿಬಂಡೆ ಫಯಾಜ್ ಅಹ್ಮದ್ ಖಾನ್ ತಿಳಿಸಿದ್ದಾರೆ.